twitter
    For Quick Alerts
    ALLOW NOTIFICATIONS  
    For Daily Alerts

    ಯಾರೀ ಪ್ರೇಮಾಚಾರಿ...

    By *ಸತ್ಯ ನಾರಾಯಣ
    |

    ಕನ್ನ-ಡ ಚಿತ್ರ-ರಂ-ಗ-ಕ್ಕೆ ಸಂಬಂ-ಧಿ-ಸಿ-ದ ಸಮ-ಸ್ತ ಚಟು-ವ-ಟಿ-ಕೆ-ಗ-ಳು ಮತ್ತೆ ಶುರು-ವಾ-ಗ-ಬೇ-ಕು ಅನ್ನು-ವ ಮೂಲ-ಕ ಬಿ.ಸಿ. ಪಾಟೀಲ್‌ ಮತ್ತೆ ಸುದ್ದಿ-ಯ-ಲ್ಲಿ-ದ್ದಾ-ರೆ. ಇಡೀ ಚಿತ್ರ-ರಂ-ಗ-ವೇ ರಾಜ್‌ ಅಪ-ಹರ-ಣ-ದ ನಂತ-ರ ಸ-ಮೂಹ ಸನ್ನಿ-ಗೊ-ಳ-ಗಾ-ಗಿ-ರು-ವ ಈ ಸಂದ-ರ್ಭದ-ಲ್ಲಿ ಅದ-ರಾ-ಚೆ ನಿಂತು ಮಾತಾ-ಡು-ವ ಧೈರ್ಯ ತೋರಿ-ದ-ವ-ರು ಪಾಟೀ-ಲ್‌ ಮಾತ್ರ. ಇದ-ರಿಂ-ದ ಉಂಟಾ-ಗು-ವ -ಅಪಾಯ-ದ -ಅರಿವು ಅವ-ರಿ-ಗಿ-ತ್ತೆ ಅನ್ನು-ವು-ದು ಬೇರೆ ಪ್ರಶ್ನೆ. ಯಾಕೆಂ-ದ-ರೆ ಯೋಚಿ-ಸಿ, ವಿವೇ-ಚಿ-ಸಿ ಮಾತಾ-ಡು-ವ ಕಲೆ ಪಾಟೀ-ಲ್‌-ಗೆ ಸಿದ್ಧಿ-ಸಿ-ಲ್ಲ . ಅವ-ರ-ದೇ-ನಿ-ದ್ದ-ರೂ ಇನ್‌-ಸ್ಟಂ-ಟ್‌ ರಿಯಾ-ಕ್ಷ-ನ್‌.

    ಈ ಪ್ರವೃ-ತ್ತಿ-ಯ-ನ್ನು ಕೆಲ-ವ-ರು ಹುಂಬ-ತ-ನ ಎಂದೂ, ಕೆಲ-ವ-ರು ನೇರ-ವಂ-ತಿ-ಕೆ ಎಂದೂ ಬಣ್ಣಿ-ಸು-ತ್ತಾ-ರೆ. ಮಾತಿ-ನ ಕೈಗೆ ಬುದ್ಧಿ ಕೊಡು-ವು-ದು ಅನ್ನುವ ನಾಣ್ಣು-ಡಿ ಚಾಲ್ತಿ-ಗೆ ಬಂದಿ-ರು-ವು--ದು ಇಂಥ-ವ-ರಿಂ-ದ ಇರ-ಬ-ಹು-ದು. ಅದೇ-ನೇ ಇದ್ದ-ರೂ, ಪಾಟೀ-ಲ್‌-ರ ಈ ಗುಣ-ವೇ ಅವ-ರಿ-ಗೆ ಸಾಕ-ಷ್ಟು ಪ್ರಚಾ-ರ ತಂದು-ಕೊ-ಟ್ಟಿ-ದೆ. ಸ್ನೇಹಿ-ತ-ರ-ನ್ನು ಮತ್ತು ಶತ್ರು-ಗ-ಳ-ನ್ನು ಸರಿ-ಸ-ಮಾ-ನ-ವಾ-ಗಿ ಸೃಷ್ಟಿ-ಸಿ-ದೆ.

    ಪಾಟೀ-ಲ-ರಿ-ಗೆ ನಟ-ನೆ ಗೊತ್ತಿ-ಲ್ಲ. ತೆರೆ-ಯ-ಲ್ಲಾ-ದ-ರೂ ಅಷ್ಟೆ, ತೆರೆ-ಮ-ರೆ-ಯ-ಲ್ಲಾ-ದ-ರೂ ಅಷ್ಟೆ , ನಟಿ-ಸು-ವ ವಿದ್ಯೆ ಅವ-ರಿ-ಗೆ ಸಿದ್ಧಿಯಾ-ಗಿ-ಲ್ಲ . ಹಾಗಂ-ತ ಅವ-ರ ಮುಂದೆ ಹೇಳು-ವ ಧೈರ್ಯ ಅವ-ರ ಸ್ನೇಹಿ-ತ-ರಿ-ಗೂ ಇ-ಲ್ಲ . ಇ-ನ್ನೆ-ಲ್ಲಿ ಪೊಲೀ-ಸ್‌ ಭಾಷೆ ಬಳ-ಸು-ತ್ತಾ-ರೋ ಅನ್ನು-ವ ಭಯ-ವಿ-ರ-ಬ-ಹು-ದು! ನಟ-ನೆ ಗೊತ್ತಿ-ಲ್ಲ-ದೇ ಇರು-ವು-ದ-ರಿಂ--ದ-ಲೇ ಅವ--ರೊಬ್ಬ ಪ್ರಾಮಾ-ಣಿ-ಕ, ನಿತ್ಯೋ-ತ್ಸಾ-ಹಿ ಹಾಗೂ ಸ್ನೇಹ-ಪ-ರ ಜೀವಿ-ಯಾ-ಗಿ-ಯೇ ಉಳಿ-ದಿ-ದ್ದಾ-ರೆ ಅಂದ-ರೂ ತಪ್ಪ-ಲ್ಲ .

    ದಾವ-ಣ-ಗೆರೆ-ಯಾ-ಚೆ-ಯ ಹಳ್ಳಿ-ಯಿಂ-ದ ಬಂದಿ-ರು-ವ ಭೀಮ-ಪ್ಪ ಚನ್ನ-ಬ-ಸ-ಪ್ಪ ಪಾಟೀ-ಲ್‌-ಗೆ ತಮ್ಮ-ನ್ನು ಹಳ್ಳಿ-ಹೈ-ದ ಎಂದು -ಗು-ರ್ತಿ-ಸಿ-ಕೊ-ಳ್ಳು-ವು-ದ-ಕ್ಕೆ ಹೆಮ್ಮೆ. ಪಾಟೀ-ಲ್‌ ನಡೆ-ನು-ಡಿ-ಯ-ಲ್ಲಿ ಎದ್ದು-ಕಾ-ಣಿ-ಸು-ವ ಒರ-ಟು-ತ-ನ-ಕ್ಕೆ ಅವ-ರ ಹಳ್ಳಿ ಹಿನ್ನೆ-ಲೆ ಜೊತೆ-ಗೆ, 20 ವರ್ಷ-ಗ-ಳ ಪೊಲೀ-ಸ್‌ ಇಲಾ-ಖೆ-ಯ ಸೇವೆ-ಯೂ ಕಾರ-ಣ-ವಾ-ಗಿ-ರ-ಬ-ಹು-ದು. ಇನ್ಸ್‌-ಪೆ-ಕ್ಟ-ರ್‌ ಆಗಿ ನಾಲ್ಕೂ-ರ ನೀರು ಕುಡಿ-ದು ಬೆಂಗ-ಳೂ-ರಿ-ಗೆ ಬರು-ವ ಹೊತ್ತಿ-ಗೆ ಪಾಟೀ-ಲ್‌ ಒಳ-ಗಿ-ದ್ದ ನಟ ಕನ-ವ-ರಿ-ಸ-ತೊ-ಡ-ಗಿ-ದ್ದ. ಒಂದು ಕಾಲ-ದ-ಲ್ಲಿ ಗದಾ-ಯು-ದ್ಧ ನಾಟ-ಕ-ದ-ಲ್ಲಿ ಭೀಮ-ನ ಪಾತ್ರ ಮಾಡಿ-ದ್ದು ಪದೇ-ಪ-ದೇ ನೆನ-ಪಾ-ಗ-ತೊ-ಡ-ಗಿ-ತು. ಆದ-ರೆ ಸಿನಿ-ಮಾ-ದ-ಲ್ಲಿ ಅವ-ರಿ-ಗೆ ಮುಖ್ಯ-ಪಾ-ತ್ರ ಕೊ-ಡು-ವ ಧೈರ್ಯ-ವ-ನ್ನು ಯಾರೂ ತೋರ-ಲಿ-ಲ್ಲ . ಒಂದೆ-ರ-ಡು ಪುಡಿ-ಪಾ-ತ್ರ-ಗ-ಳ-ನ್ನು ಮಾಡಿ ನಿರಾಶ-ರಾ-ಗು-ವ ಹೊತ್ತಿ-ಗೆ ಭೇಟಿ-ಯಾ-ದ-ವ-ರು ಸುನಿ-ಲ್‌-ಕು-ಮಾ-ರ್‌ ದೇಸಾ-ಯಿ. ಅವ-ರು ಕೂಡ ತರ್ಕ, ಉತ್ಕ-ರ್ಷ-ದ ನಂತ-ರ ಖಾಲಿ ಕುಳಿ-ತಿ-ದ್ದ-ರು. ಇಬ್ಬ-ರು ಉತ್ತ-ರ-ಕ-ರ್ನಾ-ಟ-ಕ-ದ ಮಂದಿ ಒಂದೆ-ಡೆ- ಸೇ-ರಿ-ದಾ-ಗ ಏನಾ-ಗ-ಬೇ-ಕಿ-ತ್ತೋ ಅದೇ ಆಯಿ-ತು. ನಿಷ್ಕ-ರ್ಷ ಚಿತ್ರ ಸಿದ್ಧ-ವಾ-ಯಿ-ತು. ಪಾ-ಟೀ-ಲ್‌ ತಮ್ಮ ಖರ್ಚ-ಲ್ಲೇ -ನ-ಟ-ನಾ-ದ-ರು.

    ಪಾಟೀ-ಲ್‌ ಅವ-ರ-ನ್ನು ದೊಡ್ಡ ರೀತಿ-ಯ-ಲ್ಲಿ ಪರಿ-ಚ-ಯಿ-ಸಿ-ದ ಚಿತ್ರ-ವ-ದು. ದೇಸಾ-ಯಿ- ಪಾಟೀ-ಲ್‌-ರ ಕ-ಲ್ಲುಮು-ಖ-ವ-ನ್ನೇ ಅನು-ಕೂ-ಲ-ವ-ನ್ನಾ-ಗಿ ಪರಿ-ವ-ರ್ತಿ-ಸಿ-ದ-ರು. ಅವ-ರು ನಿ-ರ್ಭಾ-ವು-ಕ-ರಾ-ಗಿ ಕಾಣಿ-ಸಿ-ಕೊಂ-ಡಿ-ದ್ದೇ ಚಿ-ತ್ರ-ಕ್ಕೆ ಪ್ಲಸ್‌ ಪಾಯಿಂ-ಟ್‌ ಆಯಿ-ತು.

    ನಿಷ್ಕ-ರ್ಷ ಚಿತ್ರ ಗೆದ್ದ-ರೂ ಪಾಟೀಲ್‌ ಕೈಗೆ ದುಡ್ಡು ಬರ-ಲಿ-ಲ್ಲ . ಯಾಕೆಂ-ದ-ರೆ ಸಿನಿ-ಮಾ ವ್ಯಾಪಾ-ರ-ದ ವ್ಯಾಕ-ರ-ಣ ಅವ-ರಿ-ಗೆ ಗೊತ್ತಿ-ರ-ಲಿ-ಲ್ಲ . ಆದ-ರೆ ಈ ಚಿತ್ರ-ದ ಯಶ-ಸ್ಸು ಪಾಟೀಲ್‌-ಗೆ ಬೇ-ರೆ-ಯೇ ರೀತಿ-ಯ-ಲ್ಲಿ ಅನು-ಕೂ-ಲ ಮಾಡಿ-ಕೊ-ಟ್ಟಿ-ದ್ದು ಸು-ಳ್ಳ-ಲ್ಲ . ಪೊಲೀ-ಸ್‌ ಇಲಾ-ಖೆ-ಯ-ಲ್ಲಿ ಅವ-ರ ವರ್ಚ-ಸ್ಸು ಜಾ-ಸ್ತಿ-ಯಾ-ಯಿ-ತು.ಆದ-ರ ಪರಿ-ಣಾ-ಮ-ವಾ-ಗಿ ಯಶ-ವಂ-ತ-ಪು-ರ ಪೊಲೀ-ಸ್‌ ಠಾಣೆ-ಗೆ ಇನ್ಸ್‌-ಪೆ-ಕ್ಟ-ರ್‌ ಆಗಿ-ಬಿ-ಟ್ಟ-ರು. ತನ್ಮೂ-ಲ-ಕ ಆ ಠಾಣೆ-ಯ ಮೇಲೆ ಕಣ್ಣಿ-ಟ್ಟಿ-ದ್ದ ಇತ-ರೇ ಮಹ-ತ್ವಾ-ಕಾಂ-ಕ್ಷಿ ಅ--ಧಿಕಾ-ರಿ-ಗ-ಳ ಕ-ಣ್ಣು ಕೆಂಪ-ಗಾ-ಯಿ-ತು.

    ನಿಷ್ಕ-ರ್ಷ ಚಿತ್ರ ಶತ-ದಿ-ನೋ-ತ್ಸ-ವ ಆಚರಿ-ಸು-ವ ಹೊ-ತ್ತಿ-ಗೆ ಪಾಟೀ-ಲ್‌- ದೇಸಾ-ಯಿ ಸಂಬಂ-ಧ ಹಳ-ಸಿ ಹೋಗಿ-ತ್ತು. ದೇಸಾ-ಯಿ-ಗೆ ಬುದ್ಧಿ-ಕ-ಲಿ-ಸು-ವು-ದ-ಕ್ಕೆ ಅವ-ರ ಸಹಾ-ಯ-ಕ-ನ-ನ್ನೇ ನಿರ್ದೇ-ಶ-ಕ--ನ-ನ್ನಾ-ಗಿ ಮಾಡಿ, ಪೂರ್ಣ-ಸ-ತ್ಯ ಅನ್ನು-ವ ಚಿತ್ರ ನಿ-ರ್ಮಿ-ಸಿ-ದ-ರು. ಆ ಚಿತ್ರ ತೆರೆ-ಕಾ-ಣು-ವ ಹೊತ್ತಿ-ಗೆ ಪಾಟೀ-ಲ್‌ ದಾವ-ಣ-ಗೆ-ರೆ-ಯ-ಲ್ಲಿ-ರು-ವ ತಮ್ಮ ಬಂಗ-ಲೆ ಮಾರಾ-ಟ ಮಾಡಿ-ದ-ರು. ಆನಂ-ತ-ರ ನಿರ್ಬಂ-ಧ ಚಿತ್ರ ಮಾಡಿ ಮೈ ತುಂಬಾ ಸಾಲ ಹೇರಿ-ಕೊಂ-ಡ-ರು. ಆಗ ಯಶ-ವಂ-ತ-ಪು-ರ-ದ ಪೊಲೀ-ಸ್‌ ಠಾಣೆಯೇ ಅವ-ರ-ನ್ನು ರಕ್ಷಿ-ಸಿ-ತು!

    ನಂತ-ರ ಬಂದ-ದ್ದು ಕೌರ-ವ. ಪಾಟೀಲ್‌ ಇಮೇ-ಜಿ-ಗೆ ಒಪ್ಪು--ವ ಪಾತ್ರ. ಜೊತೆ-ಗೆ ಹಂಸ- ಸಂ-ಗೀ-ತ. ಚಿತ್ರ ಕ್ಲಿಕ್ಕಾ-ಯಿ-ತು. ಚಿತ್ರ ಬಿಡು-ಗ-ಡೆ-ಯಾ-ಗು-ವ ಮೊದ-ಲೇ ಅದ-ರ ಹೆಚ್ಚಿ-ನ ದೃಶ್ಯ-ಗ-ಳು ಉದ-ಯ ಟೀವಿ-ಯ-ಲ್ಲಿ ಪ್ರಸಾ-ರ-ವಾ-ಗಿ-ದ್ದ-ರಿಂ-ದ, ಬಹ-ಳ ಜನ ಥಿಯೇ-ಟ-ರ್‌-ಗೇ ಹೋಗ-ಲಿ-ಲ್ಲ !

    ಕೌರ-ವ-ನ ಯಶ-ಸ್ಸು ಪಾಟೀ-ಲ-ರಿ-ಗೆ ಸ್ಟಾ-ರ್‌-ವ್ಯಾ-ಲ್ಯೂ ತಂದು-ಕೊ-ಟ್ಟಿ-ತು. ಹೊಸ-ದಾ-ಗಿ ಕಾರು ಖರೀ-ದಿ-ಸಿ ಅದ-ಕ್ಕೆ ಕೌರ-ವ ಎಂದೇ ನಾಮ-ಕ-ರ--ಣ ಮಾಡಿ-ದ-ರು. ತಮ್ಮ ಬಳಿ ಬಂದ ನಿರ್ಮಾ-ಪ-ಕ-ರಿ-ಗೆ 10 ಲಕ್ಷ ರೇಟ್‌ ಹೇಳಿ-ದ-ರು. ಕೊನೆ-ಗೆ 5 ಲಕ್ಷ-ಕ್ಕೆ ಸೆಟ್ಲ್‌ ಆದ-ರು. ಅವ-ರು ನಟಿ-ಸಿ-ದ ಮೂರು ಚಿತ್ರ-ಗ-ಳು ಸಾಲಾ-ಗಿ ಮಲ-ಗಿ-ದ-ವು.

    ಆಗ ಮತ್ತೆ ಸ್ವಂತ ನಿರ್ಮಾ-ಣ-ಕ್ಕಿ-ಳಿ-ದ ಪಾಟೀ-ಲ್‌ ಪ್ರೇಮಾ-ಚಾ-ರಿ ನಿರ್ಮಿ-ಸಿ-ದ-ರು. ಅಲ್ಲಿ-ಯ ತನ-ಕ ಮಹೇಂ-ದ-ರ್‌-ರಂ-ಥ ನಿರ್ದೇ-ಶ-ಕ-ರೇ ಇಲ್ಲ ಅನ್ನು-ತ್ತಿ-ದ್ದ ಪಾಟೀ-ಲ್‌, ಪ್ರೇಮಾ-ಚಾ-ರಿ ತೋಪಾ-ಗಿ-ದ್ದೇ ತಡ ಪ್ಲೇಟ್‌ ಬದ-ಲಾ-ಯಿ-ಸಿ-ದ-ರು. ಮತ್ತ-ದೇ ನಿಂದ-ನಾ-ಸ್ತು-ತಿ. ಈ ಮಧ್ಯೆ ಹೊಸ-ಮ-ನೆ ಕಟ್ಟಿ-ದ-ರು. ದಳ-ವಾ-ಯಿ ಎಂಬ ರೀಮೇ-ಕ್‌ ಮಾಡಿ ಒಂದಿ-ಷ್ಟು ಹಣ ಮಾಡಿ-ದ-ರು. ಅಮೆರಿಕಾ-ದ-ಲ್ಲಿ ಸಿನಿ-ಮಾ ಇ-ನ್‌-ಸ್ಟಿಟ್ಯೂಟ್‌-ನ-ಲ್ಲಿ ಕಲಿ-ಯು-ತ್ತಿ-ದ್ದ ತಮ್ಮ-ನ-ನ್ನು ಕರೆ--ಸಿ ಶಾಪ ಚಿತ್ರ-ಕ್ಕೆ ನಿರ್ದೇ-ಶ-ಕ-ನ-ನ್ನಾ-ಗಿ ಮಾಡಿ-ದ-ರು. ಯಾರ್ಯಾ-ರಿ-ಗೋ ಅವ-ಕಾ-ಶ ಕೊಟ್ಟಿ-ದ್ದೇ-ನಂ-ತೆ, ನನ್ನ ತಮ್ಮ-ನೇ ಮಾಡ-ಲಿ ಅಂ-ತ ತಾವೇ ಸಮ-ರ್ಥಿ-ಸಿ-ಕೊಂ-ಡ-ರು. ಸಿನಿ-ಮಾ-ದ-ಲ್ಲಿ ಲಾಭ-ವಾ-ಗ--ದಿ-ದ್ದ-ರೂ ಚಿಂತಿ-ಲ್ಲ . ತಮ್ಮ-ನ-ನ್ನು ಪ್ರಮೋ-ಟ್‌ ಮಾಡಿ-ದ್ದೇ-ನೆ ಅಂತ ಅಂದು-ಕೊ-ಳ್ಳು-ತ್ತೇ-ನೆ ಅಂತ ಮುಂ-ಜಾ-ಗ-ರೂ-ಕ-ತಾ ಜಾ-ಮೀ-ನು ಪಡೆ-ದು-ಕೊಂ-ಡ-ರು.

    ಇದೀ-ಗ ಪಾಟೀ-ಲ್‌ ನಿರ್ದೇ-ಶ-ಕ-ರೂ ಆ-ಗು-ತ್ತಿ-ದ್ದಾ-ರೆ. ಚಿತ್ರ-ದ ಹೆಸ-ರು ಲಂಕೇ-ಶ. ಆರಂ-ಭ-ದ-ಲ್ಲಿ ನಿರ್ಮಾ-ಪ-ಕ, ಖಳ-ನಾ-ಯ-ಕ, ನಂತ-ರ ನಾಯ-ಕ, ನಿರ್ಮಾ-ಪ-ಕ, ಈಗ ನಿರ್ದೇ-ಶ-ಕ. ಚಿತ್ರ-ರಂ-ಗ-ಕ್ಕೆ ಬರು-ವು-ದು ತಡ-ವಾ-ದ-ರೂ ಈಗ ಆ ಬಾಕಿ-ಯ-ನ್ನು ತೀರಿ-ಸು-ವ ರಭ-ಸ-ದ-ಲ್ಲಿ ಪಾ-ಟೀ-ಲ್‌ ಹೆಜ್ಜೆ-ಯಿ-ಡು-ತ್ತಿ-ದ್ದಾ-ರೆ. ನಾನೇ-ನು ಬೇಕಾ-ದ-ರೂ ಮಾಡ-ಬ-ಲ್ಲೆ ಅನ್ನು-ವ ಆತ್ಮ-ವಿ-ಶ್ವಾ-ಸ ಅವ-ರ-ದು.

    ಪಾಟೀ-ಲ್‌-ಗೆ ಈಗ 45. ಮಧ್ಯ-ವ-ಯ-ಸ್ಕ ಅಂದ-ರೆ ಮಾತ್ರ ವಿಪ-ರೀ-ತ ಸಿಟ್ಟು. ಪತ್ರ-ಕರ್ತ-ರ-ನ್ನು ಸ್ನೇಹಿ-ತ-ರೆಂ-ದು ಭ್ರಮಿ-ಸು-ವ, ನಿರ್ದೇ-ಶ-ಕ ಸಂತ-ತಿ-ಯ-ನ್ನು ವಾಚಾ-ಮ-ಗೋ-ಚ-ರ ದೂಷಿ-ಸು-ವ ಪಾಟೀ-ಲ್‌ ಚಿತ್ರ-ರಂ-ಗ-ಕ್ಕೆ -ಅನಿವಾ-ರ್ಯ-ವಾ-ಗಿ-ರೋ-ದು ಒಬ್ಬ ನಿರ್ಮಾ-ಪ-ಕ-ನಾ-ಗಿ. ಅವ-ರ-ದು ಹ-ಠ-ಮಾ-ರಿ-ತ-ನ-ವೋ ಅಥ-ವಾ ಮಹ-ತ್ವಾ-ಕಾಂಕ್ಷೆ-ಯೋ ಅ-ನ್ನೋ-ದು ಇನ್ನೂ ಪತ್ತೆ-ಯಾ-ಗಿ-ಲ್ಲ . ಆಗಾ-ಗ ಪ್ರಚಾ-ರ ಗಿಟ್ಟಿ-ಸಿ-ಕೊ-ಳ್ಳು-ತ್ತಾ ಇರು-ವು-ದೇ ಸಿನಿ-ಮಾ-ರಂ-ಗ-ದ-ಲ್ಲಿ ಉಳಿ-ಯು-ವು-ದ-ಕ್ಕೆ ಇರು-ವ ಏಕೈ-ಕ ಉಪಾ-ಯ ಅನ್ನೋ-ದಂ-ತೂ ಅವ-ರಿ-ಗೆ ಗೊತ್ತಾ-ಗಿ-ದೆ.

    ಮೊನ್ನೆ-ಯ-ಷ್ಟೇ ಪಾಟೀ-ಲ್‌-ಗೆ ಮತ್ತೆ ವ-ರ್ಗ-ವಾ-ಗಿ-ದೆ, ದೂರ-ದ ಕಾರ-ವಾ-ರ-ಕ್ಕೆ. ಅದ-ರಿಂ-ದ ಆಘಾ-ತ-ಗೊಂ-ಡಿ-ದ್ದ ಪಾಟೀ-ಲ್‌, ಒಂದು ರಾತ್ರಿ ಪೊಲೀ-ಸ್‌ ವೃತ್ತಿ-ಗೇ ರಾಜಿ-ನಾ-ಮೆ ಕೊಡು-ವ ಯೋಚ-ನೆ ಮಾಡಿ-ದ್ದೂ ಉಂಟು. ಬೆಳ-ಗಾ-ಗು-ವ ಹೊತ್ತಿ-ಗೆ ಅವ-ರ ಮನ-ಸ್ಸು ತಿಳಿ-ಯಾ-ಗಿ-ತ್ತು , ನಿರ್ಧಾ-ರ ಬದ-ಲಾ-ಗಿ-ತ್ತು.

    ಪಾಟೀ-ಲ್‌ ಇರು-ವು-ದೇ ಹಾಗೆ. ಒಮ್ಮೆ ರೇ-ಗು-ತ್ತಾ-ರೆ, ಮರು-ಕ್ಷ-ಣ-ವೇ ಮೆತ್ತ-ಗಾ-ಗು-ತ್ತಾ-ರೆ. ಇಂಥ ರಂಜ-ನೀ-ಯ ವ್ಯಕ್ತಿ-ತ್ವ-ವೇ ಅವ-ರ-ನ್ನು ಒಬ್ಬ ಸ್ವಾರ-ಸ್ಯ-ಕ-ರ ವ್ಯಕ್ತಿಯನ್ನಾ-ಗಿ ಮಾಡಿ-ದೆ. ಆ ಕಾರ-ಣ-ಕ್ಕೆ, ಅವ-ರು ಇನ್ನೂ ಸ್ವಲ್ಪ-ಕಾ-ಲ ಈ ರಂಗ-ದ-ಲ್ಲಿ ಬಾಳಿ-ಕೆ ಬರು-ತ್ತಾ-ರೆ.

    English summary
    B.C. Patil, the Inspector turned celluloid hero
    Monday, July 8, 2013, 15:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X