»   » ‘ಪ್ರೇಮಕ್ಕೆ ಸೈ’ಗೊಂದು ಪ್ರೇಮ ಗೀತೆ

‘ಪ್ರೇಮಕ್ಕೆ ಸೈ’ಗೊಂದು ಪ್ರೇಮ ಗೀತೆ

Posted By: Staff
Subscribe to Filmibeat Kannada

'ಪ್ರೇಮಲೋಕ"ದಿಂದ 'ಪ್ರೇಮಕ್ಕೆ ಸೈ" ವರೆಗೆ ಪ್ರೇಮ ಕಥಾನಕಗಳನ್ನೇ ನೀಡುತ್ತಾ ಬಂದ ಕ್ರೇಜಿಸ್ಟಾರ್‌ ರವಿಚಂದ್ರನ್‌ ನಾಯಕರಾದ ಮೇಲೆ ಮೇಲೆ, ಪ್ರೇಮಗೀತೆಗಳಿಗೆ ಕೊರತೆಯೇ. ತೆರೆಗೆ ಬರಲು ಭರದಿಂದ ಸಿದ್ಧವಾಗುತ್ತಿರುವ 'ಪ್ರೇಮಕ್ಕೆ ಸೈ" ಕೂಡ ಇದಕ್ಕೆ ಹೊರತಾಗಿಲ್ಲ.

ಪ್ರೇಮಗೀತೆಗಳು, ಪ್ರೇಮಪೂರ್ಣ ಸಂಭಾಷಣೆ, ಪ್ರೇಮ ಸನ್ನಿವೇಶಗಳೆಲ್ಲವೂ ಇದರಲ್ಲಿ ಮೇಳೈಸಿವೆ. 'ಪ್ರೇಮಲೋಕದ ಕಿನ್ನರರೆ ಹೇಳಿ ಪ್ರೇಮಕ್ಕೆ ಸೈ, ಹೃದಯ ದೋಚುವ ಸೋದರರೆ ಹೇಳಿ ಪ್ರಾಯಕ್ಕೆ ಸೈ, ಕಾಲಕ್ಕೆ ತಕ್ಕಹಾಗೆ ಕನಸುಗಳು ಬದಲಾಯ್ತು " ಎಂಬ ಗೀತೆ ಈ ಚಿತ್ರಕ್ಕಾಗಿ ಸಿದ್ಧವಾಗಿದೆ.

ಕಳೆದ ವಾರ ಇದೇ ಚಿತ್ರಕ್ಕಾಗಿ ಮತ್ತೇರಿದ ನಾಯಕಿ ಶಹೀನಾ-ನಾಯಕ ರವಿಚಂದ್ರನ್‌ಗೆ ಮುತ್ತಿನ ಮಳೆಗರೆವ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿತ್ತು. ಈಗ ಮೇಲ್ಕಂಡ ಗೀತೆಗಾಗಿ ಬೆಂಗಳೂರು ಅರಮನೆ, ಕೋರಮಂಗಲ ನ್ಯಾಷನಲ್‌ ಗೇಮ್ಸ್‌ ಕೀಡಾಂಗಣ ಪ್ರದೇಶ, ವೈಟ್‌ಫೀಲ್ಡ್‌ ಸಾಜಿಜಾ ಗಾರ್ಡನ್‌ಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದೆ.

ವೈಜಯಂತಿ ಮೂವೀಸ್‌ರವರ ರಜತೋತ್ಸವ ಕೊಡುಗೆಯಾಗಿ ಸಿದ್ಧವಾಗುತ್ತಿರುವ ಈ ಚಿತ್ರದ ನಿರ್ಮಾಪಕರು ಅಶ್ವಿನಿದತ್‌. ತಾರಾಗಣದಲ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್‌, ಬೆಡಗಿನ ಹುಡುಗಿ ಶಹೀನಾ, ಕಸ್ತೂರಿ, ಪ್ರಕಾಶ್‌ ರೈ, ಲಕ್ಷ್ಮಣ್‌, ರಮೇಶ್‌ ಭಟ್‌, ಪದ್ಮಾವಾಸಂತಿ, ಶಿವಕುಮಾರ್‌, ಅಶೋಕ್‌ ಬಾದರದಿನ್ನಿ, ಶ್ರೀನಾಥ್‌, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್‌ ಇದ್ದಾರೆ.

English summary
Premakke sai is expected to release in the month of August or september

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada