For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿ '777 ಚಾರ್ಲಿ'ಗೆ ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸಾಥ್

  |

  ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷೆಯ 777 ಚಾರ್ಲಿ ಸಿನಿಮಾದ ಟೀಸರ್ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಜೂನ್ 6ರಂದು ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಪೋಸ್ಟರ್ ಮೂಲಕ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿರುವ ಚಾರ್ಲಿ ತಂಡ ಈಗ ಟೀಸರ್ ಮೂಲಕ ಎಂಟ್ರಿ ಕೊಡ್ತಿದೆ.

  777 ಚಾರ್ಲಿ ಸುಮಾರು ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಬಗ್ಗೆ ಮತ್ತೊಂದು ಇಂಟರೆಸ್ಟಿಂಗ್ ವಿಚಾರವನ್ನು ರಕ್ಷಿತ್ ಅಂಡ್ ಟೀಂ ಶೇರ್ ಮಾಡಿದೆ. 777 ಚಾರ್ಲಿ ಸಿನಿಮಾಗೆ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಸಾಥ್ ನೀಡಿದ್ದಾರೆ.

  ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಟ್ರೇಲರ್ ಬಿಡುಗಡೆ ದಿನಾಂಕ ಪ್ರಕಟರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಟ್ರೇಲರ್ ಬಿಡುಗಡೆ ದಿನಾಂಕ ಪ್ರಕಟ

  ನಟ ಪೃಥ್ವಿರಾಜ್ ಅವರ ಪ್ರೊಡಕ್ಷನ್ ಹೌಸ್ 777 ಚಾರ್ಲಿ ಚಿತ್ರದ ಮಲಯಾಳಂ ವಿತರಣ ಹಕ್ಕನ್ನು ಖರೀದಿ ಮಾಡಿದೆ. ಬಗ್ಗೆ ನಟ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಚಿತ್ರದ ಕೆಲವು ದೃಶ್ಯಗಳನ್ನು ವೀಕ್ಷಣೆ ಮಾಡಿರುವ ಪೃಥ್ವಿರಾಜ್ ಫಿದಾ ಆಗಿದ್ದಾರೆ. ಚಿತ್ರ ಹೃದಯಸ್ಪರ್ಶಿಯಾಗಿದೆ ಎಂದಿರುವ ಪೃಥ್ವಿರಾಜ್ ಚಿತ್ರದ ಭಾಗವಾಗಿರುವುದು ಸಂತೋಷವಾಗಿದೆ ಎಂದು ಹೇಳಿದ್ದಾರೆ.

  '777 ಚಾರ್ಲಿ ಚಿತ್ರದ ಕೆಲವು ತುಣುಕುಗಳನ್ನು ನೋಡಿದ್ದೇನೆ. ನಾವು ಎಷ್ಟೋ ಸಂತೋಷವಾಗಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ನಿಜಕ್ಕೂ ಹೃದಯಸ್ಪರ್ಶಿಯಾಗಿದೆ, ಅದ್ಭುತ' ಎಂದು ಬರೆದುಕೊಂಡಿದ್ದಾರೆ.

  ಇನ್ನು ಈ ಬಗ್ಗೆ ನಟ ರಕ್ಷಿತ್ ಕೂಡ ಪ್ರತಿಕ್ರಿಯೆ '777 ಚಾರ್ಲಿ ಚಿತ್ರವನ್ನು ಮಲಯಾಳಂನಲ್ಲಿ ಪೃಥ್ವಿರಾಜ್ ಪ್ರೊಡಕ್ಷನ ಪ್ರಸ್ತುತಪಡಿಸಲಿದೆ' ಎಂದು ಹೇಳಿದ್ದಾರೆ. ಜೊತೆಗೆ ತಮ್ಮ ಜರ್ನಿಯ ಭಾಗವಾಗಿರುವುದಕ್ಕೆ ಪೃಥ್ವಿರಾಜ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

  ಅಂದಹಾಗೆ '777 ಚಾರ್ಲಿ' ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ ಸಿನಿಮಾವಾಗಿದೆ. ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿರುವ '777 ಚಾರ್ಲಿ' ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಬಿಡುಗಡೆಗೆ ಸಿದ್ಧವಾಗಬೇಕಿತ್ತು. ಆದರೆ ಕೊರೊನಾ ಕಾರಣ ತಡವಾಗುತ್ತಿದೆ.

  ಸೃಜನ್ ಲೋಕೇಶ್ ಮದುವೆ ಆಗದೆ ಇರೋದಕ್ಕೆ ಬೀದಿಗೆ ಬಂದೆ!! | Vijayalakshmi | Filmibeat Kannada

  '777 ಚಾರ್ಲಿ' ನಂತರ 'ಸಪ್ತಸಾಗರದಾಚೆ ಎಲ್ಲೊ', 'ಪುಣ್ಯಕೋಟಿ', 'ಕಿರಿಕ್ ಪಾರ್ಟಿ 2' ಮತ್ತು ತಮ್ಮದೇ ನಿರ್ದೇಶನದ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ.

  English summary
  Malayalam Actor Prithviraj Productions acquires Kerala distribution rights of Rakshit Shetty Starrer 777 Charlie Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X