For Quick Alerts
  ALLOW NOTIFICATIONS  
  For Daily Alerts

  10 ವರ್ಷದ ಹಳೆಯ ಫೋಟೋ ಶೇರ್ ಮಾಡಿ ಪತಿಗೆ ಪ್ರೀತಿಯ ವಿಶ್ ಮಾಡಿದ ಪ್ರೇರಣಾ

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಅವರಿಗೆ ಇಂದು (ಅಕ್ಟೋಬರ್ 06) ಹುಟ್ಟುಹಬ್ಬದ ಸಂಭ್ರಮ. ಪ್ರತಿವರ್ಷ ಧ್ರುವ ಸರ್ಜಾ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಕಳೆದ ವರ್ಷದಿಂದ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕೊರೊನಾ ಕಾರಣ ಮತ್ತು ಸಹೋದರ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ಧ್ರುವ ಸರ್ಜಾ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ.

  ಈ ಬಾರಿ ಸಹ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಧ್ರುವ ಸರ್ಜಾ ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಧ್ರುವ ಸರ್ಜಾಗೆ ಶುಭಾಶಯಗಳ ಮಹಾಪೂರವೇ ಬರುತ್ತಿದೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಪ್ರೀತಿಯ ವಿಶ್ ತಿಳಿಸುತ್ತಿದ್ದಾರೆ. ಇನ್ನು ಧ್ರುವ ಸರ್ಜಾ ಕುಟುಂಬದವರು ಸಹ ಶುಭಾಶಯ ತಿಳಿಸುತ್ತಿದ್ದಾರೆ. ಧ್ರುವ ಸರ್ಜಾ ಪತ್ನಿ ಪ್ರೇರಣಾ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ಫೋಟೋ ಶೇರ್ ಮಾಡಿ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ಮುಂದೆ ಓದಿ..

  ಪತಿಗೆ ಪ್ರೇರಣಾ ಪ್ರೀತಿಯ ಶುಭಾಶಯ

  ಪತಿಗೆ ಪ್ರೇರಣಾ ಪ್ರೀತಿಯ ಶುಭಾಶಯ

  ಅಂದಹಾಗೆ ಧ್ರುವ ಸರ್ಜಾ ಮತ್ತು ಪ್ರೇರಣಾ ಸರ್ಜಾ ಅವರನ್ನು ಅನೇಕ ವರ್ಷಗಳ ಪ್ರೀತಿ. ಇಬ್ಬರು ಪ್ರೀತಿ ಮದುವೆಯಾದವರು. ಧ್ರುವ ಸರ್ಜಾ ಜೊತೆಗಿನ 10 ವರ್ಷಗಳ ಹಳೆಯ ಫೋಟೋವನ್ನು ಶೇರ್ ಮಾಡಿ ಪ್ರೇರಣಾ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ಪ್ರೇರಣಾ ಮಡಿಲಲ್ಲಿ ಮಲಗಿರುವ ಧ್ರುವ ಸರ್ಜಾ ಫೋಟೋವನ್ನು ಪ್ರೇರಣಾ ಫೋಟೋವನ್ನು ಹಂಚಿಕೊಂಡಿದ್ದಾರೆ. "ಇದು ನಾವು, 10 ವರ್ಷಗಳ ಹಿಂದೆ. ನನ್ನ ಪ್ರೀತಿಯ ವ್ಯಕ್ತಿ. ನಿಮ್ಮ ಹೆಂಡತಿ ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತಾಳೆ. ಹುಟ್ಟುಹಬ್ಬದ ಶುಭಾಶಯಗಳು" ಎಂದು ಕ್ಯಾಪ್ಷನ್ ನೀಡಿದ್ದಾರೆ.

  ಮೇಘನಾ ರಾಜ್ ವಿಶ್

  ಮೇಘನಾ ರಾಜ್ ವಿಶ್

  ಧ್ರುವ ಸರ್ಜಾ ಅತ್ತಿಗೆ, ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಕೂಡ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಪತಿ ಚಿರಂಜೀವಿ ಮತ್ತು ಮೈದುನ ಧ್ರುವ ಸರ್ಜಾ ಜೊತೆ ಇರುವ ಸಂತೋಷದ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋಗೆ ಹುಟ್ಟುಹಬ್ಬದ ಶುಭಾಶಯಗಳು ಬಿಲ್ ಎಂದು ಕ್ಯಾಪ್ಷನ್ ನೀಡಿದ್ದಾರೆ.

  ಅಭಿಮಾನಿಗಳಲ್ಲಿ ಧ್ರುವ ಮನವಿ

  ಅಭಿಮಾನಿಗಳಲ್ಲಿ ಧ್ರುವ ಮನವಿ

  ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಇದ್ದಲ್ಲಿಯೇ ವಿಶ್ ತಿಳಿಸಿ ಎಂದು ಧ್ರುವ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಎರಡು ಕಾರಣಗಳನ್ನು ತಿಳಿಸಿದ್ದರು. "ಎರಡು ದೊಡ್ಡ ಕಾರಣವೆಂದರೆ ಒಂದು, ಕೋವಿಡ್ , ಮತ್ತೊಂದು ನಾನು ಊರಲ್ಲಿ ಇರಲ್ಲ. ಶೂಟಿಂಗಾಗಿ ವೈಜಾಗ್ ನಲ್ಲಿರುತ್ತೇನೆ. ಪ್ರತಿವರ್ಷ ಹೇಗೆ ನಮ್ಮನೆ ಹುಡುಗ ಅಂತ ನನ್ನ ಎಲ್ಲಾ ಅಣ್ಣ ತಮ್ಮಂದಿರು, ಅಕ್ಕ-ತಂಗಿಯರು, ತಾಯಂದಿರು ಹೇಗೆ ಆಶೀರ್ವಾದ ಮಾಡುತ್ತಿದ್ದಿರೊ ಈ ಬಾರಿಯೂ ನನ್ನ ಹುಟ್ಟುಹಬ್ಬಕ್ಕೆ ಆಶೀರ್ವಾದ ಮಾಡಿ" ಎಂದು ಧ್ರುವ ಸರ್ಜಾ ವಿಡಿಯೋ ಮೂಲಕ ಮನವಿ ಮಾಡಿದ್ದರು.

  ಮಾರ್ಟಿನ್ ಸಿನಿಮಾದ ಪೋಸ್ಟರ್ ಬಿಡುಗಡೆ

  ಮಾರ್ಟಿನ್ ಸಿನಿಮಾದ ಪೋಸ್ಟರ್ ಬಿಡುಗಡೆ

  ಇನ್ನು ಹುಟ್ಟುಹಬ್ಬದ ಪ್ರಯುಕ್ತ ಧ್ರುವ ನಟನೆಯ ಮಾರ್ಟಿನ್ ಸಿನಿಮಾದಿಂದ ಭಯಾನಕ ಲುಕ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ನಲ್ಲಿ ಧ್ರುವ ಕೈಗೆ ಬೇಡಿ ಹಾಕಲಾಗಿದ್ದು, ಖರಾಬು ಲುಕ್ ನಲ್ಲಿ ಪೋಸ್ ನೀಡಿದ್ದಾರೆ. ಈ ಪೋಸ್ಟರ್ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಮಾರ್ಟಿನ್ ಸಿನಿಮಾಗೆ ನಿರ್ದೇಶಕ ಎ.ಪಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಾರ್ಟಿನ್ ಚಿತ್ರದಲ್ಲಿ ಕಾಲೇಜ್ ಲವ್ ಸ್ಟೋರಿ ಜೊತೆ ಆಕ್ಷನ್ ಮನರಂಜನೆ ಇರಲಿದೆ. ಧ್ರುವ ಸರ್ಜಾ 'ಗ್ಯಾಂಗ್ ಸ್ಟರ್' ಪಾತ್ರದಲ್ಲಿ ನಟಿಸಲಿದ್ದಾರೆ.

  English summary
  Prerana Wishes Dhruva Sarja on his Birthday by sharing 10 year old pic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X