ಶಿವಣ್ಣ, ಪ್ರಭುದೇವಗೆ ನಾಯಕಿಯರನ್ನು ಹುಡುಕೇ ಬಿಟ್ಟರು ಭಟ್ರು!

ನಟ ಶಿವರಾಜ್ ಕುಮರ್ ಮತ್ತು ಪ್ರಭುದೇವ ಒಟ್ಟಾಗಿ ಸಿನಿಮಾ ಮಾಡುತ್ತಾ ಇದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಾ ಇದೆ. ಈ ಸುದ್ದಿಯನ್ನು ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಖಚಿತ ಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಮಾಡುವ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದರು.

ನಟ ಶಿವರಾಜ್ ಕುಮಾರ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಎನ್ನುವ ಸುದ್ದಿ ಬಂದಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸಿನಿಮಾ ಕಥೆ ಇಂಟ್ರೆಸ್ಟಿಂಗ್ ಆಗಿದೆ ಎನ್ನುವುದು ಕೂಡ ಹೆಚ್ಚಿನ ಕುತೂಹಲಕ್ಕೆ ಕಾರಣ.

ಸದ್ಯ ಚಿತ್ರದ ಬಗ್ಗೆ ಮತ್ತೊಂದು ಸಿಹಿ ಸಮಾಚಾರ ಹೊರ ಬಿದ್ದಿದ್ದೆ. ಯೋಗರಾಜ್ ಭಟ್ ಸಿನಿಮಾಗಳಲ್ಲಿ ನಾಯಕಿಯರ ಪಾತ್ರಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುತ್ತವೆ. ಅಂತೆಯೇ ಈ ಚಿತ್ರದಲ್ಲೂ ನಟ ಶಿವರಾಜ್‍ಕುಮಾರ್ ಮತ್ತು ಪ್ರಭುದೇವಗೆ ನಾಯಕಿ ಯಾರು ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.

'ಗಾಳಿಪಟ' ಬಿಟ್ಟಾಯ್ತು.. ಹೊಸ ಸಿನಿಮಾ ಶುರು!

'ಗಾಳಿಪಟ' ಬಿಟ್ಟಾಯ್ತು.. ಹೊಸ ಸಿನಿಮಾ ಶುರು!

ಸದ್ಯ 'ಗಾಳಿಪಟ 2' ಚಿತ್ರದ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ ನಿರ್ದೇಶಕ ಯೋಗರಾಜ್ ಭಟ್. ತಮ್ಮ ಮುಂದಿನ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ಸಜ್ಜಾಗುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡ್ತಿದ್ದಾರೆ. ಇದೊಂದು ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ಆಗಿರಲಿದೆ. ಭಟ್ರು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಮತ್ತು ನಟ ಪ್ರಭುದೇವ ಅವರೊಂದಿಗೆ ಮುಂದಿನ ಚಿತ್ರವನ್ನು ಮಾಡುತ್ತಿದ್ದಾರೆ.

ಮತ್ತೆ ಬಂದ ಪ್ರಿಯಾ ಆನಂದ್!

ಮತ್ತೆ ಬಂದ ಪ್ರಿಯಾ ಆನಂದ್!

ನಟಿ ಪ್ರಿಯಾ ಆನಂದ್ ಕನ್ನಡದಲ್ಲಿ ಮೊದಲು ಕಾಣಿಸಿಕೊಂಡಿದ್ದೇ, ರಾಜ್‌ಕುಟುಂಬದ ಜೊತೆಗೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ ಜೊತೆಗೆ, ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ರಾಜಕುಮಾರ' ಮತ್ತು ಚೇತನ್ ಕುಮಾರ್ ನಿರ್ದೇಶನದ 'ಜೇಮ್ಸ್' ಚಿತ್ರದಲ್ಲಿ ಪ್ರಿಯಾ ಆನಂದ್ ನಟಿದ್ದಾರೆ. ಈಗ ಯೋಗರಾಜ್ ಭಟ್ ಸಾರಥ್ಯದಲ್ಲಿ ಬರುತ್ತಿರುವ ಈ ಚಿತ್ರದ ಮೂಲಕ ಮತ್ತೇ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮಾತುಕಥೆ ಮುಗಿದ್ದು, ಸಿನಿಮಾ ಶೂಟಿಂಗ್‌ಗೆ ಹಾಜರಾಗುವುದೊಂದೇ ಬಾಕಿಯಂತೆ.

ನಿಶ್ವಿಕಾ ನಾಯ್ಡುಗೆ ದೊಡ್ಡ ಆಫರ್!

ನಿಶ್ವಿಕಾ ನಾಯ್ಡುಗೆ ದೊಡ್ಡ ಆಫರ್!

ಈ ಚಿತ್ರದಲ್ಲಿ ಇಬ್ಬರು ನಾಯಕರು ಇರುವ ಕಾರಣಕ್ಕೆ ಇಬ್ಬರು ನಟಿಯರೂ ಕೂಡ ಇದ್ದಾರೆ. ಇತ್ತೀಚೆಗೆ ಯೋಗರಾಜ್ ಭಟ್‌ ಅವ್ರ 'ಗಾಳಿಪಟ 2' ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ ನಿಶ್ವಿಕಾ ನಾಯ್ಡು ಕೂಡ ಈ ಚಿತ್ರದಲ್ಲಿ ಇರಲಿದ್ದಾರೆ. ಇದು ನಿಶ್ವಿಕಾಗೆ ಒಲಿದಿರುವ ಮೊದಲ ದೊಡ್ಡ ಸಿನಿಮಾ. ಈ ಚಿತ್ರದ ಮೂಲಕ ನಿಶ್ವಿಕಾಗೆ ಬಿಗ್ ಬ್ರೇಕ್ ಸಿಗುವ ಸಾಧ್ಯತೆ ಕೂಡ ಇದೆ. ಪ್ರಿಯಾ ಆನಂದ್ ಮತ್ತು ನಿಶ್ವಿಕಾ ಈ ಚಿತ್ರಕ್ಕೆ ನಾಯಕಿಯರಾಗಿ ಆಯ್ಕೆ ಆಗಿದ್ದಾರೆ. ಆದರೆ ಈ ವಿಚಾರವನ್ನು ಸದ್ಯದಲ್ಲೇ ಅಧಿಕೃತವಾಗಿ ಚಿತ್ರತಂಡ ಪ್ರಕಟ ಮಾಡಲಿದೆ.

ಟೈಟಲ್ 'ಕುಲದಲ್ಲಿ ಕೀಳ್ಯಾವುದೋ'?

ಟೈಟಲ್ 'ಕುಲದಲ್ಲಿ ಕೀಳ್ಯಾವುದೋ'?

'ಕುಲದಲ್ಲಿ ಕೀಳ್ಯಾವುದೋ' ಎಂದು ತಾತ್ಕಾಲಿಕವಾಗಿ ಈ ಚಿತ್ರಕ್ಕೆ ಹೆಸರಿಸಲಾಗಿದೆ. ಸರಳ ಮುಹೂರ್ತದೊಂದಿಗೆ ಈ ಚಿತ್ರದ ಕೆಲಸಗಳನ್ನು ಪ್ರಾರಂಭಿಸಲಾಯಿತು. ಇನ್ನು ಇದೇ ಆಗಸ್ಟ್ 20ರಿಂದ ಈ ಸಿನಿಮಾ ಸೆಟ್ಟೇರಲಿದೆ. ಇದರ ಜೊತೆಗೆ ಈ ನಾಯಕಿರ ಆಯ್ಕೆ ಕೂಡ ಮುಗಿದಿದೆ. ಇನ್ನು ಮುಂದೆ ಭಟ್ಟರು ಈ ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ. ಮೂಲಗಳ ಪ್ರಕಾರ, ಪ್ರಿಯಾ ಆನಂದ್ ನಟ ಶಿವರಾಜಕುಮಾರ್ ಜೋಡಿ ಮತ್ತು ನಿಶ್ವಿಕಾ ನಾಯ್ಡು ಪ್ರಭುದೇವ ಜೊತೆ ಜೋಡಿಯಾಗಲಿದ್ದಾರೆ ಎನ್ನಲಾಗಿದೆ.

More from Filmibeat

English summary
Priya Anand And Nishvika Will Be The Heroins For Yogaraj Bhat’s next with Shivarajkumar and Prabhudheva, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X