For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ಮುಗಿದ ಮೇಲೆ ಮತ್ತೆ ನಟನೆಗೆ ಮರಳಿದ ಪ್ರೇಮ್

  |

  ನಿರ್ದೇಶಕ ಪ್ರೇಮ್ ಈಗ ಮತ್ತೆ ನಟನೆಗೆ ಮರಳಿದ್ದಾರೆ. ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಕಾಂಬಿನೇಶನ್ ನಲ್ಲಿ ಬಂದ 'ದಿ ವಿಲನ್' ಸಿನಿಮಾದ ನಂತರ ಪ್ರೇಮ್ ಮತ್ತೆ ಅಭಿನಯವನ್ನು ಪ್ರಾರಂಭ ಮಾಡಿದ್ದಾರೆ.

  ಪ್ರಾರಂಭದಲ್ಲಿ ಪ್ರೇಮ್ ನಿರ್ದೇಶಕನಾಗಿ ಗುರುತಿಸಿಕೊಂಡರೂ, 'ಪ್ರೀತಿ ಏಕೆ ಭೂಮಿ ಮೇಲಿದೆ' ಮೂಲಕ ನಟನಾದರು. ನಟನೆ, ನಿರ್ದೇಶನ ಎರಡನ್ನು ಪ್ರೇಮ್ ನಿಭಾಯಿಸಿಕೊಂಡು ಹೋಗುತ್ತಿದ್ದರು. ಆದರೆ, ಅವರ ನಟನೆಯ ಸಿನಿಮಾಗಳಲ್ಲಿ ಯಾವುದೂ ಕೂಡ ದೊಡ್ಡ ಮಟ್ಟದ ಯಶಸ್ಸುಗಳಿಸಿಲ್ಲ ಎನ್ನುವುದು ಅಷ್ಟೇ ಸತ್ಯ.

  ಇತ್ತೀಚಿಗೆ ಪ್ರೇಮ್ ನಿರ್ದೇಶನದಲ್ಲಿ ಬಂದ ಬಹುನಿರೀಕ್ಷಿತ ಸಿನಿಮಾ 'ದಿ ವಿಲನ್' ಹೆಚ್ಚು ನೆಗೆಟಿವ್ ಪ್ರತಿಕ್ರಿಯೆಯನ್ನು ಪಡೆಯಿತು. ಪ್ರೇಮ್ ವಿರುದ್ಧ ಅಭಿಮಾನಿಗಳು ಗರಂ ಆದರು. ಸಿನಿಮಾ ಹಣ ಮಾಡಿದರೂ ದೊಡ್ಡ ಮಟ್ಟದಲ್ಲಿ ಜನರ ಪ್ರೀತಿ ಪಡೆಯಲು ಸಾಧ್ಯ ಆಗಲಿಲ್ಲ.

  ಭ್ರಮೆ ಅಲ್ಲ: 'ಬಿಗ್ ಬಾಸ್' ಮನೆಯೊಳಗೆ ಹೋಗಿ ಬಂದ ಶಿವಣ್ಣ-ಪ್ರೇಮ್.!

  ಅದೇನೇ ಇದ್ದರೂ, ಈಗ ಪ್ರೇಮ್ ಮತ್ತೆ ನಟನೆ ಶುರು ಮಾಡಿದ್ದು, ಅದ್ಯಾವ ಸಿನಿಮಾ ಎಂಬ ವಿವರ ಮುಂದಿದೆ ಓದಿ..

  ಮತ್ತೆ ಶುರುವಾದ 'ಗಾಂಧಿಗಿರಿ'

  ಮತ್ತೆ ಶುರುವಾದ 'ಗಾಂಧಿಗಿರಿ'

  ನಿರ್ದೇಶಕ ಪ್ರೇಮ್ ಅವರ 'ಗಾಂಧಿಗಿರಿ' ಸಿನಿಮಾ 'ದಿ ವಿಲನ್' ಸಿನಿಮಾಗೆ ಮುಂಚೆಯೇ ಶುರು ಆಗಿತ್ತು. ಆದರೆ, ಅರ್ಧದಲ್ಲಿಯೇ ಆ ಚಿತ್ರದ ಚಿತ್ರೀಕರಣ ನಿಂತಿದ್ದು, ಈಗ ಸಿನಿಮಾದ ಶೂಟಿಂಗ್ ಮತ್ತೆ ಪ್ರಾರಂಭವಾಗಿದೆ. ಪ್ರೇಮ್ ಈಗ ಆ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

  ಮೈಸೂರಿನಲ್ಲಿ ಶೂಟಿಂಗ್

  ಮೈಸೂರಿನಲ್ಲಿ ಶೂಟಿಂಗ್

  'ಗಾಂಧಿಗಿರಿ' ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ನಿನ್ನೆಯಿಂದ ಚಿತ್ರದ ಶೂಟಿಂಗ್ ಶುರುವಾಗಿದ್ದು, 30 ದಿನಗಳ ಕಾಲ ಅಲ್ಲಿಯೇ ನಡೆಯಲಿದೆಯಂತೆ. ಇನ್ನು ಈ ಚಿತ್ರ 2017ರಲ್ಲಿಯೇ ಪ್ರಾರಂಭವಾಗಿದ್ದು, ಒಂದಲ್ಲ ಒಂದು ಕಾರಣಕ್ಕೆ ಚಿತ್ರೀಕರಣ ತಡ ಆಗುತ್ತಿತ್ತು.

  ಮತ್ತೆ ಅಮ್ಮನಾದ ಅರುಂಧತಿ ನಾಗ್

  ಮತ್ತೆ ಅಮ್ಮನಾದ ಅರುಂಧತಿ ನಾಗ್

  ರಾಗಿಣಿ ದ್ವಿವೇದಿ ಈ ಸಿನಿಮಾದ ನಾಯಕಿ ಆಗಿದ್ದು, ಟೀಚರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅರುಂಧತಿ ನಾಗ್ ಸಿನಿಮಾದಲ್ಲಿ ಪ್ರೇಮ್ ತಾಯಿಯಾಗಿ ನಟಿಸುತ್ತಿದ್ದಾರೆ. 'ಜೋಗಿ' ಸಿನಿಮಾದಲ್ಲಿ ಶಿವಣ್ಣನ ತಾಯಿ ಕಾಣಿಸಿಕೊಂಡಿದ್ದ ಅರುಂಧತಿ ನಾಗ್ ಈಗ ಪ್ರೇಮ್ ಅವರ ಅಮ್ಮನಾಗಿದ್ದಾರೆ.

  ಪ್ರೇಮ್ ಶಿಷ್ಯನ ಸಾರಥ್ಯ

  ಪ್ರೇಮ್ ಶಿಷ್ಯನ ಸಾರಥ್ಯ

  'ಗಾಂಧಿಗಿರಿ' ಸಿನಿಮಾದ ನಿರ್ದೇಶನ ಮಾಡುತ್ತಿರುವುದು ರಘು ಹಾಸನ್. ಇವರು ಪ್ರೇಮ್ ಅವರ ಶಿಷ್ಯ. ಉಳಿದಂತೆ, ರಾಜೇಶ್ ಪಿ ಪಟೇಲ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅನೂಪ್ ಸಿಳೀನ್ ಹಾಡುಗಳು ಸಿನಿಮಾದಲ್ಲಿ ಇರಲಿದೆ.

  English summary
  Kannada Director, Actor Prem's 'Gandigiri' kannada movie shooting begins in mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X