300 ವರ್ಷದ ಹಳೆಯ ಚರ್ಚ್ ಬಳಿ ಕಾಣಿಸಿಕೊಂಡ ನೆನಪಿರಲಿ ಪ್ರೇಮ್
ಲೈಫ್ ಜೊತೆ ಒಂದು ಸೆಲ್ಫಿ ಸಿನಿಮಾದ ಬಳಿಕ ನೆನಪಿರಲಿ ಪ್ರೇಮ್ ನಟಿಸುತ್ತಿರುವ ಚಿತ್ರ ಪ್ರೇಮಂ ಪೂಜ್ಯಂ. ಸುಮಾರು 16 ವರ್ಷದಿಂದ ಸ್ಯಾಂಡಲ್ವುಡ್ ಇಂಡಸ್ಟ್ರಿಯಲ್ಲಿ ನಟಿಸುತ್ತಿರುವ ಪ್ರೇಮ್ ಈಗ 25ನೇ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
25ನೇ ಚಿತ್ರ ಎಂಬ ಕಾರಣಕ್ಕೆ ಪ್ರೇಮಂ ಪೂಜ್ಯಂ ಬಹಳ ವಿಶೇಷ. ಸಿನಿಮಾ ಸೆಟ್ಟೇರಿದ ನಂತರ ಸೈಲೆಂಟ್ ಆಗಿ ಶೂಟಿಂಗ್ ಮಾಡುತ್ತಿರುವ ಚಿತ್ರತಂಡ ಈಗ ಮೇಕಿಂಗ್ ವಿಚಾರದಲ್ಲಿ ಗಮನ ಸೆಳೆದಿದೆ.
ಸುಮಾರು 300 ವರ್ಷದ ಹಳೆಯ ಚರ್ಚ್ ಬಳಿ ಪ್ರೇಮಂ ಪೂಜ್ಯಂ ಚಿತ್ರೀಕರಣ ಮಾಡಿದ್ದು, ಆ ಫೋಟೋವನ್ನು ಪ್ರೇಮ್ ಹಂಚಿಕೊಂಡಿದ್ದಾರೆ. ಧರ್ಮಸ್ಥಳದಲ್ಲಿ ಈ ಪುರಾತನ ಚರ್ಚ್ ಇದ್ದು, ನಿರ್ದೇಶಕನ ಜೊತೆ ಪ್ರೇಮ್ ಕಾಣಿಸಿಕೊಂಡಿದ್ದಾರೆ.

ಅಂದ್ಹಾಗೆ, ಈ ಚಿತ್ರಕ್ಕೆ ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಕ್ಷಿತಾ ಕೆಡಂಬಾಡಿ ಮತ್ತು ಡಾ ರಾಜ್ ಕುಮಾರ್ ಜಾನಕಿ ರಾಮನ್ ಇಬ್ಬರು ಬಂಡವಾಳ ಹಾಕಿದ್ದಾರೆ.
ಇದೊಂದು ರೋಮ್ಯಾಂಟಿಕ್ ಜಾನರ್ ಸಿನಿಮಾ ಆಗಿದ್ದು, ಈ ಚಿತ್ರದಲ್ಲಿ ಪ್ರೇಮ್ ಹಲವು ಶೇಡ್ ಗಳಲ್ಲಿ ನಟಿಸುತ್ತಿದ್ದಾರಂತೆ. ನವನಟಿ ಬ್ರಿಂದಾ ಆಚಾರ್ಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಈ ಚಿತ್ರದ ಮೊದಲ ದೃಶ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಾಪ್ ಮಾಡಿದ್ದರು.


Click it and Unblock the Notifications











