ಶ್ರೀದೇವಿ ಸಾವಿಗೆ 'ರಾಜಕುಮಾರ' ನಟಿ ಪ್ರಿಯಾ ಆನಂದ್ ಕಾರಣ ಎಂದು ಟ್ರೋಲ್

Recommended Video

ನಟಿ ಶ್ರೀದೇವಿ ಸಾವಿನ ವಿಷಯದಲ್ಲಿ ರಾಜಕುಮಾರ ಸಿನಿಮಾ ನಟಿ ಪ್ರಿಯ ಆನಂದ್ ಮೇಲೆ ಗಂಭೀರ ಆರೋಪ | FILMIBEAT KANNADA

ಸೌತ್ ಇಂಡಸ್ಟ್ರಿಯಲ್ಲಿ ಮೋಡಿ ಮಾಡಿರುವ ನಟಿ ಪ್ರಿಯಾ ಆನಂದ್ 'ರಾಜಕುಮಾರ' ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಪ್ರವೇಶ ಮಾಡಿದರು. ಮೊದಲ ಸಿನಿಮಾದಲ್ಲೇ ಸ್ಯಾಂಡಲ್ ವುಡ್ ಮಂದಿಯಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಪ್ರಿಯಾ, ನಂತರ ಗಣೇಶ್ ಅವರ ಆರೆಂಜ್ ಸಿನಿಮಾದಲ್ಲಿ ನಟಿಸಿರು.

ಹೀಗೆ, ತಮಿಳು ಚಿತ್ರಗಳ ಜೊತೆ ಜೊತೆಯಲ್ಲೇ ಕನ್ನಡದಲ್ಲೂ ಹೆಜ್ಜೆಯಿಡುತ್ತಿರಯವ ಪ್ರಿಯಾ ಆನಂದ್ ಮೇಲೆ ಈಗೊಂದು ಗಂಭೀರ ಆರೋಪ ಕೇಳಿ ಬಂದಿದೆ. ಅದು ಎಂತಹ ಆರೋಪ ಅಂದ್ರೆ, ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಸಾವಿಗೆ ಈಕಯೇ ಕಾರಣವಂತೆ.

ಹೌದು, ಕಳೆದ ವರ್ಷ ದುಬೈನ ಹೋಟೆಲ್ ವೊಂದರಲ್ಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ ಶ್ರೀದೇವಿ ಆಕಸ್ಮಿಕ ಸಾವಿಗೆ ಶರಣಾಗಿದ್ದರು ಎಂದು ಪ್ರಕರಣವನ್ನ ಕ್ಲೋಸ್ ಮಾಡಲಾಗಿದೆ. ಇದೀಗ, ಶ್ರೀದೇವಿ ಸಾವಿಗೆ ಈ ನಟಿ ಕಾರಣ ಎಂಬ ವಿಚಾರ ಮತ್ತೆ ಸದ್ದು ಮಾಡ್ತಿದೆ. ಅಷ್ಟಕ್ಕೂ, ಪ್ರಿಯಾ ಆನಂದ್ ಗೂ ಶ್ರೀದೇವಿಗೂ ಏನ್ ಸಂಬಂಧ? ಮುಂದೆ ಓದಿ.....

ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ ನಟನೆ

ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ ನಟನೆ

ಶ್ರೀದೇವಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ ಯುವ ನಟಿ ಪ್ರಿಯಾ ಆನಂದ್ ಕೂಡ ನಟಿಸಿದ್ದರು. ಸಿನಿಮಾ ಪೂರ್ತಿ ಶ್ರೀದೇವಿ ಅವರ ಜೊತೆಯಲ್ಲೇ ಇರುವಂತಹ ಪಾತ್ರ ಮಾಡಿದ್ದ ಪ್ರಿಯಾಗೆ ಇದು ಮೊದಲ ಬಾಲಿವುಡ್ ಸಿನಿಮಾ ಕೂಡ ಆಗಿತ್ತು. ಈ ಚಿತ್ರದಲ್ಲೇ ನಟಿಸಿದ್ದೇ ಈಗ ಆಕೆಯ ಮೇಲೆ ಟೀಕೆ ಕೇಳಿಬರುವಂತಾಗಿದೆ.

ಪ್ರಿಯಾ ಅವರಿಂದಲೇ ಶ್ರೀದೇವಿ ಸಾವು.!

ಪ್ರಿಯಾ ಅವರಿಂದಲೇ ಶ್ರೀದೇವಿ ಸಾವು.!

ಪ್ರಿಯಾ ಆನಂದ್ ಅವರ ಬ್ಯಾಡ್ ಲಕ್ ಬಗ್ಗೆ ಟೀಕಿಸಿರುವ ವ್ಯಕ್ತಿಯೊಬ್ಬ ಆಕೆಯ ಬ್ಯಾಡ್ ಲಕ್ ನಿಂದಲೇ ಶ್ರೀದೇವಿ ಸತ್ತಿದ್ದು ಎಂದು ಕಟುವಾಗಿ ಟೀಕಿಸಿದ್ದಾರೆ. ಶ್ರೀದೇವಿ ಜೊತೆ ಇಂಗ್ಲಿಷ್ ವಿಂಗ್ಲಿಷ್ ಸಿನಿಮಾ ಮಾಡಿದ್ರು. ಅಲ್ಲಿ ಶ್ರೀದೇವಿ ನಿಧನವಾದರು. ಆಮೇಲೆ ಎಲ್.ಕೆ.ಜಿ ಅಂತ ಸಿನಿಮಾ ಮಾಡಿದ್ರು ಆ ಚಿತ್ರದಲ್ಲಿ ನಟಿಸಿದ್ದ ಆರ್.ಕೆ ರಿತೇಶ್ ಸಾವನ್ನಪ್ಪಿದರು. ಇದೆಲ್ಲವೂ ಪ್ರಿಯಾ ಅವರ ಐರನ್ ಲೆಗ್ ಕಾರಣ, ಆಕೆ ಜೊತೆ ಸಿನಿಮಾ ಮಾಡಿದ್ರೆ ಯಾರಾದರೂ ಸಾಯ್ತಾರೆ ಎಂದು ಬಹಳ ಕಠಿಣವಾಗಿ ಕಾಮೆಂಟ್ ಮಾಡಿದ್ದಾರೆ.

ತಿರುಗೇಟು ನೀಡಿದ ಪ್ರಿಯಾ

ತಿರುಗೇಟು ನೀಡಿದ ಪ್ರಿಯಾ

ಆ ವ್ಯಕ್ತಿಗೆ ಬಹಳ ಸಮಾಧಾನವಾಗಿ ಪ್ರತಿಕ್ರಿಯೆ ನೀಡಿರುವ ಪ್ರಿಯಾ ಆನಂದ್ ''ನಾನು ಇಂತಹ ವ್ಯಕ್ತಿಗಳ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಆದ್ರೆ, ಇದು ಬಹಳ ಸೂಕ್ಷ್ಮವಾದ ವಿಷಯದ ಎಂಬುದು ನಿನ್ನ ಗಮನಕ್ಕೆ ಇರಲಿ. ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುವುದು ತುಂಬಾ ಸುಲಭವಾದ ಕೆಲಸ. ಆದ್ರೆ, ಇದಕ್ಕೆ ಉತ್ತರ ಕೊಡುವ ಮೂಲಕ ನಿಮ್ಮನ್ನು ಕೀಳು ಮಟ್ಟಕ್ಕೆ ತರಲು ನಾನು ಇಚ್ಛಿಸಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

ವ್ಯಕ್ತಿ ವಿರುದ್ಧ ಆಕ್ರೋಶಗೊಂಡ ಜನರು

ವ್ಯಕ್ತಿ ವಿರುದ್ಧ ಆಕ್ರೋಶಗೊಂಡ ಜನರು

ನಟಿ ಪ್ರಿಯಾ ಆನಂದ್ ಅವರ ಬಗ್ಗೆ ಇಷ್ಟು ಗಂಭೀರವಾಗಿ ಟೀಕೆ ಮಾಡಿದ್ದಕ್ಕೆ ಆ ಅನಾಮಿಕ ವ್ಯಕ್ತಿಯ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದರು. ಇಂತವರಿಗೆಲ್ಲಾ ನೀವು ಉತ್ತರ ಕೊಡಬೇಡಿ ಎಂದು ಕಿವಿಮಾತು ಹೇಳಿ ಬೆಂಬಲಕ್ಕೆ ನಿಂತರು.

ಕ್ಷಮೆ ಕೇಳಿದ ಆ ವ್ಯಕ್ತಿ

ಕ್ಷಮೆ ಕೇಳಿದ ಆ ವ್ಯಕ್ತಿ

ನಂತರ ಈ ವಿಷ್ಯದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆದಿದೆ. ಇದನ್ನ ಗಮನಿಸಿದ ಆ ವ್ಯಕ್ತಿ ಪ್ರಿಯಾ ಆನಂದ್ ಅವರ ಕ್ಷಮೆ ಕೇಳಿದ್ದಾನೆ. ''ನಾನು ಕ್ಷಮೆ ಕೇಳುತ್ತೇನೆ, ನನ್ನ ತಪ್ಪಿನ ಅರಿವು ಆಗಿದೆ. ನಿನ್ನ ಎಲ್.ಕೆ.ಜಿ ಮತ್ತು ಇಂಗ್ಲಿಷ್ ವಿಂಗ್ಲಿಷ್ ಎರಡು ಚಿತ್ರಗಳನ್ನ ನಾನು ನೋಡಿದೆ. ಈ ಎರಡು ಚಿತ್ರಗಳಲ್ಲಿ ನೀವು ಸಾಮಾನ್ಯವಾಗಿ ಕಂಡುಬಂದ ಕಾರಣ ನನ್ನಲ್ಲಿ ಆ ಪ್ರಶ್ನೆ ಮೂಡಿತ್ತು. ಹಾಗೆ ಸುಮ್ಮನೆ ಟ್ವೀಟ್ ಮಾಡಿದೆ. ನೀವು ಟ್ವೀಟ್ ಓದಲ್ಲ ಅಂದುಕೊಂಡಿದ್ದೆ. ನಿಮ್ಮನ್ನು ನೋಯಿಸಿದಕ್ಕೆ ಕ್ಷಮೆ ಕೇಳುತ್ತೇನೆ'' ಎಂದಿದ್ದಾರೆ.

More from Filmibeat

English summary
Sridevi acted with Priya Anand in ENGLISH VINGLISH, Sridevi is no more now. JK Rithish acted with Priya Anand in LKG. JK Rithish is no more now. Priya anand trolled for sridevi death issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X