For Quick Alerts
  ALLOW NOTIFICATIONS  
  For Daily Alerts

  ಚಂದನವನದಲ್ಲಿ 'ಪ್ರೇಮಂ' ನಾಯಕಿಯರಿಗೆ ಭಾರಿ ಡಿಮ್ಯಾಂಡ್

  By Pavithra
  |

  'ಪ್ರೇಮಂ' 2016 ರಲ್ಲಿ ಬಿಡುಗಡೆಯಾದ ಮಲೆಯಾಳಂ ಸಿನಿಮಾ. ಚಿತ್ರ ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಆದರೂ ಯಾವುದೇ ಭಾಷೆಯ ಹಂಗಿಲ್ಲದೆ ಪ್ರತಿಯೊಬ್ಬ ಪ್ರೇಕ್ಷಕನು ಸಿನಿಮಾವನ್ನು ಮಿಸ್ ಮಾಡಿಕೊಳ್ಳದೇ ನೋಡಿದ್ದರು.

  'ಪ್ರೇಮಂ' ಸಿನಿಮಾ ನೋಡಲು ಸಾಕಷ್ಟು ಕಾರಣಗಳಿದ್ದವು. ಚಿತ್ರದ ಹಾಡುಗಳು ಹಾಗೂ ಕಲಾವಿದರು ಸಿನಿಮಾ ಬಿಡುಗಡೆ ಮುನ್ನವೇ ಚಿತ್ರದ ಬಗ್ಗೆ ಭರವಸೆ ಮೂಡಿಸಿದ್ದರು. ಸಿನಿಮಾ ಬಿಡುಗಡೆ ಆದ ನಂತ್ರ ಪ್ರತಿ ಕಲಾವಿದರು ಮಲೆಯಾಳಂ, ತಮಿಳು, ತೆಲುಗು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು.

  'ನಟಸಾರ್ವಭೌಮ'ನಿಗೆ ಜೊತೆಯಾದ ಮಲೆಯಾಳಂ ಬೆಡಗಿ'ನಟಸಾರ್ವಭೌಮ'ನಿಗೆ ಜೊತೆಯಾದ ಮಲೆಯಾಳಂ ಬೆಡಗಿ

  ಸದ್ಯ ಪ್ರೇಮಂ ನಾಯಕಿಯರು ಸ್ಯಾಂಡಲ್ ವುಡ್ ನಲ್ಲಿಯೂ ಸದ್ದು ಮಾಡುತ್ತಿದ್ದು ಚಂದನವನದಲ್ಲಿ ಅಂದದ 'ಪ್ರೇಮಂ' ನಾಯಕಿಯರಿಗೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಹಾಗಾದರೆ 'ಪ್ರೇಮಂ' ನಲ್ಲಿ ನಟಿಸಿದ ಯಾವ ನಾಯಕಿಯರು ಕನ್ನಡದ ಯಾವ ಸ್ಟಾರ್ ಜೊತೆ ಆಕ್ಟ್ ಮಾಡುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

  ಸುದೀಪ್ ಜೊತೆ ಪ್ರೇಮಂ ನಾಯಕಿ

  ಸುದೀಪ್ ಜೊತೆ ಪ್ರೇಮಂ ನಾಯಕಿ

  ಮಲಯಾಳಂನ ಅತ್ಯಂತ ಜನಪ್ರಿಯ ಚಿತ್ರ 'ಪ್ರೇಮಂ'ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಮಡೋನ ಸೆಬಾಸ್ಟಿಯನ್ ಈಗ ಸುದೀಪ್ ಅಭಿನಯದ ಕೋಟಿಗೊಬ್ಬ3 ಸಿನಿಮಾ ನಾಯಕಿ. ಈಗಾಗಲೇ ಸುದೀಪ್ ಹಾಗೂ ಮಡೋನ ಸೆಬಾಸ್ಟಿಯನ್ ಜೊತೆನ ಚಿತ್ರೀಕರಣ ವಿದೇಶದಲ್ಲಿ ನಡೆಯುತ್ತಿದೆ.

  ಪುನೀತ್ ಚಿತ್ರದಲ್ಲಿ 'ಪ್ರೇಮಂ' ಅನುಪಮಾ

  ಪುನೀತ್ ಚಿತ್ರದಲ್ಲಿ 'ಪ್ರೇಮಂ' ಅನುಪಮಾ

  'ಪ್ರೇಮಂ' ಸಿನಿಮಾದಲ್ಲಿ ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ನಾಯಕನ ಸ್ಕೂಲ್ ಡೇಸ್ ಲವ್ ಸ್ಟೋರಿಯಲ್ಲಿ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ಚಿತ್ರದಲ್ಲಿದ್ದರು. ಈಗ ಅನುಪಮಾ ಪವರ್ ಸ್ಟಾರ್ ಆಕ್ಟ್ ಮಾಡುತ್ತಿರುವ ನಟಸಾರ್ವಭೌಮ ಚಿತ್ರದಲ್ಲಿ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ.

  ಸಾಯಿಪಲ್ಲವಿ ಹಿಂದೆ ಸ್ಯಾಂಡಲ್ ವುಡ್

  ಸಾಯಿಪಲ್ಲವಿ ಹಿಂದೆ ಸ್ಯಾಂಡಲ್ ವುಡ್

  'ಪ್ರೇಮಂ' ಸಿನಿಮಾದಲ್ಲಿ ಪ್ರೇಕ್ಷಕರ ನಿದ್ದೆ ಕೆಡಿಸಿದ ನಟಿ ಸಾಯಿಪಲ್ಲವಿ. ಇಂದಿಗೂ ಕೂಡ ಅದೆಷ್ಟೋ ಅಭಿಮಾನಿಗಳು ಅವಳದ್ದೆ ನೆನಪಿನಲ್ಲಿದ್ದಾರೆ. ಈಗಾಗಲೇ ಇಬ್ಬರು ನಾಯಕಿಯರನ್ನ ಕರೆತಂದಿರುವ ಚಂದನವನ ನಿರ್ದೇಶಕ ನಿರ್ಮಾಪಕರು ಸಾಯಿ ಪಲ್ಲವಿಯನ್ನು ಕರೆತರುವ ಪ್ರಯತ್ನ ಮಾಡುತ್ತಲೇ ಇದ್ದಾರೆ.

  ಸ್ಯಾಂಡಲ್ ವುಡ್ ನಲ್ಲಿ ಮಲೆಯಾಳಂ ಬೆಡಗಿಯರು

  ಸ್ಯಾಂಡಲ್ ವುಡ್ ನಲ್ಲಿ ಮಲೆಯಾಳಂ ಬೆಡಗಿಯರು

  ಕನ್ನಡ ಸಿನಿಮಾರಂಗದಲ್ಲಿ ಮಲೆಯಾಳಂ ನಟಿಯರು ಬಂದು ಪ್ರಖ್ಯಾತಿ ಪಡೆದುಕೊಳ್ಳುವುದು ಹೊಸ ವಿಚಾರವೇನಲ್ಲಾ. ಈಗಾಗಲೇ ಸಾಕಷ್ಟು ನಾಯಕಿಯರು ಅನೇಕ ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸು ಕದ್ದಿದ್ದಾರೆ.

  English summary
  Malayalam Premam cinema heroines demand for Kannada film industry. Anupama and Madonna Sebastian are already acting alongside Puneet and Sudeep

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X