»   » ತಾಳಿದವನು ಬಾಳಿಯಾನು, ಶಿವಧ್ವಜ್‌ಗಿದು ಗೊತ್ತು.

ತಾಳಿದವನು ಬಾಳಿಯಾನು, ಶಿವಧ್ವಜ್‌ಗಿದು ಗೊತ್ತು.

Posted By: Super
Subscribe to Filmibeat Kannada

'ಜಗವೇ ಪ್ರೇಮದ ಉಯ್ಯಾಲೆ!"ನಿರ್ದೇಶಕ ಸುರೇಶ್‌ರಾಜ್‌ ಮಾತಿಗೆ ತಕ್ಕಂತೆ ಪ್ರೇಮ ಅತ್ತಿಂದಿತ್ತ ಇತ್ತಿಂದತ್ತ ಜೋಕಾಲಿಯಂತೆ ಓಡಾಡುತ್ತಿದ್ದರು. ಚಿತ್ರದುದ್ದಕ್ಕೂ ಓಡಾಟ. ಅವರ ಪಾತ್ರವೇ ಅಂಥದ್ದು : ವಿಜಯಶಾಂತಿ, ಮಾಲಾಶ್ರೀ ಮಾಡುತ್ತಿದ್ದರಲ್ಲ- ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆ, ಈಗ ಪ್ರೇಮಾ ಸರದಿ. ಪಾತ್ರಕ್ಕೆ ತಕ್ಕಂತೆ ಪ್ರೇಮಾ ಪೋಷಾಕನ್ನೂ ಧರಿಸಿದ್ದರು. ಮೊಳಕಾಲಲ್ಲಿ ಹರಿದ ಜೀನ್ಸ್‌ , ಟೀ ಷರ್ಟು, ಮೇಲೊಂದು ಬಟನ್‌ ಹಾಕದ ಷರ್ಟು.
ಚಿತ್ರದ ಹೆಸರು 'ಪ್ರೇಮ."

ತಮ್ಮ ಹೆಸರಿನ ಚಿತ್ರದಲ್ಲಿಯೇ ನಟಿಸುವ ಮೂಲಕ ಉಪೇಂದ್ರ, ಶ್ರುತಿ ಸಾಲಿಗೆ ಪ್ರೇಮ ಸೇರಿದಂತಾಯಿತು. ಅಂದಹಾಗೆ, ಮಾರಾಮಾರಿ ಪಾತ್ರ ಪ್ರೇಮಾಗೆ ಹೊಸದು. ಇದೂ ಒಂದು ರೀತಿ ಚೆನ್ನಾಗಿಯೇ ಇದೆ. ಆದರೆ, ಇಂಥ ಪಾತ್ರಗಳಿಗೆ ಬ್ರಾಂಡ್‌ ಆಗೊಲ್ಲ ಅಂದರು.

ಹೊಡೆದಾಟ, ಪ್ರೀತಿಗಾಗಿ ಹೊಡೆದಾಟ, ಹಾಡು ಎಲ್ಲವೂ ಇರುವ ಮಸಾಲೆ ಚಿತ್ರವಿದು. ಪ್ರೇಮಾಳಿಗೆಂದೇ ಎರಡು ಹೊಡೆದಾಟ ಮೀಸಲು. ಉಳಿದ ಹೊಡೆದಾಟಗಳು ಪ್ರೇಮಾ ಜೊತೆ ಇರುವ ನಾಲ್ವರು ಹುಡುಗರ ಪಾಲು. ನಾಯಕನಾಗಿ ಶಿವಧ್ವಜ್‌ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಮಾ ಚಿತ್ರದ ಹೈಲೈಟ್‌ ಆದ್ದರಿಂದ, ನಾಯಕಿ ಎಂದು ಛೇಡಿಸಿದರೂ ಶಿವಧ್ವಜ್‌ ಬೇಜಾರು ಮಾಡಿಕೊಳ್ಳುವುದಿಲ್ಲ. ಸಾಗಬೇಕಾದ ದಾರಿಗಿದು ನಾಂದಿ ಅನ್ನುವುದು ಅವರ ನಂಬಿಕೆ.

ಕಮರ್ಷಿಯಲ್‌ ದೃಷ್ಟಿ ಇಟ್ಟುಕೊಂಡೇ ಈ ಸಿನಿಮಾಕ್ಕೆ ಕೈ ಹಾಕಿದೆವು. ನಾವಿನ್ನೂ ಹೊಸಬರು, ಆ ಕಾರಣದಿಂದಲೇ ರಿಸ್ಕ್‌ ತಗೊಳ್ಳೋಕಾಗೊಲ್ಲ ಎಂದು ಪರಿಚಯ ಮಾಡಿಕೊಂಡವರು- ನಿರ್ಮಾಪಕ ರವಿ. ಈ ವರ್ಷದಿಂದ ಅವರು ಸಿನಿಮಾ ಕುರಿತು ಪ್ಲಾನ್‌ ಮಾಡುತ್ತಿದ್ದರಂತೆ. ಕಾಲ ಈಗ ಕೂಡಿ ಬಂದಿದೆ. ಪ್ರೇಮ ದಕ್ಕಿದೆ. ಹಣ್ಣಾಗಿ ಫಲಿಸುತ್ತದಾ ನೋಡಬೇಕು!

ಮೈಸೂರು ಮಲ್ಲಿಗೆ- ಓಂ ನಂಥ ವಿಭಿನ್ನ ಸಿನಿಮಾಗಳಿಗೆ ದುಡಿದಿರುವ ಗೌರೀಶಂಕರ್‌ 'ಪ್ರೇಮ" ಸಿನಿಮಾದ ಛಾಯಾಗ್ರಾಹಕರು. ನೂರು ಚಿತ್ರಗಳ ಗಡಿಯಲ್ಲಿರುವ ಗೌರೀಶಂಕರ್‌, ನಾನು ವೇಸ್ಟ್‌ ಆಗುವಂಥದ್ದನ್ನು ಶೂಟ್‌ ಮಾಡೊಲ್ಲ. ಆತುರ ಬುದ್ಧಿಯೂ ನನ್ನದಲ್ಲ ಅನ್ನುತ್ತಾರೆ. ಕಲ್ಯಾಣ್‌ ಸುಮಧರ ಗೀತೆಗಳನ್ನು ಹೊಸೆದಿದ್ದಾರಂತೆ.

ಪರ್ವದಲ್ಲಿ ಸೋತರೂ ಪ್ರೇಮ ನಾಗಾಲೋಟ ಮುಂದುವರೆದಿದೆ ಅನ್ನುವುದಕ್ಕೆ 'ಪ್ರೇಮ" ಸಾಕ್ಷಿ.

ಪ್ರೇಮಾ, ಮದುವೆ ಆಗೋದು ಯಾವಾಗ?
ಪ್ರಶ್ನೆ ಕೇಳಿದ ತಕ್ಷಣ ಸಿನಿಮಾ ಪಾತ್ರದಂತೆಯೇ ಪ್ರೇಮಾ ಸಿಡಿದೆದ್ದರು. ನೀವು ಸುದ್ದಿಗಾರರು ಏನೇನೋ ಬರೀತೀರಿ. ಅಂಥದ್ದನ್ನೆಲ್ಲ ನಾನು ಓದಲ್ಲ. ಮದುವೆಯಾಗುವ ಒಂದು ತಿಂಗಳ ಮುಂಚೇನೆ, ನನ್ನ ಮದುವೆಯಾಗೊ ಹುಡುಗನನ್ನ ನಿಮಗೆ ಪರಿಚಯಿಸ್ತೀನಿ ಎನ್ನುವುದರೊಂದಿಗೆ ತಣ್ಣಗಾದರು.
ಮದುವೆ ಯಾವಾಗ? ಉತ್ತರ ಸಿಗಲಿಲ್ಲ.

English summary
Prema in action role!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada