ಒಂದಾಗಲಿದೆ 'ಕರಿಯ' ಜೋಡಿ: ದರ್ಶನ್ ಅಭಿಮಾನಿಗಳಿಗಿದು ನಿದ್ದೆ ಕೆಡಿಸುವ ಸುದ್ದಿ.!
'ಕರಿಯ'... ಈ ಸಿನಿಮಾ ಇಂದಿಗೂ ದರ್ಶನ್ ಅಭಿಮಾನಿಗಳ ಮನಸ್ಸಿನಲ್ಲಿ ಕುಳಿತಿರುವ ಸಿನಿಮಾ. ಈ ಸಿನಿಮಾದಲ್ಲಿನ ದರ್ಶನ್ ಅವರ ಖದರ್ ಇಂದಿಗೂ ಮರೆಯುವ ಹಾಗಿಲ್ಲ. ಈಗ ಇದೇ 'ಕರಿಯ' ಜೋಡಿ ಮತ್ತೆ ಒಂದಾಗಲಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ಪ್ರೇಮ್ ಒಟ್ಟಗೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ. 'ಕರಿಯ' ಸಿನಿಮಾದ ನಂತರ ತಮ್ಮ ತಮ್ಮ ಸಿನಿಮಾಗಳಲ್ಲಿ ಬಿಜಿಯಾಗಿದ್ದ ಈ ಜೋಡಿ 14 ವರ್ಷಗಳ ನಂತರ ಮತ್ತೆ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ. ಅಂದಹಾಗೆ, 'ಹೆಬ್ಬುಲಿ' ಸಿನಿಮಾದ ನಿರ್ಮಾಪಕ ಉಮಾಪತಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

ಸದ್ಯ ನಿರ್ದೇಶಕ ಪ್ರೇಮ್ ತಮ್ಮ ಮಹತ್ವಾಕಾಂಕ್ಷೆಯ ಸಿನಿಮಾ 'ದಿ ವಿಲನ್' ಶೂಟಿಂಗ್ ನಲ್ಲಿ ತಲ್ಲೀನರಾಗಿದ್ದಾರೆ. ಇತ್ತ ದರ್ಶನ್ 'ತಾರಕ್', ಆ ಬಳಿಕ 'ಕುರುಕ್ಷೇತ್ರ' ಚಿತ್ರವನ್ನು ಮಾಡಲಿದ್ದಾರೆ. ಇವೆಲ್ಲ ಮುಗಿದ ಬಳಿಕ ದರ್ಶನ್-ಪ್ರೇಮ್ ಚಿತ್ರದ ಮಾತು.

ದರ್ಶನ್ ಹಾಗೂ ಪ್ರೇಮ್ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಈ ಇಬ್ಬರೂ ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ ನಿರ್ಮಾಪಕ ಉಮಾಪತಿ ಈ ಬಗ್ಗೆ ಮಾತನಾಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ದರ್ಶನ್ ಮತ್ತು ಪ್ರೇಮ್ ಕಾಂಬಿನೇಶನ್ ನಲ್ಲಿ ಮತ್ತೊಂದು ಸಿನಿಮಾ ಬರಲಿದೆ. ದರ್ಶನ್ ಫ್ಯಾನ್ಸ್ ಗಂತೂ ಈ ಸುದ್ದಿ ನಿದ್ದೆ ಕೆಡಿಸಲಿದೆ.


Click it and Unblock the Notifications











