'ನೀನು ನನ್ನ ಜೀವನದ ಉಡುಗೊರೆ': ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್
ಸ್ಯಾಂಡಲ್‌ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ರಕ್ಷಿತಾ ಅವರ ಜನುಮದಿನದ ಪ್ರಯುಕ್ತ ಕ್ರೇಜಿ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.
ರಕ್ಷಿತಾ ಅವರ ಹುಟ್ಟುಹಬ್ಬವನ್ನು ಪತಿ ಪ್ರೇಮ್ ಬಹಳ ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪ್ರೇಮ್, ಕ್ರೇಜಿ ಕ್ವೀನ್‌ಗೆ ವಿಶ್ ಮಾಡಿದ್ದಾರೆ.
''ನಿನ್ನನ್ನು ಹೇಗೆಂದು ಬಣ್ಣಿಸಲಿ. ಸ್ನೇಹಿತೆ, ಪ್ರೇಯಸಿ, ಪತ್ನಿ ಅಥವಾ ತಾಯಿ? ನನಗೆ ಪದಗಳೇ ಸಿಗುತ್ತಿಲ್ಲ. ನಿಜ ಹೇಳುತ್ತೇನೆ, ನೀನು ನನ್ನ ಜೀವನದಲ್ಲಿ ಸಿಕ್ಕ ಉಡುಗೊರೆ. ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿ ಕ್ವೀನ್. ಸದಾ ನಗುತ್ತೀರು'' ಎಂದು ಪ್ರೇಮ್ ಟ್ವೀಟ್ ಮಾಡಿದ್ದಾರೆ.

ಇದರ ಜೊತೆ 'ಏಕ್ ಲವ್ ಯಾ' ಸಿನಿಮಾದ ಎರಡನೇ ಹಾಡು ಯುಗಾದಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ರಕ್ಷಿತಾ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಟ್ವಿಟ್ಟರ್‌ನಲ್ಲಿ ಶುಭಕೋರಿದ್ದಾರೆ. ''ಹುಟ್ಟುಹಬ್ಬದ ಶುಭಾಶಯಗಳು. ಪ್ರತಿವರ್ಷ ಜನ್ಮದಿನಗಳು ಬರುತ್ತವೆ, ಆದರೆ ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿ ಕ್ವೀನ್'' ಎಂದಿದ್ದಾರೆ.
ರಕ್ಷಿತಾ ಅವರು 2017ರಲ್ಲಿ 'ತಾಯಿಯ ಮಡಿಲು' ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. ನಿರ್ದೇಶಕ ಪ್ರೇಮ್ ಜೊತೆ ವಿವಾಹ ಆದ್ಮೇಲೆ ನಟನೆಯಿಂದ ದೂರು ಉಳಿದರು. ಇದೀಗ, ರಕ್ಷಿತಾ ಸಹೋದರ ರಾಣಾ ನಟಿಸುತ್ತಿರುವ 'ಏಕ್ ಲವ್ ಯಾ' ಚಿತ್ರದ ಹಾಡೊಂದರಲ್ಲಿ ರಕ್ಷಿತಾ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ.


Click it and Unblock the Notifications











