ಈ ವಾರ ಸರ್ಜಾ ಫ್ಯಾಮಿಲಿ ಚಿತ್ರಗಳ ಜೊತೆ 'ರಘುವೀರ'ನ ಎಂಟ್ರಿ

By Bharath Kumar

ಈ ವಾರ ಸ್ಯಾಂಡಲ್ ವುಡ್ ನಲ್ಲಿ ಅರ್ಜುನ್ ಸರ್ಜಾ ಅವರ ಫ್ಯಾಮಿಲಿ ಚಿತ್ರಗಳದ್ದೇ ಸೌಂಡ್. ಒಂದು ಕಡೆ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ಅಭಿನಯದ ಮೊಟ್ಟ ಮೊದಲ ಕನ್ನಡ ಸಿನಿಮಾ ತೆರೆಕಾಣುತ್ತಿದ್ರೆ, ಮತ್ತೊಂದೆಡೆ ಚಿರಂಜೀವಿ ಸರ್ಜಾ ಅಭಿನಯದ 'ಸಂಹಾರ' ಸಿನಿಮಾ ಬಿಡುಗಡೆಯಾಗುತ್ತಿದೆ.

ಒಂದು ಪಕ್ಕಾ ಲವ್ ಸ್ಟೋರಿ ಸಿನಿಮಾ, ಇನ್ನೊಂದೆಡೆ ಥ್ರಿಲ್ಲಿಂಗ್ ಸಿನಿಮಾ. ಈ ಎರಡು ಚಿತ್ರಗಳ ಜೊತೆಗೆ ಮೂರನೇ ಚಿತ್ರವಾಗಿ 'ರಾಜಾಹುಲಿ' ಖ್ಯಾತಿ ಹರ್ಷ ಅಭಿನಯದ 'ರಘುವೀರ' ಸಿನಿಮಾ ಕೂಡ ತೆರೆಕಾಣುತ್ತಿದೆ.

ಹಾಗಿದ್ರೆ, 'ಪ್ರೇಮ ಬರಹ' ಚಿತ್ರದ ವಿಶೇಷತೆ ಏನು? 'ಸಂಹಾರ' ಹಾಗೂ 'ರಘುವೀರ' ಚಿತ್ರಗಳ ಬಗ್ಗೆ ಒಂದು ಸಣ್ಣ ವರದಿ ಇಲ್ಲಿದೆ ಓದಿ.....

ಅರ್ಜುನ್ ಮಗಳ ಕನ್ನಡ ಸಿನಿಮಾ

ಅರ್ಜುನ್ ಮಗಳ ಕನ್ನಡ ಸಿನಿಮಾ

'ಪ್ರೇಮ ಬರಹ' ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಮಗಳು ಅಭಿನಯದ ಕನ್ನಡದ ಮೊದಲ ಸಿನಿಮಾ ಎನ್ನುವುದು ವಿಶೇಷ. ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಯುವ ನಟ ಚಂದನ್ ನಾಯಕನಾಗಿದ್ದಾರೆ. ಸ್ವತಃ ಅರ್ಜನ್ ಸರ್ಜಾ ಅವರೇ ಈ ಚಿತ್ರವನ್ನ ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಕನ್ನಡ ಮಯತ್ತು ತಮಿಳಿನಲ್ಲಿ ಸಿನಿಮಾ ತೆರೆಕಾಣುತ್ತಿದೆ.

ಸರ್ಜಾ ಫ್ಯಾಮಿಲಿ ಜೊತೆ ಡಿ-ಬಾಸ್

ಸರ್ಜಾ ಫ್ಯಾಮಿಲಿ ಜೊತೆ ಡಿ-ಬಾಸ್

ಪ್ರೇಮ ಬರಹ ಚಿತ್ರದ ಹಾಡೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸರ್ಜಾ ಫ್ಯಾಮಿಲಿಯ ನಟರ ಜೊತೆ ಹೆಜ್ಜೆ ಹಾಕಿದ್ದಾರೆ. ಆಂಜನೇಯನ ಕುರಿತಾದ ಹಾಡೊಂದರಲ್ಲಿ ದರ್ಶನ್, ಚಿರು ಸರ್ಜಾ, ಧ್ರುವ ಸರ್ಜಾ, ಅರ್ಜುನ್ ಸರ್ಜಾ ಡ್ಯಾನ್ಸ್ ಮಾಡಿದ್ದಾರೆ.

ಚಿರು ಸರ್ಜಾ 'ಸಂಹಾರ'

ಚಿರು ಸರ್ಜಾ 'ಸಂಹಾರ'

ಮಾವನ ಮಗಳ ಚಿತ್ರವನ್ನ ಸ್ವಾಗತಿಸುವ ಸಂಭ್ರಮದಲ್ಲಿದ್ದ ಚಿರು ಸರ್ಜಾ, ತಮ್ಮ ಚಿತ್ರವನ್ನ ಅದೇ ದಿನ ಬಿಡುಗಡೆ ಮಾಡುತ್ತಿದ್ದಾರೆ. ಗುರುದೇಶಪಾಂಡೆ ನಿರ್ದೇಶನದ ಸಂಹಾರ ಚಿತ್ರವೂ ಇದೇ ವಾರ ತೆರೆಗೆ ಬರ್ತಿದೆ. ಚಿತ್ರದಲ್ಲಿ ಚಿರು ಸರ್ಜಾ ಕುರುಡನ ಪಾತ್ರ ನಿರ್ವಹಿಸಿದ್ದು, ಹರಿಪ್ರಿಯಾ ನಾಯಕಿಯಾಗಿದ್ದಾರೆ.

ಹರ್ಷನ 'ರಘುವೀರ'

ಹರ್ಷನ 'ರಘುವೀರ'

ಅಚ್ಚಪ್ಪ ಮೂವೀಸ್ ಲಾಂಛನದಲ್ಲಿ ಧೇನು ಅಚ್ಚಪ್ಪ ಅವರು ನಿರ್ಮಿಸಿರುವ `ರಘುವೀರ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ರಾಜಾಹುಲಿ' ಖ್ಯಾತಿಯ ಹರ್ಷ ಮತ್ತು ಧೇನು ಅಚ್ಚಪ್ಪ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಆಕ್ಷನ್ ಕಮ್ ಲವ್ ಸ್ಟೋರಿ

ಆಕ್ಷನ್ ಕಮ್ ಲವ್ ಸ್ಟೋರಿ

ಜಿಮ್ ರಘು ಅವರು ಬರೆದಿರುವ ಕಥೆಗೆ ಸೂರ್ಯಸತೀಶ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಲಯಕೋಕಿಲ ಸಂಗೀತ ನೀಡಿರುವ ಈ ಚಿತ್ರಕ್ಕೆ ವಿಜಯ್ ಅವರ ಛಾಯಾಗ್ರಹಣವಿದೆ. ಇನ್ನುಳಿದಂತೆ ಸ್ವಾಮಿನಾಥನ್, ರೋಬೊ ಗಣೇಶ್, ಮೈತ್ರಿ ಜಗದೀಶ್, ಗಜೇಂದ್ರ, ಅಂಜಲಿ, ಅಪೂರ್ವಶ್ರೀ, ಚಿಕ್ಕಹೆಜ್ಜಾಜಿ ಮಹದೇವ್ ಮುಂತಾದವರು ನಟಿಸಿದ್ದಾರೆ.

More from Filmibeat

English summary
arjun sarja directional movie Prema baraha, chiranjeevi sarja starrer samhara, and harsha starrer raghuveera movies are releasing on february 9th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X