ಚಿರು ಸರ್ಜಾ ನಿಧನ: ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ಅಂತ್ಯ ಕ್ರಿಯೆಗೆ ಸಕಲ ಸಿದ್ಧತೆ

ನಟ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಕನಕಪುರ ರಸ್ತೆ ನೆಲೆಗುಳಿಯಲ್ಲಿರುವ ಧ್ರುವ ಸರ್ಜಾ ಅವರ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಅಂತ್ಯ ಕ್ರಿಯೆ ನೆರವೇರಲಿದೆ. ಈಗಾಗಲೆ ಫಾರ್ಮ್ ಹೌಸ್ ನಲ್ಲಿ ಜಾಗ ನಿಗದಿ ಮಾಡಿದ್ದು, ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ.

Recommended Video

Chiranjeevi Sarja : ಕನಕಪುರ ಬಳಿಯ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ

ಕಳೆದ 3 ವರ್ಷಗಳ ಹಿಂದೆ ಈ ಫಾರ್ಮ್ ಹೌಸ್ ಅನ್ನು ಧ್ರುವ ಸರ್ಜಾ ಖರೀದಿ ಮಾಡಿದ್ದರು. ಫಾರ್ಮ್ ಹೌಸ್ ಎಂದರೆ ಚಿರು ಸರ್ಜಾಗೆ ತುಂಬಾ ಇಷ್ಟವಂತೆ. ಹಾಗಾಗಿ ಆಗಾಗ್ಗೆ ಈ ಫಾರ್ಮ್ ಹೌಸ್ ಗೆ ಭೇಟಿ ಮಾಡುತ್ತಿದ್ದರು. ಈಗ ಚಿರು ತನ್ನ ನೆಚ್ಚಿನ ಜಾಗದಲ್ಲಿಯೆ ಚಿರನಿದ್ರೆಯಲ್ಲಿರಲಿದ್ದಾರೆ.

ಸದ್ಯ ಚಿರು ಸರ್ಜಾ ಪಾರ್ಥಿವ ಶರೀರ ಅವರ ನಿವಾಸ ಬೆಂಗಳೂರಿನ ಬಸವನಗುಡಿಯಲ್ಲಿ ಇರಿಸಲಾಗಿದೆ. ಇಂದು ಮಧ್ಯಾಹ್ನ ಸಮಾರು 12ಗಂಟೆ ವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರೆ ಅಂತಿಮ ದರ್ಶನದ ಸಮಯವನ್ನು ಮುಂದೂಡುವ ಸಾಧ್ಯತೆ ಇದೆ.

Preparation For Chiranjeevi Sarja Funeral At Dhruva Sarja Farm House

ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಿರು ಪಾರ್ಥಿವ ಶರೀರವನ್ನು ಬೃಂದಾವನ ಫಾರ್ಮ್ ಹೌಸ್ ಗೆ ಕರೆತರಲಾಗುತ್ತೆ. 4 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ಪರಿಣಾಮ ಫಾರ್ಮೌ ಹೌಸ್ ಗೆ ಕೆಲವೇ ಕೆಲವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಕುಟುಂಬದವರು ಮತ್ತು ಚಿತ್ರರಂಗದ ಗಣ್ಯರಿಗೆ ಅವಕಾಶ ಮಾಡಿ ಕೊಡಲಾಗಿದೆ. ಫಾರ್ಮ್ ಹೌಸ್ ಸುತ್ತಮುತ್ತ ಪೊಲೀಸ್ ಭದ್ರತೆ ಒದಗಿಲಸಾಗಿದ್ದು, ಎರಡು ಪ್ರವೇಶ ದ್ವಾರದಲ್ಲಿಯೂ ಬ್ಯಾರಿಕೇಡ್ ಹಾಕಲಾಗಿದೆ.

More from Filmibeat

English summary
Preparation for Chiranjeevi Sarja Funeral at the place of Dhruva Sarja farm house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X