ಸುದೀಪ್ ಮಾಡಿದ ಈ ಕೆಲಸಕ್ಕೆ ಬೇಸರ ವ್ಯಕ್ತಪಡಿಸಿದ ರಕ್ಷಿತಾ
Recommended Video
ಬಾಲಿವುಡ್ ನ ಬಹುನಿರೀಕ್ಷೆಯ ದಬಂಗ್-3 ಸಿನಿಮಾದ ಚಿತ್ರೀಕರಣಕ್ಕೆ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಇಂದಿನಿಂದ(ಮೇ-4)ಹಾಜರಾಗಿದ್ದಾರೆ. ಸುದೀಪ್ ಯಾವಾಗಿನಿಂದ 'ದಂಬಂಗ್-3' ಅಡ್ಡಾ ಸೇರಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಕಳೆದ ಕೆಲವು ತಿಂಗಳುಗಳಿಂದ ಅಭಿಮಾನಿಗಳಲ್ಲಿತ್ತು.
ಇಂದಿನಿಂದ 'ದಬಂಗ್-3' ಚಿತ್ರತಂಡ ಸೇರಿಕೊಂಡಿದ್ದಾರೆ ಸುದೀಪ್. ವಿಶೇಷ ಅಂದ್ರೆ ಕಿಚ್ಚ ಒಬ್ಬರೆ 'ದಬಂಗ್-3' ಸೆಟ್ ಗೆ ಹೋಗಿಲ್ಲ. ಜೊತೆಗೆ ಜೋಗಿ ಪ್ರೇಮ್ ಅವರನ್ನು ಕರೆದುಕೊಂಡು ಹೋಗಿದಾಗಿ ಹೇಳಿದ್ದಾರಂತೆ. ಪ್ರೇಮ್ ಅವರನ್ನು ಮಾತ್ರ ಸೆಟ್ ಗೆ ಕರೆದುಕೊಂಡು ಹೋಗುತ್ತಿರುವುದು ರಕ್ಷಿತಾ ಬೇಜಾರಿಗೆ ಕಾರಣವಾಗಿದೆ. ಬೇಸರವನ್ನು ಸಾಮಾಜಿಕ ಜಾಲತಾಣದ ಮೂಲಕ ಹೊರಹಾಕಿದ್ದಾರೆ ಕ್ರೇಜಿ ಕ್ವೀನ್.

'ದಬಂಗ್-3' ಚಿತ್ರೀಕರಣಕ್ಕೆ ಹೋಗುತ್ತಿರುವ ಕಿಚ್ಚನಿಗೆ ವಿಶ್ ಮಾಡಿರುವ ರಕ್ಷಿತಾ, "ಪ್ರೇಮ್ ಅವರನ್ನು ಮಾತ್ರ ಕರೆದಿದ್ದೀರಿ ನನ್ನನು ಕರೆದಿಲ್ಲ. ನನ್ನ ನೆಚ್ಚಿನ ನಟ ಸಲ್ಮಾನ್ ಖಾನ್" ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಪ್ರೇಮ್ ಕೂಡ ಸುದೀಪ್ ಜೊತೆ ಫೋಟೋ ಶೇರ್ ಮಾಡುವ ಮೂಲಕ ಗೆಳೆಯ ಕಿಚ್ಚನಿಗೆ ಶುಭಾಶಯ ಕೋರಿದ್ದಾರೆ.
ಪ್ರೇಮ್ ಮತ್ತು ಸುದೀಪ್ ಇತ್ತೀಚಿಗಷ್ಟೆ 'ದಿ ವಿಲನ್' ಚಿತ್ರದಲ್ಲಿ ಒಟ್ಟಿಗೆ ಕೆಲಸಮಾಡಿದ್ದರು. ಇಬ್ಬರು ಉತ್ತಮ ಗೆಳೆಯರು. ಅದೆ ಸ್ನೇಹ ಈಗ ಪ್ರೇಮ್ ಅವರನ್ನು 'ದಬಂಗ್-3' ಚಿತ್ರೀಕರಣ ಸೆಟ್ ವರೆಗು ಕರೆದುಕೊಂಡು ಹೋಗಿದೆ.
ಮೊದಲ ಬಾರಿಗೆ ಸಲ್ಮಾನ್ ಖಾನ್ ಮತ್ತು ಸುದೀಪ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರು ಸೂಪರ್ ಸ್ಟಾರ್ಸ್ ಒಟ್ಟಿಗೆ ಒಂದೆ ಸಿನಿಮಾದಲ್ಲಿ ಅಭಿನಯಿಸುತ್ತಿರುವುದನ್ನ ನೋಡಲು ಚಿತ್ರಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ಸಲ್ಮಾನ್ ಖಾನ್ ಗೆ ವಿಲನ್ ಆಗಿ ಅಬ್ಬರಿಸಲಿದ್ದಾರೆ.


Click it and Unblock the Notifications











