For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರದಲ್ಲಿ ಹೋಮ ಮಾಡಿಸಿದ ನಟ ಜಗ್ಗೇಶ್

  |

  ನಟ ಜಗ್ಗೇಶ್ ಇಂದು ವಿಶೇಷ ಹೋಮ ಮಾಡಿಸಿದ್ದಾರೆ. ತಮ್ಮ 'ಪ್ರೀಮಿಯರ್ ಪದ್ಮಿನಿ' ಸಿನಿಮಾ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದ್ದು, ಈ ಕಾರಣ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

  ಬೆಂಗಳೂರಿನ ಅನುಪಮ ಚಿತ್ರಮಂದಿರದಲ್ಲಿ ಹೋಮ ಮಾಡಿಸಿರುವ ಅವರು, ಸಿನಿಮಾದ ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ಸಿನಿಮಾದ ನಿರ್ದೇಶಕ ರಮೇಶ್ ಇಂದಿರಾ ಹಾಗೂ ನಟ ಪ್ರಮೋದ್ ಪಂಜು ಭಾಗಿಯಾಗಿದ್ದಾರೆ.

  ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಟ ಜಗ್ಗೇಶ್

  ''ಪ್ರೀಮಿಯರ್ ಪದ್ಮಿನಿ' ಚಿತ್ರಕ್ಕೆ ಹಾಗೂ ಈ ಚಿತ್ರಕ್ಕಾಗಿ ಶ್ರಮಿಸಿದ ಸರ್ವರಿಗೂ ಶುಭವಾಗಲಿ ಎಂದು ರಾಯರಲ್ಲಿ ಪ್ರಾರ್ಥನೆ...'' ಎಂದಿರುವ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಪೂಜೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ನಟ ಜಗ್ಗೇಶ್ ದೇವರ ಮೇಲೆ ಅಪಾರ ನಂಬಿಕೆ ಹೊಂದಿರುವ ವ್ಯಕ್ತಿ. ಶಾಸ್ತ್ರ, ಪೂಜೆ ಇವುಗಳನ್ನು ಬಹಳ ಇಷ್ಟು ಪಡುವವರು ಅವರು, ರಾಘವೇಂದ್ರ ಸ್ವಾಮಿಗಳ ಅಪ್ಪಟ್ಟ ಭಕ್ತ ಕೂಡ ಹೌದು. ಈ ಹಿಂದೆ '8MM' ಸಿನಿಮಾಗೆ ಕೂಡ ಜಗ್ಗೇಶ್ ಇದೇ ರೀತಿ ಪೂಜೆ ಮಾಡಿಸಿದ್ದರು.

  ಅಂದಹಾಗೆ, 'ಪ್ರೀಮಿಯರ್ ಪದ್ಮಿನಿ' ಸಿನಿಮಾ ಬೆಂಗಳೂರಿನ ಅನುಪಮ ಸೇರಿದಂತೆ ರಾಜ್ಯಾದಂತ್ಯ ಇಂದು ರಿಲೀಸ್ ಆಗುತ್ತಿದೆ. ಶ್ರುತಿ ನಾಯ್ಡು ಚಿತ್ರದ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಜಗ್ಗೇಶ್, ಸುಧಾರಾಣಿ, ಹಿತಾ ಚಂದ್ರಶೇಖರ್, ಪಂಜು, ಮಧು, ವಿಕ್ರಮ್ ಸಿಂಹ ನಟಿಸಿದ್ದಾರೆ.

  English summary
  Kannada actor Jaggesh and Premier Padmini team did puja in anupama theater Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X