For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬಕ್ಕೆ ಅತ್ಯುತ್ತಮ ಉಡುಗೊರೆ ನೀಡಿದ್ದೇನೆ ಎಂದು ಧ್ರುವ ಸರ್ಜಾಗೆ ವಿಶ್ ಮಾಡಿದ ಪತ್ನಿ ಪ್ರೇರಣಾ

  |

  ಸ್ಯಾಂಡಲ್‌ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು ( ಅಕ್ಟೋಬರ್ 6 ) ಹುಟ್ಟುಹಬ್ಬದ ಸಂಭ್ರಮ. ಅದ್ಧೂರಿಯಾಗಿ 33ನೇ ವಸಂತಕ್ಕೆ ಕಾಲಿಟ್ಟ ಧ್ರುವ ಸರ್ಜಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅಭಿಮಾನಿಗಳು, ಚಿತ್ರರಂಗದ ಕಲಾವಿದರು ಹಾಗೂ ಇತರೆ ನಟರ ಅಭಿಮಾನಿಗಳಿಂದ ಹುಟ್ಟುಹಬ್ಬದ ಅಂಗವಾಗಿ ಶುಭಾಶಯಗಳು ಧ್ರುವ ಸರ್ಜಾಗೆ ಸಂದಿವೆ.

  ಇನ್ನು ಧ್ರುವ ಸರ್ಜಾಗೆ ಕುಟುಂಬ ಸದಸ್ಯರೂ ಸಹ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದು ಪತ್ನಿ ಪ್ರೇರಣಾ ಶಂಕರ್ ಸಾಮಾಜಿಕ ಜಾಲತಾಣದಲ್ಲಿ ಧ್ರುವ ಸರ್ಜಾಗೆ ಶುಭ ಕೋರಿರುವ ವಿಧಾನ ನೆಟ್ಟಿಗರ ಗಮನ ಸೆಳೆದಿದೆ. ಕೇಕ್ ಕತ್ತರಿಸಿ ಮನೆಯಲ್ಲೇ ಸರಳವಾಗಿ ಧ್ರುವ ಸರ್ಜಾ ಹುಟ್ಟುಹಬ್ಬವನ್ನು ಆಚರಿಸಲಾಗಿದ್ದು, ಈ ವೇಳೆ ಧ್ರುವ ತನ್ನ ಹಣೆಗೆ ಮುತ್ತಿಟ್ಟ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ ಪತ್ನಿ ಪ್ರೇರಣಾ ಶಂಕರ್.

  'ಹುಟ್ಟು ಹಬ್ಬದ ಶುಭಾಶಯಗಳು ಪ್ರೀತಿಯ ಪತಿ ಹಾಗೂ ತಂದೆಗೆ. ಮತ್ತು ಈ ಬಾರಿ ನಾನು ಅತ್ಯುತ್ತಮ ಉಡುಗೊರೆಯನ್ನು ನೀಡಿದ್ದೇನೆ ಎಂಬುದು ನನಗೆ ತಿಳಿದಿದೆ' ಎಂದು ಬರೆದುಕೊಂಡು ಶುಭ ಕೋರಿದ್ದಾರೆ ಪ್ರೇರಣಾ. ಹೌದು, ಇತ್ತೀಚೆಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಪ್ರೇರಣಾ ತಮ್ಮ ಮಗುವೇ ಅತ್ಯುತ್ತಮ ಉಡುಗೊರೆ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 2ರಂದು ಧ್ರುವ ಸರ್ಜಾ ಪತ್ನಿ ಪ್ರೇರಣಾ ಅಕ್ಷ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಹಿಂದೆ ಸಂದರ್ಶನವೊಂದರಲ್ಲಿ ಮನೆಯಲ್ಲಿ ಈಗಾಗಲೇ ಗಂಡು ಮಗನಾಗಿ ರಾಯನ್ ಇದ್ದಾನೆ, ನಮಗೆ ಹೆಣ್ಣು ಮಗು ಆದರೆ ಹೆಚ್ಚು ಖುಷಿ ಎಂದು ಧ್ರುವ ಸರ್ಜಾ ಹೇಳಿದ್ದರು. ಅದರಂತೆ ಹೆಣ್ಣು ಮಗು ಮನೆಗೆ ಬಂದ ಸಂಭ್ರಮದಲ್ಲಿರುವ ಧ್ರುವ ಸರ್ಜಾಗೆ ಈ ಬಾರಿಯ ಹುಟ್ಟುಹಬ್ಬ ವಿಶೇಷ ಎಂದೇ ಹೇಳಬಹುದು.

  ಇನ್ನು ಧ್ರುವ ಸರ್ಜಾ ಕಳೆದ ಬಾರಿಯಂತೆ ಈ ಬಾರಿಯೂ ಸಹ ತಮ್ಮ ಹುಟ್ಟುಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿಕೊಂಡಿದ್ದಾರೆ. ಧ್ರುವ ಅಭಿನಯದ ಮುಂದಿನ ಚಿತ್ರಗಳಾದ ಮಾರ್ಟಿನ್ ಹಾಗೂ ಪ್ರೇಮ್ ಕಾಂಬಿನೇಷನ್ ಚಿತ್ರ ತಂಡಗಳೂ ಸಹ ಪೋಸ್ಟರ್‌ಗಳ ಮೂಲಕ ಧ್ರುವ ಸರ್ಜಾಗೆ ಹುಟ್ಟುಹಬ್ಬದ ಶುಭಾಶಯ ಕೋರಿವೆ.

  English summary
  Prerana Shankar Special Wishes to her husband Dhruva Sarja on his Birthday. Read on
  Thursday, October 6, 2022, 15:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X