ಪ್ರೇಮಂ ಪೂಜ್ಯಂ ಸಿನಿಮಾಗೆ ವಿಶ್ ಮಾಡಿದ್ದ ಪುನೀತ್ ರಾಜ್‌ಕುಮಾರ್

ಪುನೀತ್‌ ರಾಜ್‌ಕುಮಾರ್ ಮೊದಲಿನಿಂದಲೂ ಹಾಗೇ. ಹೊಸಬರ ಸಿನಿಮಾವಾಗಿರಲಿ, ದೊಡ್ಡ ಸ್ಟಾರ್ ನಟರ ಸಿನಿಮಾವಾಗಿರಲಿ ಎಲ್ಲಾ ಚಿತ್ರಗಳಿಗೂ ಒಳ್ಳೆದಾಗಲಿ ಎಂಬ ನಿಟ್ಟಿನಲ್ಲಿ ಹರಸುತ್ತಿದ್ದರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಬಗ್ಗೆ ಬರೆದುಕೊಂಡು ಸಿನಿಮಾ ನೋಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತಿದ್ದರು. ಹೊಸಬರು ಯಾರಾದರು ಒಳ್ಳೆಯ ಸಿನಿಮಾ ಮಾಡಿದ್ದರೆ ಆ ತಂಡಕ್ಕೆ ಅಪ್ಪು ಉತ್ತೇಜನ ಇದ್ದೇ ಇರುತ್ತಿತ್ತು. ಒಳ್ಳೆಯ ಪ್ರಯತ್ನಕ್ಕೆ ಸದಾ ಬೆನ್ನುತಟ್ಟುತ್ತಿದ್ದ ಪುನೀತ್ ನವೆಂಬರ್ 12ಕ್ಕೆ ರಿಲೀಸ್ ಆಗುತ್ತಿರುವ ಪ್ರೇಮಂ ಪೂಜ್ಯಂ ಸಿನಿಮಾಗೂ ಸಹ ವಿಷ್ ಮಾಡಿದ್ದರು. ಇದು ನೆನಪಿರಲಿ ಪ್ರೇಮ್ ಅವರ ಸಿನಿಮಾವಾಗಿದ್ದು ರಾಜ್ಯದಾದ್ಯಂತ ತೆರೆಕಾಣುತ್ತಿದೆ.

ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿರುವ ಪುನೀತ್ "ನಮ್ಮ ಲವ್ಲಿ ಸ್ಟಾರ್ ಪ್ರೇಮ್ ಅವರ ಸಿನಿಮಾ ಬರ್ತಿದೆ. ಪ್ರೇಮ್ ಅವರ 25ನೇ ಸಿನಿಮಾ ಇದು. ಚಿತ್ರದಲ್ಲಿ ಎಲ್ಲರೂ ಡಾಕ್ಟರ್ಸ್ ಸೇರಿಕೊಂಡಿದ್ದಾರೆ. ಅವರಿಗೆ ಕಲೆ ಮೇಲೆ ಪ್ರೀತಿ ಇರೋದ್ರಿಂದ ಸಿನಿಮಾ ಮಾಡಿದ್ದಾರೆ. ಆ ಚಿತ್ರವೇ ಪ್ರೇಮಂ ಪೂಜ್ಯಂ. ನಾನು ಚಿತ್ರತಂಡಕ್ಕೆ ಹೃದಯಪೂರ್ವಕವಾಗಿ ವಿಷ್ ಮಾಡುತ್ತೇನೆ. ಆಲ್‌ ದಿ ವೆರಿ ಬೆಸ್ಟ್ ಪ್ರೇಮ್. ಸಿನಿಮಾ ಸಕ್ಸಸ್ ಆಗಲಿ. ಸಿನಿಮಾ ರಿಲೀಸ್ ಆಗಲಿ ಹಾಗೇ ಒಳ್ಳೇದಾಗಲಿ.ನಿಮ್ಮೆಲ್ಲರಿಗೂ ಆಲ್‌ದಿ ಬೆಸ್ಟ್,ಸೂಪರ್" ಎಂದು ಹೇಳಿದ್ದರು.

ಈ ಮೂಲಕ ತನ್ನ ಆಪ್ತ ಸ್ನೇಹಿತ ಪ್ರೇಮ್ ಅವರಿಗೆ ವಿಷ್ ಮಾಡಿದ್ದ ಪುನೀತ್ ರಾಜ್‌ಕುಮಾರ್ ಈಗ ಇಲ್ಲ ಎಂಬುದನ್ನು ನೆನೆದು ಪ್ರೇಮ್ ಸಾಕಷ್ಟು ಬಾರಿ ದುಃಖವನ್ನು ಹೇಳಿಕೊಂಡಿದ್ದರು. ಪುನೀತ್ ಇದ್ದಿದ್ದರೆ ಖಂಡಿತ ಸಿನಿಮಾ ನೋಡುತ್ತಿದ್ದರು, ಮತ್ತಷ್ಟು ಎನ್‌ಕರೇಜ್ ಮಾಡುತ್ತಿದ್ದರು. ಪುನೀತ್ ಇಲ್ಲದೇ ಇರೋದು ಇಡೀ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.

Premam Poojyam movie releasing november 12th

ಸಿನಿ ಶುಕ್ರವಾರ ನವೆಂಬರ್ 12ರಂದು ಸ್ಯಾಂಡಲ್‌ವುಡ್‌ನ 6 ಸಿನಿಮಾಗಳು ತೆರೆಕಾಣುತ್ತಿವೆ. ಇದರಲ್ಲಿ ನೆನಪಿರಲಿ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಸಿನಿಮಾ ಕೂಡ ಒಂದು. ಈಗಾಗಲೇ ಸಿನಿಮಾದ ಪ್ರೀಮಿಯರ್ ಶೋ ನಡೆದಿದ್ದು, ಉತ್ತಮ ರೆಸ್ಪಾನ್ಸ್ ಕೂಡ ವ್ಯಕ್ತವಾಗಿದೆ. ಪ್ರೇಮ್ ಅವರ 25ನೇ ಸಿನಿಮಾ ಇದಾಗಿದ್ದು, ರಾಜ್ಯದಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ. ಇದೊಂದು ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ಪ್ರೇಮ್ ಈ ಸಿನಿಮಾದಲ್ಲಿ 7 ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲ್ಯ, ಯೌವ್ವನ, ಕಾಲೇಜು ಯುವಕ , ಲವರ್ ಬಾಯ್, ಫ್ಯಾಮಿಲಿ ಮ್ಯಾನ್ ಹೀಗೆ ವಿಭಿನ್ನ ಶೇಡ್‌ಗಳನ್ನು ಪ್ರೇಮ್ ನಿರ್ವಹಿಸಿದ್ದು, ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.

ಈ ಸಿನಿಮಾ ಪ್ರೇಮ್ ಅವರ ಬಹುದೊಡ್ಡ ಸಿನಿಮಾವಾಗಿದ್ದು ಚಿತ್ರದ ಸಕ್ಸಸ್‌ಗಾಗಿ ಸಾಕಷ್ಟು ಎಫರ್ಟ್ ಹಾಕಿದ್ದಾರೆ. ಸಿನಿಮಾದಲ್ಲಿ ಬರೋಬ್ಬರಿ 12 ಹಾಡುಗಳಿರೋದು ಮತ್ತೊಂದು ವಿಶೇಷ. ಇನ್ನು ಈ ಸಿನಿಮಾದ ಕಥೆಯನ್ನ ಹಲವು ವರ್ಷಗಳ ಹಿಂದೆಯೇ ನಿರ್ದೇಶಕ ಡಾ.ರಾಘವೇಂದ್ರ ರೆಡಿಯಾಗಿ ಇಟ್ಟುಕೊಂಡಿದ್ದರು. ಅಪ್ಪ ಅಮ್ಮನ ಪ್ರೀತಿ ಜೊತೆಗೆ ಪ್ರೇಮಿಗಳ ನಡುವಿನ ಪ್ರೇಮಾಂಕುರದ ಬಗ್ಗೆ ಪ್ರೇಮಂ ಪುಜ್ಯಂ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸಲಾಗಿದೆ.

Premam Poojyam movie releasing november 12th

ಈ ಸಿನಿಮಾದಲ್ಲಿ ಸಂಬಂಧಗಳ ಮಹತ್ವವನ್ನು ಸಾರುವ ಪ್ರಯತ್ನವಾಗಿದ್ದು, ಸಿನಿಮಾ ನೋಡುವಾಗ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಯಾವುದೇ ಕಾರಣಕ್ಕೂ ಮುಜುಗರ ಆಗೋದಿಲ್ಲ, ಎಲ್ಲರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಎಂದು ಚಿತ್ರತಂಡ ಮನವಿ ಮಾಡಿಕೊಂಡಿದೆ. ಈ ಹಿಂದೆ ಎಲ್ಲೂ ಕಂಡಿರದ ಹಾಗೇ ನೋಡಿರದ ಪ್ರೇಮ ಕಥೆಯನ್ನು ಪ್ರೇಮಂ ಪೂಜ್ಯಂ ಸಿನಿಮಾದಲ್ಲಿ ತೋರಿಸಲಾಗಿದ್ದು, ಈ ಬಗ್ಗೆ ಸ್ವತಃ ನಿರ್ದೇಶಕ ಡಾ ರಾಘವೇಂದ್ರ ತಿಳಿಸಿದ್ದಾರೆ. ಕರ್ನಾಟಕದ ಪ್ರಸಿದ್ಧ ಜಾಗಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದ್ದು, ಬ್ಯೂಟಿಫುಲ್ ಲೊಕೇಷನ್‌ಗಳು ಸಿನಿಮಾದಲ್ಲಿ ಸೆರೆಯಾಗಿವೆ.

ಹೀಗೆ ಸಾಕಷ್ಟು ವಿಶೇಷಗಳನ್ನು ಹೊತ್ತು ಬರುತ್ತಿರೋ ಪ್ರೇಮಂ ಪೂಜ್ಯಂ ಸಿನಿಮಾಗೆ ಸಿನಿ ಪ್ರೇಕ್ಷಕರು ಯಾವರೀತಿ ರೆಸ್ಪಾನ್ಸ್ ನೀಡುತ್ತಾರೆ, ಸಿನಿಮಾವನ್ನು ಮೆಚ್ಚಿಕೊಳ್ಳುತ್ತಾರೆ ಅನ್ನೋದನ್ನ ಸಿನಿಮಾದ ಫಸ್ಟ್ ಶೋ ಆಗೋವರೆಗೂ ಕಾಯಲೇ ಬೇಕಿದೆ.

More from Filmibeat

English summary
Premam Poojyam movie releasing on november 12th.And late actor Puneeth Rajkumar wishes to premam poojyam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X