twitter
    For Quick Alerts
    ALLOW NOTIFICATIONS  
    For Daily Alerts

    ಪ್ರಧಾನಿ ಕಾರ್ಯಾಲಯದಿಂದ ವಿಜಯ್ ಕಿರಗಂದೂರ್‌ಗೆ ಪತ್ರ..? ಬೆಸ್ತು ಬಿದ್ದ ಹೊಂಬಾಳೆ ಟೀಂ!

    |

    ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೆಜಿಎಫ್ 2' ಬಿಡುಗಡೆಗೆ ಯಶ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಈಗಾಗಲೇ ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಎಂದು ಟೀಮ್ ಅನೌನ್ಸ್ ಮಾಡಿದೆ. ಆದರೆ, ಇನ್ನೂ ಅಭಿಮಾನಿಗಳಿಗೆ ನಂಬಿಕೆಯೇ ಬರುತ್ತಿಲ್ಲ. ಮತ್ತೆ 'ಕೆಜಿಎಫ್ 2' ಪೋಸ್ಟ್ ಪೋನ್ ಆಗುತ್ತಾ? ಅನ್ನುವ ಗೊಂದಲದಲ್ಲಿ ಇದ್ದಾರೆ. ಇದಕ್ಕೆ ಕಾರಣ ಇನ್ನೂ ಚಿತ್ರತಂಡ ಒಂದೇ ಒಂದು ಅಪ್‌ಡೇಟ್ ಕೊಟ್ಟಿ,ಲ್ಲ.

    'ಕೆಜಿಎಫ್ 2' ಟೀಸರ್ ಬಿಟ್ಟರೆ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು ಬಿಟ್ಟರೆ, ಟ್ರೈಲರ್, ಸಾಂಗ್ ಬಗ್ಗೆ ಸುದ್ದಿನೇ ಇಲ್ಲ. ಈ ಮಧ್ಯೆ ರೀ-ಶೂಟ್ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿರುವ ವಿಚಾರ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಈ ಮಧ್ಯೆ ಸ್ವತ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ 'ಕೆಜಿಎಫ್ 2' ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್‌ಗೆ ಪತ್ರ ಬರೆದಿರುವ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಸಲಿಗೆ ಮೋದಿ ಬರೆದ ಪತ್ರ ಗುಟ್ಟೇನು ಅನ್ನುವುದನ್ನು ನೋಡಿ.

    ರಾಕಿಂಗ್ ಸ್ಟಾರ್ ಯಶ್ ಟೆಂಪಲ್ ರನ್ ಹಿಂದಿನ ರಹಸ್ಯ ಬಯಲು! ರಾಕಿಂಗ್ ಸ್ಟಾರ್ ಯಶ್ ಟೆಂಪಲ್ ರನ್ ಹಿಂದಿನ ರಹಸ್ಯ ಬಯಲು!

    ವಿಜಯ್ ಕಿರಗಂದೂರ್‌ ಮೋದಿ ಪತ್ರ

    ವಿಜಯ್ ಕಿರಗಂದೂರ್‌ ಮೋದಿ ಪತ್ರ

    ಇಂದು (ಫೆ 22) ಸಂಜೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ 'ಕೆಜಿಎಫ್ 2' ಚಿತ್ರದ ನಿರ್ಮಾಪಕರಿಗೆ ಬರೆದ ಪತ್ರವೊಂದು ಹರಿದಾಡುತ್ತಿದೆ. ಈ ಪತ್ರವನ್ನು ಪ್ರಧಾನ ಮಂತ್ರಿ ಕಾರ್ಯಾಲಯದಿಂದಲೇ ಹೊರಡಿಸಿತ್ತು. ಸ್ವತ: ನರೇಂದ್ರ ಮೋದಿಯೇ ಈ ಪತ್ರದಲ್ಲಿ 'ಕೆಜಿಎಫ್ 2' ಸಿನಿಮಾ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಬಳಿ ಅಪ್‌ಡೇಟ್ ಕೇಳಿದ್ದರು. ಇದೇ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಹೊಂಬಾಳೆ ಫಿಲಂಸ್ ಈ ಪತ್ರವನ್ನು ಶೇರ್ ಮಾಡಿಕೊಂಡಿದೆ.

    ಮೋದಿ ಬರೆದ ಪತ್ರದಲ್ಲಿ ಏನಿದೆ?

    ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದಲ್ಲಿ 'ಕೆಜಿಎಫ್ 2' ಸಿನಿಮಾ ಬಗ್ಗೆ ಅವರೂ ಕಾತುರರಾಗಿದ್ದು, ಸಿನಿಮಾ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ. "1.3 ಬಿಲಿಯನ್ ಭಾರತೀಯರ ಪರವಾಗಿ, ನನ್ನ ಜವಾಬ್ದಾರಿಯಿಂದ ಕೇಳುತ್ತಿದ್ದೇನೆ. 'ಕೆಜಿಎಫ್ 2' ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿಯನ್ನು ನೀಡಬೇಕೆಂದು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬಳಿ ಕೇಳಿಕೊಳ್ಳುತ್ತೇನೆ. " ಎಂಬರ್ಥದಲ್ಲಿ ಬರೆಯಾಗಿದೆ. ಈ ಪತ್ರವನ್ನು ಹೊಂಬಾಳೆ ಫಿಲಂಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಹೊಂಬಾಳೆ ಫಿಲಂಸ್ ಪ್ರತಿಕ್ರಿಯೆ ಏನು?

    ಹೊಂಬಾಳೆ ಫಿಲಂಸ್ ಪ್ರತಿಕ್ರಿಯೆ ಏನು?

    ಮೋದಿ ಬರೆದಿದ್ದಾರೆ ಎನ್ನಲಾದ ಪತ್ರ ಅಪ್ಪಟ ನಕಲಿ. ಇದನ್ನು ಅಭಿಮಾನಿಗಳೇ ಬೇಸತ್ತು ನಕಲು ಮಾಡಿದ ಪತ್ರ. ಇದನ್ನು ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದಿಂದ ಗಣರಾಜ್ಯೋತ್ಸವದ ದಿನದಂದು ಪ್ರಮುಖ ಗಣ್ಯ ವ್ಯಕ್ತಿಗಳಿಗೆ ನೀಡಲಾಗಿತ್ತು. ಅದನ್ನೇ ಯಶ್ ಅಭಿಮಾನಿಗಳು ನಕಲು ಮಾಡಿದ್ದರು. ಇದನ್ನು ಗುರುತಿಸಿದ ಹೊಂಬಾಳೆ ಫಿಲಂಸ್ ಪ್ರತಿಕ್ರಿಯೆ ನೀಡಿದೆ. " ಪ್ರಾಮಾಣಿಕವಾಗಿ ಆದಷ್ಟು ಬೇಗ ಸಿನಿಮಾದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಸರ್." ಎಂದು ಪ್ರತಿಕ್ರಿಯೆ ನೀಡಿದೆ.

    ಏಪ್ರಿಲ್ 14ಕ್ಕೆ 'ಕೆಜಿಎಫ್ 2' ರಿಲೀಸ್

    ಏಪ್ರಿಲ್ 14ಕ್ಕೆ 'ಕೆಜಿಎಫ್ 2' ರಿಲೀಸ್

    ಕೊರೊನಾದಿಂದಾಗಿ 'ಕೆಜಿಎಫ್ 2' ಸಿನಿಮಾವನ್ನು ಎಂಟು ತಿಂಗಳು ಹೊಂಬಾಳೆ ಸಂಸ್ಥೆ ಮುಂದೂಡಿತ್ತು. ಏಪ್ರಿಲ್ 14ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಈಗಾಗಲೇ ಘೋಷಣೆ ಕೂಡ ಮಾಡಿದೆ. ಆದರೆ, ಇನ್ನೂ ಅಭಿಮಾನಿಗಳಿಗೆ ಹೇಳಿದ ದಿನದಂದೇ ಬಿಡುಗಡೆ ಮಾಡುತ್ತಾ ಎನ್ನುವ ಬಗ್ಗೆ ಅನುಮಾನವಿದೆ. ಇದಕ್ಕೆ ಕಾರಣ ಐಪಿಎಲ್. ಮಾರ್ಚ್ 27ರಿಂದ ಐಪಿಎಲ್ ಶುರುವಾಗಲಿದ್ದು, ಅದೇ ಬಿಸಿಯಲ್ಲೇ ಸಿನಿಮಾ ರಿಲೀಸ್ ಮಾಡುತ್ತಾರಾ ಎನ್ನುವ ಅನುಮಾನ ಕಾಡುತ್ತಿದೆ. ಆದರೆ, ಈ ಬಗ್ಗೆ ಕೆಜಿಎಫ್ ತಂಡ ಏನೂ ಬಹಿರಂಗಪಡಿಸಿಲ್ಲ.

    English summary
    Prime Minister Narendra Modi wrote letter to Vijay Kiragnduru for KGF 2 update. A fake latter was distributed by Yash fans.
    Wednesday, February 23, 2022, 9:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X