»   » ‘ಪ್ರೇಮಪರ್ವ’ ದಲ್ಲಿ ಜಮೀನ್ದಾರ್ರು ವಿಷ್ಣು ಮೂಲೆಗುಂಪು?

‘ಪ್ರೇಮಪರ್ವ’ ದಲ್ಲಿ ಜಮೀನ್ದಾರ್ರು ವಿಷ್ಣು ಮೂಲೆಗುಂಪು?

Subscribe to Filmibeat Kannada

ಶಿಲ್ಪ ಶ್ರೀನಿವಾಸ್‌ರನ್ನು ಅಳಿಸಿದ ಹಾಗೂ ಕೋತಿಗಳು ಸಿನಿಮಾದ ಪಿವಿಸಿ ಪೈಪ್‌ ಖ್ಯಾತಿಯ ಪ್ರೇಮಾಗೆ ಈಗ ಮುಟ್ಟಿದ್ದೆಲ್ಲ ಚಿನ್ನ ಅನ್ನುವಂಥ ಕಾಲ.

ಇನ್ನೇನು ಪ್ರೇಮಾ ಜಮಾನ ಮುಗೀತು; ಅನು, ರೇಖಾ, ಛಾಯಾ ರಭಸದಲ್ಲಿ ಎಲ್ಲಿಯ ಪ್ರೇಮ ಛಾಯೆ ಅನ್ನುವ ಮಾತುಗಳೆಲ್ಲ ಸುಳ್ಳು ಮಾಡಿರುವ ಪ್ರೇಮಾ ಪಿವಿಸಿ ಪೈಪ್‌ನಂತೆಯೇ ಎತ್ತರಕ್ಕೆ ಬೆಳೆಯುತ್ತಿದ್ದಾರೆ. ಅಂದಹಾಗೆ, ಇದು ಯಶಸ್ಸಿನ ಎತ್ತರ! ಪ್ರೇಮಾ ಯಶಸ್ಸಿನ ಶಿಖರದ ಹತ್ತಿರ ಹತ್ತಿರ.

ಪ್ರೇಮಾಗೆ ಸಿಕ್ಕಿರುವ ಲೇಟೆಸ್ಟ್‌ ಯಶಸ್ಸೆಂದರೆ ಸುನೀಲ್‌ ಕುಮಾರ್‌ ದೇಸಾಯಿ ಅವರ ಹೊಗಳಿಕೆಯ ಗಿಫ್ಟು . ನಟಿ ಪ್ರೇಮಾ ಕನ್ನಡ ಚಿತ್ರರಂಗಕ್ಕೊಂದು ಗಿಫ್ಟು ಎಂದು ದೇಸಾಯಿ ಮನತುಂಬಿ ಹೊಗಳಿದ್ದಾರೆ. ಪರ್ವ ಚಿತ್ರದಲ್ಲಿನ ಪ್ರೇಮಾ ಅಭಿನಯಕ್ಕೆ ದೂರ್ವಾಸರ ಅಪರಾವತಾರ ದೇಸಾಯಿ ಕ್ಲೀನ್‌ ಬೋಲ್ಡು !

‘ಪ್ರೇಮಾ ಅದ್ಭುತವಾಗಿ ನಟಿಸಿದ್ದಾರೆ. ಪರ್ವ ಚಿತ್ರವೂ ಅದ್ಭುತವಾಗಿ ಮೂಡಿಬಂದಿದೆ’ ಎನ್ನುತ್ತಾರೆ ದೇಸಾಯಿ. ನಾಯಕಿಯನ್ನು ಹೊಗಳಿ ಅಟ್ಟಕ್ಕೇರಿಸಿರುವ ದೇಸಾಯಿ, ನಾಯಕ ವಿಷ್ಣು ಅಭಿನಯದ ಕುರಿತು ಚಕಾರ ಎತ್ತಿಲ್ಲ . ವಿಷ್ಣು ಅವರನ್ನು ನಟನೆಯಲ್ಲಿ ಪ್ರೇಮಾ ಮೀರಿಸಿದ್ದಾರೆ ಎನ್ನುತ್ತಿದೆ ಗಾಂಧಿನಗರ.

ಪರ್ವ ಶೂಟಿಂಗ್‌ ಸಮಯದಲ್ಲಿ ಪ್ರೇಮಾ ಅವರು ವಿಪರೀತ ಇನ್‌ವಾಲ್ವ್‌ ಆಗಿದ್ದನ್ನು , ವಿಷ್ಣು ವಿಪರೀತ ಅನ್ಯ ಮನಸ್ಕರಾಗಿ ದೇಸಾಯಿ ದಾಳಿಯ ಕುರಿತು ಅಲವತ್ತುಕೊಂಡಿದ್ದು ಎಲ್ಲರಿಗೂ ಗೊತ್ತು . ದೇಸಾಯಿ ಅವರು ಮೊಬೈಲ್‌ ಫೋನ್‌ನಲ್ಲಿ ನೀಡಿದ ಸೂಚನೆಗನುಸಾರ ಪ್ರೇಮಾ ನಗರದ ಜನದಟ್ಟಣೆಯ ರಸ್ತೆಯಾಂದರಲ್ಲಿ ಹುಚ್ಚಿಯಂತೆ ಓಡಿದ್ದರು; ವಿಷ್ಣು ಸ್ಫೂರ್ತಿಗಾಗಿ ಕಿರಿಯ ನಟರನ್ನೆಲ್ಲ ನೆನಪಿಸಿಕೊಂಡಿದ್ದರು.

ಅದೆಲ್ಲ ಕಳೆದ ಕಥೆ. ಪರ್ವ ಈಗ ಸಿದ್ಧವಾಗಿದೆ. ತೆರೆಗೆ ಬರುವ ಮುನ್ನವೇ ಪ್ರೇಮಾಗೆ ಹೊಗಳಿಕೆಯೂ ಸಿಕ್ಕಿದೆ. ಉಳಿದುದನ್ನು ತೆರೆಯ ಮೇಲೆ ನೋಡಿ!

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada