'ಜೇಮ್ಸ್' ಸಿನಿಮಾ ನೋಡಿ ಕಣ್ಣೀರು ಹಾಕಿದ ಪ್ರಿಯಾ ಆನಂದ್, ಶ್ರೀ ಮುರುಳಿ!

'ಜೇಮ್ಸ್' ಸಿನಿಮಾ ಇಂದು ಬಹಳ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಬೆಳಗಿನ ಶೋಗಳು 5 ಗಂಟೆಯಿಂದಲೇ ಆರಂಭವಾಗಿದ್ದು, ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದಾರೆ. ಇಂದು ಬೆಳಗ್ಗೆಯಿಂದಲೂ ಅಭಿಮಾನಿಗಳು ಅಪ್ಪು ನಮ್ನೊಂದಿಗೆ ಇಲ್ಲ ಅನ್ನೋ ಬೇಸರದ ನಡುವೆಯೂ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

Recommended Video

Puneeth Rajkumar | ಕನ್ನಡದ 3 ಇಡಿಯೆಟ್ಸ್ ನಲ್ಲಿ ಅಪ್ಪು ಹೀರೋ ಆಗಬೇಕಿತ್ತು

ಅದೆಷ್ಟೋ ಮಂದಿ ಚಿತ್ರ ನೋಡಿ ಹೊರ ಬರುತ್ತಾ ಕಣ್ಣೀರು ಸುರಿಸುತ್ತಾ ಹೊರ ಬಂದಿದ್ದಾರೆ. ಸಿನಿಮಾದಲ್ಲಿ ಅಪ್ಪು ನೋಡಿ ಭಾವುಕರಾಗಿರುವ ಹಲವರು ಕಣ್ಣೀರು ಹಾಕಿ ಪುನೀತ್‌ರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ಮನದಾಳದ ನೋವು ಹಂಚಿಕೊಂಡಿದ್ದಾರೆ.

ಇನ್ನು ಸ್ವತಃ ಸಿನಿಮಾದ ನಾಯಕ ನಟಿ ಪ್ರಿಯಾ ಆನಂದ್ ಕೂಡ ಇಂದು ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದ್ದಾರೆ. ಅಲ್ಲದೆ ಸಿನಿಮಾ ನೋಡಿ ಹೊರಬಂದ ಪ್ರಿಯಾ ಆನಂದ್ ಕಣ್ಣೀರು ಹಾಕಿಕೊಂಡೆ ಹೊರ ಬಂದಿದ್ದಾರೆ. ಕ್ಯಾಮರಾಗಳಲ್ಲಿ ಇದು ಸೆರೆಯಾಗಿದ್ದು, ಯಾವುದೇ ಪ್ರತಿಕ್ರಿಯೆಯನ್ನು ಪ್ರಿಯಾ ಆನಂದ್ ನೀಡಿಲ್ಲಾ.

ಬೆಳಗಿನ ಶೋ ವೀಕ್ಷಿಸಿ ನಟಿ ಪ್ರಿಯಾ ಆನಂದ್

ಬೆಳಗಿನ ಶೋ ವೀಕ್ಷಿಸಿ ನಟಿ ಪ್ರಿಯಾ ಆನಂದ್

ಇಂದು ಪುನೀತ್ ಹುಟ್ಟುಹಬ್ಬದ ಹಿನ್ನೆಲೆ 'ಜೇಮ್ಸ್' ಸಿನಿಮಾ ರಿಲೀಸ್ ಆಗಿದೆ. ಅದೆಷ್ಟೋ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾತುರರಾಗಿದ್ರು. ಅದರಂತೆ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಇನ್ನು ಸಿನಿಮಾದ ನಾಯಕಿ ಪ್ರಿಯಾ ಆನಂದ್ ಕೂಡ ಇಂದು ಮುಂಜಾನೇ ಶೋವನ್ನು ಅಭಿಮಾನಿಗಳೊಂದಿಗೆ ನೋಡಲು ಆಗಮಿಸಿದ್ದಾರೆ. ಫ್ಯಾನ್ಸ್ ನಡುವೆಯೇ ಕುಳಿತು ಸಿನಿಮಾ ವೀಕ್ಷಿಸಿರುವ ಪ್ರಿಯಾ ಆನಂದ್ ಸಿನಿಮಾ ನೋಡಿ ಭಾವುಕರಾಗಿದ್ದಾರೆ.

ಅಪ್ಪು ಇಂದು ನಮ್ಮೊಂದಿಗಿಲ್ಲ ಎಂದು ಕಣ್ಣೀರು

ಅಪ್ಪು ಇಂದು ನಮ್ಮೊಂದಿಗಿಲ್ಲ ಎಂದು ಕಣ್ಣೀರು

ಅಭಿಮಾನಿಗಳೊಂದಿಗೆ ಕುಳಿತು ಸಿನಿಮಾ ವೀಕ್ಷಿಸಲು ನವರಂಗ್ ಚಿತ್ರಮಂದಿರಕ್ಕೆ ಭೇಟಿ ನೀಡಿದ 'ಜೇಮ್ಸ್' ಸಿನಿಮಾದ ನಟಿ ಪ್ರಿಯಾ ಆನಂದ್, ಕಾರಿನಲ್ಲಿ ಕುಳಿತು ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಪ್ಪು ಇಂದು ನಮ್ಮೊಂದಿಗೆ ಇಲ್ಲಾ ಎಂದು ನೆನೆದು ಕಣ್ಣೀರು ಹಾಕಿರುವ ಪ್ರಿಯಾ ಆನಂದ್ ಯಾವುದೇ ಪ್ರತಿಕ್ರಿಯೆ ನೀಡದೆ ಸಿನಿಮಾ ನೋಡಿ ಅಲ್ಲಿಂದ ತೆರಳಿದ್ದಾರೆ. ಪ್ರಿಯಾ ಆನಂದ್ ಈ ಹಿಂದೆ ಕೂಡ ಪುನೀತ್ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದರು.

ಅಪ್ಪು ಇಲ್ಲದೇ ಸಮಾರಂಭ ಮಾಡಲು ಬೇಸರ ಎಂದಿದ್ದ ನಟಿ

ಅಪ್ಪು ಇಲ್ಲದೇ ಸಮಾರಂಭ ಮಾಡಲು ಬೇಸರ ಎಂದಿದ್ದ ನಟಿ

ಇತ್ತೀಚೆಗಷ್ಟೆ ನಡೆದಿದ್ದ 'ಜೇಮ್ಸ್' ಪ್ರಿ- ರಿಲೀಸ್ ಈವೆಂಟ್‌ನಲ್ಲಿ ಕೂಡ ಅಪ್ಪು ಬಗ್ಗೆ ಪ್ರಿಯಾ ಆನಂದ್ ಮಾತನಾಡುವಾಗ ಬೇಸರ ವ್ಯಕ್ತಪಡಿಸಿದ್ದರು. " ಅಪ್ಪು ನಟನೆಯ ಚಿತ್ರವನ್ನು ವಿಶ್ವದೆಲ್ಲೆಡೆ ಜನರು ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳಲು ಕಾದಿದ್ದಾರೆ. ಇದೇ ಕಾರಣದಿಂದ ಇಷ್ಟೊಂದು ಸ್ಕ್ರೀನ್​ಗಳಲ್ಲಿ 'ಜೇಮ್ಸ್' ಪ್ರದರ್ಶನವಾಗುತ್ತಿದೆ. ದೃಶ್ಯಗಳಲ್ಲಿ ಪುನೀತ್​ರನ್ನು ನೋಡುವಾಗ ಮನಸ್ಸು ಭಾರವಾಗುತ್ತದೆ. ಅಪ್ಪು ಹೃದಯದಿಂದ ನಗುತ್ತಿದ್ದರು. ಅದು ಪ್ರತಿಯೊಬ್ಬರಿಗೆ ಕನೆಕ್ಟ್ ಆಗುತ್ತಿತ್ತು. ಅವರು ಸಣ್ಣ ವಯಸ್ಸಿನಿಂದ ಇಲ್ಲಿಯವರೆಗೆ ನಗುತ್ತಲೇ ಇದ್ದರು. ಎಲ್ಲರನ್ನೂ ರಂಜಿಸುತ್ತಾ ಇದ್ದರು. ಆದರೆ 'ಜೇಮ್ಸ್' ಚಿತ್ರದ ಪ್ರಿ-ರಿಲೀಸ್ ಈವೆಂಟ್​ನಲ್ಲಿ ಅವರಿಲ್ಲ. ಪುನೀತ್ ಇಲ್ಲದೇ ಹೀಗೆ ಸಮಾರಂಭ ಮಾಡುವುದು ಬಹಳ ದುಃಖಕರ ವಿಚಾರ'' ಎಂದು ಬೇಸರ ವ್ಯಕ್ತಪಡಿಸಿದ್ದರು.

ಮಾಧ್ಯಮದ ಮುಂದೆ ಶ್ರೀ ಮುರುಳಿ ಭಾವುಕ

ಮಾಧ್ಯಮದ ಮುಂದೆ ಶ್ರೀ ಮುರುಳಿ ಭಾವುಕ

ಇನ್ನು 'ಜೇಮ್ಸ್' ಸಿನಿಮಾವನ್ನು ಇಂದು ಅಭಿಮಾನಿಗಳೊಂದಿಗೆ ಕುಳಿತು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಕೂಡ ವೀಕ್ಷಿಸಿದ್ದಾರೆ. ಇಂದು ಮುಂಜಾನೆ ಶೋಗೆ ಆಗಮಿಸಿದ್ದ ಶ್ರೀ ಮುರುಳಿ ಸಿನಿಮಾ ನೋಡಿ ಮಾಧ್ಯಮದ ಮುಂದೆ ಭಾವುಕರಾಗಿದ್ದರು. "ಜೇಮ್ಸ್' ಸಿನಿಮಾವನ್ನು ಭಾರವಾದ ಮನಸ್ಸಿನಿಂದ ನೋಡಿದ್ದೇನೆ. ಅಪ್ಪು ಅಲ್ಲದೇ ಫ್ಯಾನ್ಸ್ ಮುಖದಲ್ಲೂ ದುಃಖ ಎದ್ದು ಕಾಣುತ್ತಿತ್ತು. ಇದನ್ನೆಲ್ಲಾ ನೋಡ್ತಾ ಇದ್ರೆ ಮನಸ್ಸು ಭಾರವಾಗ್ತಿದೆ. ಅಪ್ಪು ಮಾಮ ಈ ಸಂದರ್ಭದಲ್ಲಿ ನಮ್ಮ ಜೊತೆ ಇರಬೇಕಿತ್ತು." ಎಂದಷ್ಟೆ ಹೇಳಿ ಶ್ರೀ ಮುರುಳಿ ತೆರಳಿದ್ದಾರೆ. ಒಂದಷ್ಟು ಸೆಲೆಬ್ರೆಟಿಗಳು ಸಿನಿಮಾವನ್ನು ಥಿಯೇಟರ್‌ಗೆ ಬಂದು ನೋಡುತ್ತಿದ್ರೆ, ಮತ್ತೊಂದಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ 'ಜೇಮ್ಸ್' ಹಾಗೂ ಅಪ್ಪುಗೆ ಶುಭಾಶಯ ತಿಳಿಸುತ್ತಿದ್ದಾರೆ.

More from Filmibeat

English summary
Here's why Priya Anand cry ofter waching James movie .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X