»   » ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ಹಿರೋಯಿನ್ ಆದ ಪ್ರಿಯಾ!

ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ಹಿರೋಯಿನ್ ಆದ ಪ್ರಿಯಾ!

Posted By:
Subscribe to Filmibeat Kannada
ಗೋಲ್ಡನ್ ಸ್ಟಾರ್ ಮುಂದಿನ ಚಿತ್ರಕ್ಕೆ ಪ್ರಿಯಾ ನಾಯಕಿ | Oneindia Kannada

'ಪ್ರಿಯಾ' ಎಂದ ತಕ್ಷಣ ಎಲ್ಲರೂ ಪ್ರಿಯಾ ಪ್ರಕಾಶ್ ವಾರಿಯರ್ ಎಂದುಕೊಳ್ಳುತ್ತಾರೆ. ಆ ಮಟ್ಟಿಗೆ ಪ್ರಿಯಾ ಈಗ ಫೇಮಸ್ ಆಗಿದ್ದಾರೆ. ಆದರೆ ನಾವು ಹೇಳುತ್ತಿರುವ ಸುದ್ದಿ ಪ್ರಿಯಾ ಪ್ರಕಾಶ್ ವಾರಿಯರ್ ಅಲ್ಲ. ನಟಿ ಪ್ರಿಯಾ ಆನಂದ್ ಬಗ್ಗೆ.

ನಟಿ ಪ್ರಿಯಾ ಆನಂದ್ 'ರಾಜಕುಮಾರ' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ನಟಿಸಿದ್ದರು. ಈ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದ ಪ್ರಿಯಾ ಮೊದಲ ಸಿನಿಮಾದಲ್ಲಿಯೇ ದೊಡ್ಡ ಯಶಸ್ಸು ಗಳಿಸಿದ್ದರು.

ಕನ್ನಡದ ಜೊತೆ ಜೊತೆಗೆ ಬೇರೆ ಭಾಷೆಯ ಸಿನಿಮಾಗಳನ್ನು ಮಾಡುತ್ತಿರುವ ಪ್ರಿಯಾ ಈಗ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. 'ರಾಜಕುಮಾರ' ನಂತರ ಪ್ರಿಯಾ ಆನಂದ್ ಯಾವ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಪ್ರಿಯಾ ಈಗ ನಟ ಗಣೇಶ್ ಜೊತೆಗೆ ನಟಿಸುತ್ತಿದ್ದಾರೆ. ಮುಂದೆ ಓದಿ....

ಗಣೇಶ್ ಜೊತೆ ಪ್ರಿಯಾ

ಮೊದಲ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದ ನಟಿ ಪ್ರಿಯಾ ಆನಂದ್ ಈಗ ಗೋಲ್ಡನ್ ಸ್ಟಾರ್ ಜೊತೆಗೆ ನಟಿಸುವ ಅವಕಾಶ ಪಡೆದಿದ್ದಾರೆ.

'ಆರೆಂಜ್' ಚಿತ್ರಕ್ಕೆ ನಾಯಕಿ

ಗಣೇಶ್ ಅವರ ಮುಂದಿನ ಸಿನಿಮಾ 'ಆರೆಂಜ್' ಚಿತ್ರಕ್ಕೆ ನಾಯಕಿ ಯಾರು ಎಂಬ ಪ್ರಶ್ನೆ ಇತ್ತು. ಆದರೆ ಈಗ ಆ ಸಿನಿಮಾಗೆ ಹಿರೋಯಿನ್ ಆಗಿ ಪ್ರಿಯಾ ಆನಂದ್ ಆಯ್ಕೆ ಆಗಿದ್ದಾರೆ.

ಪ್ರಶಾಂತ್ ರಾಜ್ ನಿರ್ದೇಶನ

ಈ ಹಿಂದೆ 'ಜೂಮ್' ಚಿತ್ರವನ್ನು ಗಣೇಶ್ ಜೊತೆಗೆ ಮಾಡಿದ್ದ ಪ್ರಶಾಂತ್ ರಾಜ್ 'ಆರೆಂಜ್' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಮತ್ತೆ ಪ್ರಶಾಂತ್, ಪ್ರಿಯಾ ಅವರನ್ನು ಕನ್ನಡಕ್ಕೆ ಕರೆ ತಂದಿದ್ದಾರೆ.

ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಗಣೇಶ್ ಮಗಳು ಕೊಟ್ಟ ಉಡುಗೊರೆ ಇದು

ಪ್ರಿಯಾ ಆನಂದ್ ಬಿಜಿ

'ರಾಜಕುಮಾರ' ಬಳಿಕ ಒಂದು ಹಿಂದಿ, ಒಂದು ತಮಿಳು ಸಿನಿಮಾ ಮಾಡಿದ್ದ ಪ್ರಿಯಾ ಆನಂದ್ ಈಗ ಮತ್ತೊಂದು ಹೊಸ ಮಲೆಯಾಳಂ ಸಿನಿಮಾ ಮಾಡುತ್ತಿದ್ದಾರೆ.

ಗಣೇಶ್-ಶಿಲ್ಪಾ ವಿವಾಹ ವಾರ್ಷಿಕೋತ್ಸವದಂದು ನಡೆಯಿತು 'ಆರೆಂಜ್' ಮುಹೂರ್ತ

'ಆರೆಂಜ್' ಮುಹೂರ್ತ

'ಆರೆಂಜ್' ಸಿನಿಮಾದ ಮುಹೂರ್ತ ಇತ್ತೀಚಿಗಷ್ಟೆ ನೆರವೇರಿತು. ಗಣೇಶ್ ಮತ್ತು ಶಿಲ್ಪಾ ಗಣೇಶ್ ಅವರ 10ನೇ ವಿವಾಹ ವಾರ್ಷಿಕೋತ್ಸವ ಅಂಗವಾಗಿ ಈ ಸಿನಿಮಾ ಲಾಂಚ್ ಆಗಿತ್ತು.

English summary
'Rajakumara' movie fame actress Priya Anand selected to play lead role in Golden Star Ganesh's Orange movie. The movie is directed by Prashanth Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada