twitter
    For Quick Alerts
    ALLOW NOTIFICATIONS  
    For Daily Alerts

    ಮೆಲ್ಬರ್ನ್ ಚಿತ್ರೋತ್ಸವ: 'ಸೂರರೈ ಪೊಟ್ರು' ಅತ್ಯುತ್ತಮ ಚಿತ್ರ, 'ಪಿಂಕಿ ಎಲ್ಲಿ?' ನಿರ್ದೇಶಕರಿಗೆ ಪ್ರಶಸ್ತಿ

    |

    ಮೆಲ್ಬೋರ್ನ್ ಭಾರತೀಯ ಚಲನಚಿತ್ರೋತ್ಸವದಲ್ಲಿ 'ಪಿಂಕಿ ಎಲ್ಲಿ?' ಚಿತ್ರದ ನಿರ್ದೇಶಕ ಪೃಥ್ವಿ ಕೋಣನೂರು ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ವಿದೇಶದ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗಿಯಾಗಿ ಪ್ರಶಸ್ತಿ ಪಡೆದುಕೊಂಡಿದ್ದ 'ಪಿಂಕಿ ಎಲ್ಲಿ' ಸಿನಿಮಾದ ಮೆಲ್ಬೋರ್ನ್ ಚಿತ್ರೋತ್ಸವದಲ್ಲೂ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿತ್ತು. ನಾಮನಿರ್ದೇಶನವಾಗಿದ್ದ ಎರಡು ವಿಭಾಗದಲ್ಲೂ ಪ್ರಶಸ್ತಿ ಪಡೆಯಲು ವಿಫಲವಾದರೂ ಗೌರವಾನ್ವಿತ ಪ್ರಶಸ್ತಿಗೆ ಪೃಥ್ವಿ ಕೋಣನೂರು ಭಾಜನರಾಗಿರುವುದು ವಿಶೇಷ.

    ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಪರಿಣಾಮ 12ನೇ ಆವೃತ್ತಿಯ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಆನ್‌ಲೈನ್ ಮೂಲಕ ನಡೆದಿದ್ದು, ವಿಜೇತರನ್ನು ಘೋಷಿಸಲಾಗಿದೆ. ಬಾಲಿವುಡ್ ನಟಿ ರಿಚಾ ಚಡ್ಡಾ ಮತ್ತು ನಿರ್ದೇಶಕ ಒನಿರ್ ಈ ಚಿತ್ರೋತ್ಸವದಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ತಮಿಳಿನ 'ಸೂರರೈ ಪೊಟ್ರು' ಅತ್ಯುತ್ತುಮ ಚಿತ್ರ ಹಾಗೂ ಸೂರ್ಯ ಅತ್ಯುತ್ತಮ ನಟ ವಿಭಾಗದಲ್ಲಿ ವಿಜೇತರಾಗಿ ಆಯ್ಕೆಯಾಗಿದ್ದಾರೆ. ಮುಂದೆ ಓದಿ...

    'ಸೂರರೈ ಪೊಟ್ರು' ಅತ್ಯುತ್ತಮ ಸಿನಿಮಾ

    'ಸೂರರೈ ಪೊಟ್ರು' ಅತ್ಯುತ್ತಮ ಸಿನಿಮಾ

    ತಮಿಳು ನಟ ಸೂರ್ಯ ನಟಿಸಿದ್ದ ಸೂರರೈ ಪೊಟ್ರು ಸಿನಿಮಾ ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಟ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನವಾಗಿದೆ. ಶೆರ್ನಿ ಚಿತ್ರದ ನಟನೆಗಾಗಿ ವಿದ್ಯಾ ಬಾಲನ್ ಅತ್ಯುತ್ತಮ ನಟಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಸುಧಾ ಕೊಂಗರಾ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಸೂರ್ಯ ನಾಯಕನಾಗಿ ನಟಿಸಿದ್ದರು. ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಂಡಿದ್ದ ಈ ಚಿತ್ರ ಅದ್ಭುತ ಪ್ರದರ್ಶನ ಕಂಡಿತ್ತು.

    ಮೆಲ್ಬರ್ನ್ ಭಾರತೀಯ ಚಿತ್ರೋತ್ಸವ: ಪ್ರಶಸ್ತಿ ಮೇಲೆ ಕಣ್ಣಿಟ್ಟ 'ಪಿಂಕಿ ಎಲ್ಲಿ?'ಮೆಲ್ಬರ್ನ್ ಭಾರತೀಯ ಚಿತ್ರೋತ್ಸವ: ಪ್ರಶಸ್ತಿ ಮೇಲೆ ಕಣ್ಣಿಟ್ಟ 'ಪಿಂಕಿ ಎಲ್ಲಿ?'

    -ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಕಾಯಟ್ಟಮ್ (ಮಲಯಾಳಂ), ಲೂಟ್ ಕೇಸ್ (ಹಿಂದಿ), ಲುಡೊ (ಹಿಂದಿ), ಶೆರ್ನಿ (ಹಿಂದಿ), ಸೂರರೈ ಪೊಟ್ರು (ತಮಿಳು), ತಶೆರ್ ಘರ್ವ್ (ಬಂಗಾಳಿ) ಚಿತ್ರಗಳು ನಾಮನಿರ್ದೇಶನವಾಗಿದ್ದವು.

    ಅತ್ಯುತ್ತಮ ವೆಬ್ ಸಿರೀಸ್ ಮಿರ್ಜಾಪುರ್ 2

    ಅತ್ಯುತ್ತಮ ವೆಬ್ ಸಿರೀಸ್ ಮಿರ್ಜಾಪುರ್ 2

    ಅತ್ಯುತ್ತುಮ ವೆಬ್ ಸಿರೀಸ್ ವಿಭಾಗದಲ್ಲಿ ಮಿರ್ಜಾಪುರ್ 2 ಪ್ರಶಸ್ತಿ ಪಡೆದುಕೊಂಡಿದೆ. ಅಕ್ಟೋಬರ್ 23, 2020ರಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ ಪ್ರೀಮಿಯರ್ ಕಂಡಿತ್ತು.

    - ಅತ್ಯುತ್ತುಮ ವೆಬ್ ಸಿರೀಸ್ ವಿಭಾಗದಲ್ಲಿ ಮಿರ್ಜಾಪುರ ಸೀಸನ್ 2, ಮಿಸ್‌ಮ್ಯಾಚ್ಡ್, ಫ್ಯಾಮಿಲಿ ಮ್ಯಾನ್ ಸೀಸನ್ 2, ಬಂದಿಷ್ ಬ್ಯಾಂಡಿಟ್ಸ್, ಚುಡೇಲ್ಸ್ ನಾಮನಿರ್ದೇಶನವಾಗಿತ್ತು.

    ಸಮಂತಾಗೆ ಪ್ರಶಸ್ತಿ ಸಿಕ್ಕಿದೆ

    ಸಮಂತಾಗೆ ಪ್ರಶಸ್ತಿ ಸಿಕ್ಕಿದೆ

    ವೆಬ್ ಸಿರೀಸ್ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸಮಂತಾ ಅಕ್ಕಿನೇನಿಗೆ ಹೋಗಿದೆ. ಅತ್ಯುತ್ತಮ ನಟ ಮನೋಜ್ ಬಾಜಪೇಯಿಗೆ ದೊರೆತಿದೆ. ಫ್ಯಾಮಿಲಿ ಮ್ಯಾನ್ 2 ಚಿತ್ರದ ನಟನೆಗಾಗಿ ಇವರಿಬ್ಬರಿಗೂ ಪ್ರಶಸ್ತಿ ಸಿಕ್ಕಿದೆ. 'ಫ್ಯಾಮಿಲಿ ಮ್ಯಾನ್' ಚಿತ್ರವೂ ವೈಯಕ್ತಿಕವಾಗಿ ಸಮಂತಾ ಮತ್ತು ಮನೋಜ್ ಭಾಜಪೇಯಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಈ ಸಿನಿಮಾದಲ್ಲಿ ನಟಿಸುವ ದೊಡ್ಡ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿತ್ತು. ನಟಿ ಸಮಂತಾಗೆ ಸುಮಾರು 6 ಕೋಟಿ ಸಂಭಾವನೆ ಹಾಗೂ ಮನೋಜ್ ಬಾಜಪೇಯಿಗೆ 8 ಕೋಟಿ ಸಂಭಾವನೆ ಪಡೆದಿರುವ ಬಗ್ಗೆ ಕೆಲವು ವೆಬ್‌ಸೈಟ್‌ಗಳು ವರದಿ ಮಾಡಿವೆ.

    'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಗೆ ಸಮಂತಾ ಪಡೆದ ಸಂಭಾವನೆ ಎಷ್ಟು?'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಗೆ ಸಮಂತಾ ಪಡೆದ ಸಂಭಾವನೆ ಎಷ್ಟು?

    ಪಿಂಕಿ ಎಲ್ಲಿ? ಚಿತ್ರದ ಬಗ್ಗೆ

    ಪಿಂಕಿ ಎಲ್ಲಿ? ಚಿತ್ರದ ಬಗ್ಗೆ

    ಪೃಥ್ವಿ ಕೋಣನೂರು ನಿರ್ದೇಶಿಸಿರುವ 'ವೇರ್ ಈಸ್ ಪಿಂಕಿ' ಚಿತ್ರದಲ್ಲಿ ಅಕ್ಷತಾ ಪಾಂಡವಪುರ ಮತ್ತು ದೀಪಕ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಪೃಥ್ವಿ ಕೋಣನೂರು ಈ ಹಿಂದೆ 'ರೈಲ್ವೆ ಚಿಲ್ಡ್ರನ್' ಮತ್ತು 'ಅಲೆಗಳು' ಎಂಬ ಸಿನಿಮಾ ಮಾಡಿದ್ದರು. ಕೆನಡಾದ ಒಟ್ಟಾವಾ ಇಂಡಿಯನ್ ಫಿಲಂ ಫೆಸ್ಟಿವಲ್‌ ಅವಾರ್ಡ್‌ನಲ್ಲಿ 'ಪಿಂಕಿ ಎಲ್ಲಿ?' ಚಿತ್ರ ಎರಡು ಪ್ರಶಸ್ತಿ ಪಡೆದಿತ್ತು. ನಿರ್ದೇಶಕ ಪೃಥ್ವಿ ಕೋಣನೂರು ಅವರಿಗೆ ಅತ್ಯುತ್ತಮ ಚಿತ್ರಕಥೆ ಹಾಗೂ ಅಕ್ಷತಾ ಪಾಂಡವಪುರಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿತ್ತು. ಇದಕ್ಕೂ ಮುಂಚೆ ನ್ಯೂಯಾರ್ಕ್‌ನ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿಯೂ 'ವೇರ್ ಈಸ್ ಪಿಂಕಿ' (ಪಿಂಕಿ ಎಲ್ಲಿ) ಚಿತ್ರಕ್ಕೆ ಎರಡು ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ಅಕ್ಷತಾಗೆ ಅವಾರ್ಡ್ ದೊರೆತಿತ್ತು.

    English summary
    Prithvi Konanur Won Best Director Award for Pink Elli Movie at the Indian Film Festival of Melbourne.
    Friday, August 20, 2021, 16:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X