ಹೊಸ ವರ್ಷಕ್ಕೆ ಪ್ರೇಮ್ ಹೊಸ ಸಿನಿಮಾ, ಇದು 'ವಿಲನ್' ಮೀರಿಸುವ ಚಿತ್ರ.!

Recommended Video

ಹೊಸ ವರ್ಷಕ್ಕೆ ಹೊಸ ಸಿನಿಮಾದ ಸುದ್ದಿ ತಿಳಿಸಲಿದ್ದಾರೆ ನಿರ್ದೇಶಕ ಪ್ರೇಮ್ | FILMIBEAT KANNADA

ಸುದೀಪ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ 'ದಿ ವಿಲನ್' ಎಂಬ ಮೆಗಾ ಸಿನಿಮಾ ಮಾಡಿದ್ದ ನಿರ್ದೇಶಕ ಪ್ರೇಮ್ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಹವಾ ಮಾಡಿದ್ದರು. ಅದರಂತೆ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.

'ದಿ ವಿಲನ್' ಯಶಸ್ಸಿನ ನಂತರ ನಿರ್ದೇಶಕ ಪ್ರೇಮ್ ಯಾವ ಸಿನಿಮಾ ಮಾಡಲಿದ್ದಾರೆ, ಯಾವಾಗ ಆರಂಭಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳನ್ನ ಕಾಡ್ತಿದೆ. ಆ ಕುತೂಹಲಕ್ಕೀಗ ಬ್ರೇಕ್ ಹಾಕಿದ್ದಾರೆ.

ಮುಂದಿನ ಚಿತ್ರದ ಬಗ್ಗೆ ಈಗಾಗಲೇ ಒಂದು ಹಂತದ ಮಾಹಿತಿ ಬಿಟ್ಟುಕೊಟ್ಟಿರುವ ಪ್ರೇಮ್, ಹೊಸ ವರ್ಷಕ್ಕೆ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ. ಇದು ವಿಲನ್ ಸಿನಿಮಾವನ್ನ ಮೀರಿಸುವಂತಿರುತ್ತೆ ಎಂಬುದು ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಯಾವುದು ಆ ಸಿನಿಮಾ? ಮುಂದೆ ಓದಿ....

ಹೊಸ ವರ್ಷಕ್ಕೆ ಘೋಷಣೆ

ಹೊಸ ವರ್ಷಕ್ಕೆ ಘೋಷಣೆ

'ದಿ ವಿಲನ್' ಸಿನಿಮಾ 50 ದಿನಗಳನ್ನ ಪೂರೈಸಿದ ಖುಷಿಯನ್ನ ಹಂಚಿಕೊಂಡ ನಿರ್ದೇಶಕ ಪ್ರೇಮ್, ಚಿತ್ರದ ಯಶಸ್ಸಿಗೆ ಕಾರಣವಾದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ''ನನ್ನ ಮುಂದಿನ ಸಿನಿಮಾವನ್ನ ಹೊಸ ವರ್ಷದ ಪ್ರಯುಕ್ತ ಅನೌನ್ಸ್ ಮಾಡ್ತೀನಿ'' ಎಂದು ಹೇಳಿದ್ದಾರೆ.

ಯಾವುದು ಪ್ರೇಮ್ ಹೊಸ ಸಿನಿಮಾ

ಯಾವುದು ಪ್ರೇಮ್ ಹೊಸ ಸಿನಿಮಾ

ಪ್ರೇಮ್ ನಿರ್ದೇಶನ ಮಾಡಲಿರುವ ಮುಂದಿನ ಚಿತ್ರ ಯಾವುದು ಎಂಬುದು ಸದ್ಯಕ್ಕೆ ಮಾಹಿತಿ ಇಲ್ಲ. ಆದ್ರೆ, ದಿ ವಿಲನ್ ಸಿನಿಮಾ ಪ್ರೀ-ರಿಲೀಸ್ ವೇಳೆ ಅವರೇ ಹೇಳಿರುವಂತೆ ''ಏಳು ಭಾಷೆಯಲ್ಲಿ ಮೂಡಿಬರಲಿರುವ, ಏಳು ಭಾಷೆಯ ನಟರನ್ನೊಳಗೊಂಡು ಬಿಗ್ ಬಜೆಟ್ ಚಿತ್ರವೊಂದನ್ನ ಆರಂಭಿಸಿಲಿದ್ದೇನೆ'' ಎಂದು ತಿಳಿಸಿದ್ದರು. ಬಹುಶಃ ಅದೇ ಪ್ರಾಜೆಕ್ಟ್ ಗೆ ಈಗ ಚಾಲನೆ ಕೊಡ್ತಾರಾ ಕಾದುನೋಡಬೇಕು.

ಸ್ಕ್ರಿಪ್ಟ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು

ಸ್ಕ್ರಿಪ್ಟ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು

ಪ್ರೇಮ್ ಹೇಳಿದ್ದ ಪ್ರಕಾರ, ಆ ಸಿನಿಮಾವನ್ನ ಸಿ.ಆರ್ ಮನೋಹರ್ ಅವರೇ ನಿರ್ಮಾಣ ಮಾಡಲಿದ್ದಾರೆ. ಮೂರು ಭಾಷೆಯ ನಟರು ಕಥೆಯನ್ನ ಒಪ್ಪಿಕೊಂಡಿದ್ದಾರೆ. ಉಳಿದವರಿಗೆ ಸ್ಕ್ರಿಪ್ಟ್ ಕಳುಹಿಸಿ ಮಾತುಕತೆ ನಡೆಯುತ್ತಿದೆ. ಏಳು ಭಾಷೆಯ ದಿಗ್ಗಜ ನಟರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಮುಂದಿನ ವರ್ಷ ಆರಂಭ ಮಾಡ್ತೀನಿ ಎಂದು ಹೇಳಿಕೊಂಡಿದ್ದರು.

ದರ್ಶನ್ ಸಿನಿಮಾ ಏನಾಯ್ತು

ದರ್ಶನ್ ಸಿನಿಮಾ ಏನಾಯ್ತು

ಇನ್ನು ರಕ್ಷಿತಾ ಪ್ರೇಮ್ ಅವರೇ ಟಿವಿ ಶೋನಲ್ಲಿ ಹೇಳಿದ್ದ ಪ್ರಕಾರ, ಕರಿಯ ಚಿತ್ರದ ನಂತರ ದರ್ಶನ್ ಜೊತೆ ಪ್ರೇಮ್ ಇನ್ನೊಂದು ಸಿನಿಮಾ ಮಾಡಲಿದ್ದಾರೆ ಎಂದಿದ್ದರು. ಬಟ್, ಈ ಸಿನಿಮಾದ ಕಥೆ ಈಗ ಎಲ್ಲಿಯವರೆಗೂ ಬಂದಿದೆ. ಬಹುಶಃ ಈ ಪ್ರಾಜೆಕ್ಟ್ ಏನಾದರೂ ಅನೌನ್ಸ್ ಮಾಡ್ತಾರಾ ಎಂಬ ಕುತೂಹಲ ಕಾಡುತ್ತಿದೆ.

ರಕ್ಷಿತಾ ಸಹೋದರ ಚಿತ್ರ

ರಕ್ಷಿತಾ ಸಹೋದರ ಚಿತ್ರ

ಇನ್ನು ರಕ್ಷಿತಾ ಪ್ರೇಮ್ ಅವರ ಸಹೋದರ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದು, ಸಕಲ ಸಿದ್ದತೆ ನಡೆಯುತ್ತಿದೆ. ದಿ ವಿಲನ್ ಸಿನಿಮಾದ ಒಂದು ಹಾಡಿನಲ್ಲಿ ರಕ್ಷಿತಾ ಸಹೋದರ ಕೂಡ ಕಾಣಿಸಿಕೊಂಡಿದ್ದರು. ಸಹೋದರನನ್ನು ಲಾಂಚ್ ಮಾಡುವ ಸಿನಿಮಾ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.

'ಗಾಂಧಿಗಿರಿ'ಯಲ್ಲಿ ಪ್ರೇಮ್

'ಗಾಂಧಿಗಿರಿ'ಯಲ್ಲಿ ಪ್ರೇಮ್

ಈ ಮಧ್ಯೆ ಅರ್ಧದಲ್ಲಿಯೇ ಚಿತ್ರೀಕರಣ ನಿಲ್ಲಿಸಿದ್ದ 'ಗಾಂಧಿಗಿರಿ' ಸಿನಿಮಾ ಮತ್ತೆ ಆರಂಭವಾಗಿದೆ. ಪ್ರೇಮ್ ಮತ್ತು ಅರುಂಧತಿ ನಾಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನ ರಘು ಹಾಸನ್ ನಿರ್ದೇಶನ ಮಾಡ್ತಿದ್ದಾರೆ. ರಾಗಿಣಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಹೊಸ ವರ್ಷಕ್ಕೆ ನಿರೀಕ್ಷಿಸಿ

ಹೊಸ ವರ್ಷಕ್ಕೆ ನಿರೀಕ್ಷಿಸಿ

ಇಷ್ಟೆಲ್ಲಾ ಕುತೂಹಲ ಪ್ರೇಮ್ ಮುಂದಿನ ಸಿನಿಮಾ ಬಗ್ಗೆ ಕಾಡುತ್ತಿದೆ. ಆದ್ರೆ, ಈ ಚಿತ್ರಗಳ ಪೈಕಿ ಯಾವುದಾದರೂ ಓಕೆ ಆಗುತ್ತಾ ಅಥವಾ ಇದನ್ನೆಲ್ಲ ಬಿಟ್ಟು ಬೇರೆ ಯಾವುದಾದರೇ ಸಿನಿಮಾ ಟೇಕ್ ಆನ್ ಆಗುತ್ತಾ ಹೊಸ ವರ್ಷದಲ್ಲಿ ನೋಡೋಣ.

More from Filmibeat

English summary
After the success of the villain movie, director Prem will announce his next project in New Year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X