ಸ್ಯಾಂಡಲ್ ವುಡ್ ಚಿತ್ರಕ್ಕೆ ಪ್ರೇಮಕುಮಾರಿ ಎಂಟ್ರಿ
ಮಾಜಿ ಸಚಿವ ಎಸ್ ಎ ರಾಮದಾಸ್ ಮೇಲೆ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ಕೈಕೊಟ್ಟಿದ್ದಾರೆಂಬ ಆರೋಪ ಮಾಡಿರುವ ಪ್ರೇಮಾಕುಮಾರಿ ಇದೀಗ ಬೆಳ್ಳಿತೆರೆಗೆ ಅಡಿಯಿಟ್ಟಿದ್ದಾರೆ. ಗುರುವಾರ (ಅ.16) ಅವರು 'ಲವ್ ಆನ್ ಎನ್ಎಚ್ 4' ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿ ಎಲ್ಲರ ಗಮನಸೆಳೆದರು.
ಚಿತ್ರದಲ್ಲಿ ಅವರದು ಬಹಳ ಗಮನಾರ್ಹ ಪಾತ್ರವಂತೆ. ಈ ಹಿಂದೆ ಅವರಿಗೆ 'ಬಿಗ್ ಬಾಸ್ ಸೀಸನ್ 2'ನಲ್ಲಿ ಭಾಗವಹಿಸಲು ಆಹ್ವಾನ ಸಿಕ್ಕಿತ್ತು ಎಂಬ ಮಾತುಗಳನ್ನು ಸ್ವತಃ ಪ್ರೇಮಕುಮಾರಿ ಅವರೇ ಹೇಳಿಕೊಂಡಿದ್ದಾರೆ. [ಕಿರುತೆರೆ ರಾಕಿಂಗ್ ಸ್ಟಾರ್ ಅಕುಲ್ ಬಾಲಾಜಿ ಸಂದರ್ಶನ]

ಅಂದಹಾಗೆ ಇದು 'ಬಿಗ್ ಬಾಸ್ 2' ವಿನ್ನರ್ ಅಕುಲ್ ಬಾಲಾಜಿ ಹಾಗೂ ತಿಲಕ್ ಶೇಖರ್ ಅವರು ನಾಯಕ ನಟರಾಗಿ ಅಭಿನಯಿಸುತ್ತಿರುವ ಚಿತ್ರ. ಶ್ರೀನಾಥ್ ಅವರು ಆಕ್ಷನ್ ಕಟ್ ಹೇಳುತ್ತಿದ್ದು ಸತ್ಯ ಘಟನೆ ಆಧಾರಿತವಾಗಿ ತೆರೆಗೆ ತರುತ್ತಿದ್ದಾರೆ.
ಮಲೆನಾಡಿನಿಂದ ಬಂದು ಸೆಲೆಬ್ರಿಟಿಯಾದ ಹುಡುಗಿಯೊಬ್ಬಳು ಕಥೆ ಇದಾಗಿದೆ ಎನ್ನುವ ನಿರ್ದೇಶಕರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸುತ್ತಾರೆ. ಚಿತ್ರ ಬಿಡುಗಡೆಗೂ ಮುನ್ನ ಅವರನ್ನು ಮಾಧ್ಯಮಗಳ ಮುಂದೆ ಕರೆದುಕೊಂಡು ಬರುತ್ತೇನೆ ಎಂಬ ಭರವಸೆಯನ್ನೂ ನಿರ್ದೇಶಕರು ನೀಡಿದ್ದಾರೆ.
ಈ ಚಿತ್ರದ ಬಹುತೇಕ ಕಥೆ ರೈಲಿನಲ್ಲೇ ನಡೆಯುತ್ತದೆ. ಹಾಗಾಗಿ ರೈಲು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಿತ್ರದಲ್ಲಿ ಅಕುಲ್ ಅವರು ವನ್ಯಜೀವಿ ಛಾಯಾಗ್ರಾಹಕರಾಗಿ, ತಿಲಕ್ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಲಿದ್ದಾರೆ. ರ್‍ಯಾಂಬೋ ಖ್ಯಾತಿಯ ಮಾಧುರಿ ಇಟಗಿ ಚಿತ್ರದ ನಾಯಕಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











