»   » ಈ ದೀಪಾವಳಿಗೆ ಅರ್ಜುನ್ ಸರ್ಜಾ ಮಗಳ ಕಡೆಯಿಂದ ಭರ್ಜರಿ ಗಿಫ್ಟ್ ಸಿಗುತ್ತೆ!

ಈ ದೀಪಾವಳಿಗೆ ಅರ್ಜುನ್ ಸರ್ಜಾ ಮಗಳ ಕಡೆಯಿಂದ ಭರ್ಜರಿ ಗಿಫ್ಟ್ ಸಿಗುತ್ತೆ!

Posted By:
Subscribe to Filmibeat Kannada

ನಟ ಅರ್ಜುನ್ ಸರ್ಜಾ ತಮ್ಮ ಮಗಳು ಐಶ್ವರ್ಯ ಸರ್ಜಾ ರವರಿಗಾಗಿ 'ಪ್ರೇಮ ಬರಹ' ಸಿನಿಮಾವನ್ನು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಭರ್ಜರಿಯಾಗಿ ಶೂಟಿಂಗ್ ಮುಗಿಸಿರುವ ಈ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ.

ಅಂದಹಾಗೆ, ಈ ಸಿನಿಮಾವನ್ನು ಅರ್ಜುನ್ ಸರ್ಜಾ ತಾವೇ ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿದ್ದಾರೆ. ಕಿರುತೆರೆಯ ನಟ ಚಂದನ್ ಈ ಸಿನಿಮಾದಲ್ಲಿ ನಾಯಕನಾಗಿದ್ದಾರೆ. ಇದು ಪಕ್ಕಾ ಲವ್ ಸ್ಟೋರಿ ಚಿತ್ರವಾಗಿದ್ದು, ಚಂದನ್ ಮತ್ತು ಐಶ್ವರ್ಯ ಜೋಡಿ ಚಿತ್ರದಲ್ಲಿ ಸಖತ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

'Prema Baraha' movieLikely to release on this diwali
Dhruva Sarja thanked Challenging Star Darshan on Twitter

ಸದ್ಯ 'ಪ್ರೇಮ ಬರಹ' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಚಿತ್ರ ರೆಡಿ ಆಗಿದೆ. ಅರ್ಜುನ್ ಸರ್ಜಾ ಅವರ ಮಗಳ ಮೊದಲ ಕನ್ನಡ ಸಿನಿಮಾ ಎಂಬ ಕಾರಣಕ್ಕೆ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ ಇದೇ ದೀಪಾವಳಿಗೆ ತೆರೆಗೆ ಬರಲಿದೆ.

English summary
Arjun Sarja's 'Prema Baraha' movie isLikely to release on this diwali. The movie features Aishwarya arjun and Chandan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada