ಲಾಂಗ್ ಗ್ಯಾಪ್ ಆದ್ಮೇಲೆ ಬಂದ ಮಹಿಳಾ ಪ್ರಧಾನ ಸಿನಿಮಾ 'ಜೂಲಿಯೆಟ್ 2': ಹೇಗಿದೆ ರೆಸ್ಪಾನ್ಸ್?
ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾ ತೆರೆಕಂಡಿದ್ದು ತೀರಾ ಕಡಿಮೆ. ಪ್ಯಾನ್ ಇಂಡಿಯಾ, ಮಾಸ್ ಸಿನಿಮಾಗಳ ಅಬ್ಬರದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಬಂದಿದ್ದು ಗೊತ್ತಾಗುತ್ತಿರಲಿಲ್ಲ. ಇಂತಹ ಸ್ಟಾರ್ ಸಿನಿಮಾಗಳ ಅಬ್ಬರದಲ್ಲಿ ಕಳೆದು ಹೋದ ಸಿನಿಮಾಗಳಿಗೇನು ಕಮ್ಮಿಯಿಲ್ಲ. ಹೀಗಿದ್ದರೂ, ಮಹಿಳಾ ಪ್ರಧಾನ ಸಿನಿಮಾವೊಂದು ಫೆಬ್ರವರಿ 24ರಂದು ತೆರೆಕಂಡಿದೆ. ಅದುವೇ 'ಜೂಲಿಯೆಟ್ 2'.
'ಪ್ರೇಮಂ ಪೂಜ್ಯಂ' ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಜೊತೆ ನಟಿಸಿ ಜನಮನಗೆದ್ದಿರೋ ಬೃಂದ ಆಚಾರ್ಯ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದರೂ, ವಿಭಿನ್ನ ಸ್ಟೋರಿಯೊಂದಿಗೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ಸಿನಿಮಾದ ಥಿಲ್ಲರ್ ಕಥೆ ಕೇವಲ ಮಹಿಳೆಯರನ್ನಷ್ಟೇ ಅಲ್ಲ. ಎಲ್ಲಾ ತರಹದ ಸಿನಿಮಾ ಪ್ರೇಮಿಗಳನ್ನೂ ಸೆಳೆಯುತ್ತಿದೆ.

'ಜೂಲಿಯೆಟ್ 2' ಸಿನಿಮಾದ ಬಿಡುಗಡೆಗೂ ಮುನ್ನವೇ ಹಾಡುಗಳು ಹಾಗೂ ಟ್ರೈಲರ್‌ಗಳಿಂದ ಪ್ರೇಕ್ಷಕರನ್ನು ಸೆಳೆದಿತ್ತು. ಥಿಲ್ಲರ್ ಸ್ಟೋರಿ ಜೊತೆಗೆ ಅಪ್ಪ -ಮಗಳ ಬಾಂಧವ್ಯದ ಸನ್ನಿವೇಶಗಳು ಕೂಡ ಜನರಿಗೆ ಹಿಡಿಸುತ್ತಿದೆ. ಸಿನಿಮಾದ ಹಾಡೊಂದನ್ನು ಬೆಳ್ತಂಗಡಿ ಬಳಿಯ ಪಶ್ಚಿಮ ಘಟ್ಟದ ಕಾಡೊಂದರಲ್ಲೇ ಶೂಟಿಂಗ್ ಮಾಡಿದೆ ಚಿತ್ರತಂಡ.
'ಜೂಲಿಯೆಟ್ 2' ಸಿನಿಮಾವನ್ನು ವಿರಾಟ್ ಬಿ ಗೌಡ ನಿರ್ದೇಶನ ಮಾಡಿದ್ದಾರೆ. ಈಗಾಗಲೆ ಒಂದು ಕಳೆದು ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ರಾಜ್ಯದ ಹಲವು ಭಾಗಗಳಲ್ಲಿ ಈ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ಬೆಂಗಳೂರು, ಕರಾವಳಿಯ ಹಲವು ಭಾಗಗಳಲ್ಲಿ ಹೊಸಬರ ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರು ಭೇಷ್ ಎಂದಿದ್ದಾರೆ.

'ಜೂಲಿಯೆಟ್ 2' ಸಿನಿಮಾದಲ್ಲಿ ಬೃಂದಾ ಆಚಾರ್ಯ ಜೊತೆ ಶ್ರೀಕಾಂತ್ ಹಾಗೂ ರಾಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ ಕೂಡ ನಟಿಸಿದ್ದಾರೆ. ಲಿಖಿತ್ ಆರ್ ಕೋಟ್ಯಾನ್ ಸಿನಿಮಾ ನಿರ್ಮಿಸಿದ್ದರೆ, ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಾಗೇ shanto v anto ಕ್ಯಾಮರಾ ವರ್ಕ್ ಮಾಡಿದ್ದಾರೆ.


Click it and Unblock the Notifications











