ಡಿ ಬಾಸ್ ಆಗಮನಕ್ಕೆ ಸಜ್ಜಾದ ಹುಬ್ಬಳ್ಳಿ; 'ರಾಬರ್ಟ್' ಕಾರ್ಯಕ್ರಮದ ತಯಾರಿ ಹೇಗಿದೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ರಿಲೀಸ್ ಗೆ ಕೆಲವು ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ಸಿನಿಮಾತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದು, ತೆಲುಗು ಮತ್ತು ಕನ್ನಡ ಎರಡು ಭಾಷೆಯಲ್ಲಿ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ.
Recommended Video
ಕನ್ನಡ ಮತ್ತು ತೆಲುಗಿನಲ್ಲಿ ಅದ್ದೂರಿ ಪ್ರಿ ರಿಲೀಸ್ ಈವೆಂಟ್ ಅನ್ನು ಹಮ್ಮಿಕೊಂಡಿದೆ ಸಿನಿಮಾತಂಡ. ಉತ್ತರ ಕರ್ನಾಟಕ ಮಂದಿಯನ್ನು ಸೆಳೆಯುವ ಸಲುವಾಗಿ ರಾಬರ್ಟ್ ತಂಡ ಅದ್ದೂರಿ ಕಾರ್ಯಕ್ರಮವನ್ನು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದೆ. ದರ್ಶನ್ ಅವರನ್ನು ಸ್ವಾಗತಿಸಲು ಹುಬ್ಬಳ್ಳಿ ಅಭಿಮಾನಿಗಳು ಸಜ್ಜಾಗಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ. ಮುಂದೆ ಓದಿ..

ದರ್ಶನ್ ಆಗಮನಕ್ಕೆ ಸಜ್ಜಾದ ಹುಬ್ಬಳ್ಳಿ
ರಾಬರ್ಟ್ ಸಿನಿಮಾದ ಅದ್ದೂರಿ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ. ಹುಬ್ಬಳ್ಳಿಯ ದೇಸಾಯಿ ಸರ್ಕಲ್ ಕೇಶ್ವಾಪುರ ರೋಡ್ ನ ರೈಲ್ವೆ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಡಿ ಬಾಸ್ ಅದ್ದೂರಿ ಸ್ವಾಗತಕ್ಕೆ ಮೈದಾನ ಸಜ್ಜಾಗಿದೆ. ಮೈದಾನದ ಸುತ್ತ ಮತ್ತು ಒಳಗೆ ಅಭಿಮಾನಿಗಳಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ.

ವಿಡಿಯೋ ಹಂಚಿಕೊಂಡ ಅಭಿಮಾನಿಗಳು
ರೈಲ್ವೆ ಮೈದಾನದಲ್ಲಿ ರಾಬರ್ಟ್ ಕಾರ್ಯಕ್ರಮಕ್ಕೆ ಸಜ್ಜಾದ ವೇದಿಕೆಯ ವಿಡಿಯೋವನ್ನು ಅಭಿಮಾನಿಗಳು ಹಂಚಿಕೊಂಡಿದ್ದು, ದರ್ಶನ್ ಫ್ಯಾನ್ಸ್ ಗ್ರೂಪ್ ನಲ್ಲಿ ಹರಿದಾಡುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದ್ದು, ಮೈದಾನದಲ್ಲಿ ಎಲ್ಲಾ ರೀತಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗುತ್ತಿದೆ.

ಹೈದರಾಬಾದ್ ನಲ್ಲಿ ಪ್ರಿ ರಿಲೀಸ್ ಈವೆಂಟ್
ಇಂದು ಫೆಬ್ರವರಿ 26ರಂದು ಹೈದರಾಬಾದ್ ನಲ್ಲಿ ಅದ್ದೂರಿ ಪ್ರಿ ರಿಲೀಸ್ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ದರ್ಶನ್ ಮತ್ತು ತಂಡ ಹೈದರಾಬಾದ್ ಗೆ ತಲುಪಿದ್ದು, ಏರ್ ಪೋರ್ಟ್ ನಿಂದ ಹೊರಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಇನ್ನು ನಟಿ ಆಶಾ ಭಟ್ ಕೂಡ ಹೈದರಾಬಾದ್ ತಲುಪಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ.

ಗುಲ್ಬರ್ಗದಲ್ಲಿ ಕಾರ್ಯಕ್ರಮಕ್ಕೆ ಪ್ಲಾನ್ ಮಾಡಲಾಗಿತ್ತು
ಅಂದಹಾಗೆ ಈ ಮೊದಲು ರಾಬರ್ಟ್ ಅದ್ದೂರಿ ಕಾರ್ಯಕ್ರಮವನ್ನು ಗುಲ್ಬರ್ಗದಲ್ಲಿ ನಡೆಸಲು ಸಿನಿಮಾತಂಡ ಪ್ಲಾನ್ ಮಾಡಿತ್ತು. ತಯಾರಿ ಕೂಡ ನಡೆದಿತ್ತು ಆದರೆ ಕೊರೊನಾ ಕಾರಣದಿಂದ ಪ್ಲಾನ್ ಅಲ್ಲಿಗೆ ನಿಂತುಹೋಗಿತ್ತು. ಇದೀಗ ಸಿನಿಮಾತಂಡ ಪ್ರಿ ರಿಲೀಸ್ ಈವೆಂಟ್ ಗೆ ಹುಬ್ಬಳ್ಳಿ ಆಯ್ಕೆ ಮಾಡಿಕೊಂಡಿದ್ದು, ಅದ್ದೂರಿ ವೇದಿಕೆಯಲ್ಲಿ ರಾಬರ್ಟ್ ಸಿನಿಮಾದ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.


Click it and Unblock the Notifications











