ವಿಡಿಯೋ : ದರ್ಶನ್, ಸುದೀಪ್, ಪುನೀತ್ ಇವರೆಲ್ಲ ಯಾರು?
ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಇವರು ಯಾರು? ಅಂತ ನಟ ಜಗ್ಗೇಶ್ ಕೇಳಿದ್ದಾರೆ. ಆದರೆ, ಇದೆಲ್ಲ ಸಿನಿಮಾದ ಪಾತ್ರವಾಗಿ ಮಾತ್ರ. ಅದು ಕೂಡ ಒಂದು ಕಾಮಿಡಿ ದೃಶ್ಯದಲ್ಲಿ.
'ಪ್ರೀಮಿಯರ್ ಪದ್ಮಿನಿ' ಸಿನಿಮಾದ ಟ್ರೇಲರ್ ಯುಗಾದಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದೆ. ಟ್ರೇಲರ್ ನಲ್ಲಿನ ಬಹಳಷ್ಟು ದೃಶ್ಯಗಳು ಹಾಗೂ ಡೈಲಾಗ್ ಗಳು ಗಮನ ಸೆಳೆದಿದೆ.
ಟ್ರೇಲರ್ ನಲ್ಲಿ ಬರುವ ಒಂದು ಕಾಮಿಡಿ ಡೈಲಾಗ್ ನಲ್ಲಿ ''ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಇವರ ಹಾಡು ನೀವು ಕೇಳುವುದಿಲ್ಲಲ್ವಾ, ಎಂದಾಗ ಇವರೆಲ್ಲ ಯಾರು? ಎಂದು ಜಗ್ಗೇಶ್ ಕೇಳುತ್ತಾರೆ.

ಅಂದಹಾಗೆ, ಸಿನಿಮಾದ ಟ್ರೇಲರ್ ತುಂಬ ಚೆನ್ನಾಗಿದೆ. ಅನೇಕ ಭಾವನಾತ್ಮಕ ದೃಶ್ಯಗಳು ತುಂಬಿವೆ. ಜಗ್ಗೇಶ್ ಸುಧಾರಾಣಿ, ಮಧು ಬಾಲ, ಪ್ರಮೊದ್ ಪಂಚು, ಹಿತಾ ಚಂದ್ರಶೇಖರ್, ವಿವೇಕ್ ಸಿಂಹ ಹೀಗೆ ಎಲ್ಲ ಪಾತ್ರಗಳು ತುಂಬ ಚೆನ್ನಾಗಿ ಮೂಡಿಬಂದಿದೆ.
ಅರ್ಜುನ್ ಜನ್ಯ ಮ್ಯೂಸಿಕ್ ಇಂಪಾಗಿದೆ. ಸಿನಿಮಾಟೋಗ್ರಾಫಿ ತಂಪಾಗಿದೆ. ಶ್ರುತಿ ನಾಯ್ಡು ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ರಮೇಶ್ ಇಂದಿರಾ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದ ಟ್ರೇಲರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.


Click it and Unblock the Notifications











