For Quick Alerts
  ALLOW NOTIFICATIONS  
  For Daily Alerts

  ಸಹ ನಟನ ಜೊತೆ ಕಿಸ್: ಪ್ರಿಯಾ ವಾರಿಯರ್ ಹೊಸ ವಿಡಿಯೋ ವೈರಲ್

  |

  ಕಣ್ಸನ್ನೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಇನ್ನೊಂದು ವಿಡಿಯೋ ಮೂಲಕ ಮತ್ತೆ ಸದ್ದು ಮಾಡ್ತಿದ್ದಾರೆ. ಕಳೆದ ಸಲ ಕಣ್ಣು ಮಿಟಿಕಿಸಿದ್ದರು ಅಷ್ಟೇ. ಈ ಸಲ ಸಹ ನಟನ ಜೊತೆ ಕಿಸ್ ಮಾಡಿದ್ದಾರೆ.

  ಹೌದು, ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ಚೊಚ್ಚಲ ಸಿನಿಮಾ 'ಒರು ಅದಾರ್ ಲವ್' ಚಿತ್ರದ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಈ ಟೀಸರ್ ನಲ್ಲಿ ಸಹನಟ ರೋಷನ್ ಅಬ್ದುಲ್ಲಾ, ಪ್ರಿಯಾ ವಾರಿಯರ್ ತುಟಿಗೆ ಚುಂಬಿಸಿದ್ದಾರೆ. ಈ ಪ್ರೋಮೋ ಈಗ ಟ್ರೆಂಡ್ ಆಗಿದೆ.

  ಪ್ರಿಯಾಗೆ ಕನ್ನಡದ ಯಾವ ನಟನೊಂದಿಗೆ ಸಿನಿಮಾ ಮಾಡೋಕೆ ಇಷ್ಟ

  ಅಂದ್ಹಾಗೆ ಫೆಬ್ರವರಿ 14 ರಂದು ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಮಲಯಾಳಂ ಜೊತೆಗೆ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ತೆರೆಕಾಣುತ್ತಿದೆ.

  ಪ್ರಿಯಾ ವಾರಿಯರ್ ಕನ್ನಡದಲ್ಲಿ ನೋಡಿರೋದು ಒಂದೇ ಸಿನಿಮಾ, ಯಾವುದದು?

  ಕನ್ನಡದಲ್ಲಿ 'ಕಿರಿಕ್ ಲವ್ ಸ್ಟೋರಿ' ಎಂಬ ಹೆಸರಿನಲ್ಲಿ ಬಿಡುಗಡೆಯಾಗ್ತಿದೆ. ಪ್ರಿಯಾ ವಾರಿಯರ್, ರೋಷನ್ ಅಬ್ದುಲ್ಲಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನ ಓಮರ್ ಲುಲು ನಿರ್ದೇಶನ ಮಾಡಿದ್ದಾರೆ.

  English summary
  Remember the Priya Prakash Varrier, who’s wink video went viral? Now, she is seen locking lips with her Oru Adaar Love co-star in this new video which is breaking the internet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X