ಮದುವೆಯಲ್ಲೂ ಗಡ್ಡ ತೆಗೆಯದ ಧ್ರುವ ಸರ್ಜಾ: ಪತ್ನಿ ಪ್ರೇರಣಾಗೆ ಬೇಸರ ಇದ್ಯಾ.?
ಎಲ್ಲರಿಗೂ ಅಷ್ಟೇ.. ಮದುವೆ ಅಂದ್ರೆ ಅವಿಸ್ಮರಣೀಯ ದಿನ. ಜೀವನದ ಅತ್ಯಮೂಲ್ಯ ಕ್ಷಣ. ಹೊಸ ಬದುಕನ್ನು ಆರಂಭಿಸುವ ಈ ದಿನ ಸುಂದರವಾಗಿ ಕಾಣಬೇಕು, ಗ್ರ್ಯಾಂಡ್ ಆಗಿ ರೆಡಿ ಆಗಬೇಕು ಅಂತೆಲ್ಲಾ ಗಂಡು-ಹೆಣ್ಣು ಕನಸು ಕಟ್ಟಿರುತ್ತಾರೆ. ಹುಡುಗಿಯರಿಗೆ ತಮ್ಮ ಲುಕ್ ಬಗ್ಗೆ ಎಷ್ಟು ಕಾಳಜಿ ಇರುತ್ತದೋ, ಅದಕ್ಕೆ ತಕ್ಕ ಹಾಗೇ ತಮ್ಮ ಪಾರ್ಟ್ನರ್ ಕೂಡ ಕಾಣಬೇಕು ಎಂಬ ಇಚ್ಛೆ ಇದ್ದೇ ಇರುತ್ತೆ.
ಹೀಗಿರುವಾಗ ನಿಶ್ಚಿತಾರ್ಥ ಮತ್ತು ಮದುವೆ.. ಎರಡರಲ್ಲೂ ವರ ಉದ್ದ ಕೂದಲು, ಗಡ್ಡ ಬಿಟ್ಟುಕೊಂಡಿದ್ದರೆ ಹೆಣ್ಣಿಗೆ ಬೇಸರ ಆಗಲ್ವಾ.? ಕ್ಲೀನ್ ಶೇವ್ ನಲ್ಲಿ ಪತಿ ಹ್ಯಾಂಡ್ಸಮ್ ಆಗಿ ಕಾಣಬೇಕು ಅಂತ ಪತ್ನಿಗೆ ಆಸೆ ಇರಲ್ವ.?
ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಮದುವೆಗೆ ಹಾಜರ್ ಆಗಿದ್ದ ಎಲ್ಲರಿಗೂ ಇಂತಹ ಪ್ರಶ್ನೆ ತಲೆಯಲ್ಲಿ ಮೂಡದೇ ಇರಲಿಲ್ಲ. ಎಂಗೇಜ್ ಮೆಂಟ್ ಆದಾಗಲೂ ಧ್ರುವ ಸರ್ಜಾ ಉದ ಕೂದಲು ಮತ್ತು ಗಡ್ಡ ಬಿಟ್ಟಿದ್ದರು. ಅದಾಗಿ ವರ್ಷ ಕಳೆದ ಮೇಲೆ ನಡೆದ ಮದುವೆ ದಿನವೂ ಧ್ರುವ ಸರ್ಜಾ ಅದೇ ಲುಕ್ ಮೇನ್ಟೇನ್ ಮಾಡಿದ್ದರು. ಈ ಬಗ್ಗೆ ಪ್ರೇರಣಾ ಶಂಕರ್ ಮುನಿಸಿಕೊಂಡಿದ್ದಾರಾ.? ಈ ಪ್ರಶ್ನೆಗೆ ಧ್ರುವ ಪತ್ನಿ ಪ್ರೇರಣಾ ಉತ್ತರ ಕೊಟ್ಟಿದ್ದಾರೆ. ಮುಂದೆ ಓದಿರಿ...

ಪ್ರೇರಣಾ ಶಂಕರ್ ಏನಂದರು.?
ಧ್ರುವ ಸರ್ಜಾ ಉದ್ದ ಕೂದಲು ಮತ್ತು ಗಡ್ಡ ಬಿಟ್ಟಿರುವ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ''ನನಗೆ ಧ್ರುವ ಹೇಗಿದ್ದರೂ ಇಷ್ಟ. ಮೂವಿನೇ ಮುಖ್ಯ. ಸಿನಿಮಾಗಾಗಿಯೇ ಗಡ್ಡ ಬಿಟ್ಟಿದ್ದಾರೆ. ಸಿನಿಮಾನೇ ನಮ್ಮ ಜೀವನ. ಅದನ್ನೇ ಬಿಟ್ಟು, ಶೇವ್ ಮಾಡಿಕೊಂಡು ನಾವೇನು ಮದುವೆ ಆಗಬೇಕಾಗಿರಲಿಲ್ಲ. ಪರ್ವಾಗಿಲ್ಲ... ನಾನು ಖುಷಿಯಾಗಿ ಇದ್ದೇನೆ'' ಎಂದು ಪ್ರೇರಣಾ ಶಂಕರ್ ಹೇಳಿದ್ದಾರೆ.

ಇನ್ನೂ ಚಿತ್ರೀಕರಣ ಇದೆ ಗುರು.!
''ಸ್ವಲ್ಪ ಹೇರ್ ಟ್ರಿಮ್ ಮಾಡಿಸಿದ್ದೇನೆ. ಆದರೆ ವ್ಯತ್ಯಾಸ ಕಾಣುತ್ತಿಲ್ಲ. ಈ ತಿಂಗಳು ಮತ್ತೆ ಶೂಟಿಂಗ್ ಇದೆ. ಹೀಗಾಗಿ ಕ್ಲೀನ್ ಶೇವ್ ಮಾಡಿಲ್ಲ'' ಎಂದಿದ್ದಾರೆ ನಟ ಧ್ರುವ ಸರ್ಜಾ.

ನಮ್ಮ ಪುಣ್ಯ.!
''ನಮ್ಮ ಮದುವೆಗೆ ಅಭಿಮಾನಿಗಳು ಬಂದಿದ್ದೇ ನಮ್ಮ ಪುಣ್ಯ. ಅಷ್ಟು ದೂರದಿಂದ ಬಂದ ಅಭಿಮಾನಿಗಳು ಒಂದು ಸೆಲ್ಫಿ ಕೇಳ್ತಾರೆ. ಇದು ನಮಗೆ ತುಂಬಾ ಅಮೂಲ್ಯ'' ಎಂದು ಮದುವೆ ನಂತರ ಧ್ರುವ ಸರ್ಜಾ ಮತ್ತು ಪ್ರೇರಣಾ ಸಂತಸ ಹಂಚಿಕೊಂಡಿದ್ದಾರೆ.

ಒಟ್ಟಿಗೆ ಓಡಾಡಿರುವ ಓರಗಿತ್ತಿಯರು.!
ಮದುವೆ ಸಂಭ್ರಮ ಮುಗಿದ ಕೂಡಲೆ ಓರಗಿತ್ತಿಯರಾದ ಮೇಘನಾ ರಾಜ್ ಮತ್ತು ಪ್ರೇರಣಾ ಒಂದು ರೌಂಡ್ ಔಟಿಂಗ್ ಗೆ ಹೋಗಿ ಬಂದಿದ್ದಾರೆ. ಸರ್ಜಾ ಕುಟುಂಬಕ್ಕೆ ಪ್ರೇರಣಾ ಬಂದಿರೋದು ಮೇಘನಾ ರಾಜ್ ಗೆ ಖುಷಿ ತಂದಿದೆ ಅನ್ನೋದಕ್ಕೆ ಈ ಫೋಟೋನೇ ಸಾಕ್ಷಿ.


Click it and Unblock the Notifications











