»   » ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.!

ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.!

Posted By:
Subscribe to Filmibeat Kannada
'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.! | Filmibeat Kannada

ಬರಿ ಕಣ್ಸನ್ನೆಯಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮಲಯಾಳಂ ನಟಿ ಪ್ರಿಯಾ ವಾರಿಯರ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿದ್ದಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಪ್ರಿಯಾ ಕಣ್ಸನ್ನೆ ಬಗ್ಗೆನೇ ಮಾತನಾಡ್ತಿದ್ದಾರೆ.

ಹೀಗೆ, ಕಳೆದ ಕೆಲ ದಿನಗಳಿಂದ ಸಾಮಾನ್ಯ ಜನರ ಹಾಟ್ ಟಾಪಿಕ್ ಆಗಿರುವ ಪ್ರಿಯಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಿಯಾ ಪ್ರಕಾಶ್ ವಾರಿಯರ್ ಅವರಿಂದ ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಎಫ್.ಐ.ಆರ್ ದಾಖಲಾಗಿದೆ.

ಕಣ್ಣು ಹೊಡೆದ ಹುಡುಗಿ ಬಗ್ಗೆ ಸಾಧು ಕೋಕಿಲ ಕೊಟ್ಟ ಹೇಳಿಕೆ !

ಇದನ್ನ ಖಂಡಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ, ಏನಿದು ಪ್ರಿಯಾ ಪ್ರಕಾಶ್ ವಾರಿಯರ್ ಹೊಸ ವಿವಾದ. ಕೋರ್ಟ್ ಮೊರೆ ಯಾಕೆ ಹೋದ್ರು? ಮುಂದೆ ಓದಿ....

ಮುಸ್ಲಿಂ ಭಾವನಗೆ ಧಕ್ಕೆ ತಂದ 'ಒರು ಅದಾರ್ ಲವ್'.!

ಒರು ಅದಾರ್ ಲವ್ ಚಿತ್ರದ 'ಮಾಣಿಕ್ಯ ಮಲರಾಯ ಪೂವಿ' ಹಾಡು ಬಿಡುಗಡೆಹಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಆದ್ರೆ, ಈ ಹಾಡಿನಲ್ಲಿ ಮುಸ್ಲಿಂರ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಮುಸ್ಲಿಂ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸುತ್ತಿದೆ.

ಪ್ರಿಯಾ ಕೆಣಕುವ ಕಣ್ಣೋಟಕ್ಕೆ ಮಂಗಳೂರಿನ ಕಾರ್ಪರೇಟರ್ ಕೂಡ ಫಿದಾ!

ಮೂರು ನಗರಗಳಲ್ಲಿ ಎಫ್.ಐ.ಆರ್

ಹೈದರಾಬಾದ್‌ ನ ಫಲಕ್ನಾಮಾ ಠಾಣೆಯಲ್ಲಿ ಫೆ.14ರಂದು ಪ್ರಿಯಾ ವಿರುದ್ಧ ದೂರು ದಾಖಲಾಗಿದೆ. ಅದೇ ದಿನ ಮುಂಬೈನ 'ರಾಜಾ ಅಕಾಡೆಮಿ'ಯ ಕಾರ್ಯದರ್ಶಿ ಸಹ ಪ್ರಿಯಾ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದಾರೆ. ಹಾಗೆಯೇ, ಔರಂಗಾಬಾದ್ ನಲ್ಲೂ ಎಫ್.ಐ.ಆರ್ ಆಗಿದೆ. ಒಟ್ಟು ಮೂರು ಕಡೆ ಎಫ್ಐಆರ್ ರಿಜಿಸ್ಟರ್ ಆಗಿದೆ.

ಪ್ರಿಯಾ ಸ್ಟೈಲ್ ನಲ್ಲಿ ಕಿಸ್ ಕೊಟ್ಟ 'ಮುಗುಳುನಗೆ' ಸುಂದರಿ

ಎಫ್.ಐ.ಆರ್ ರದ್ದುಗೊಳಿಸಲು ಮನವಿ

ತಮ್ಮ ವಿರುದ್ಧ ದಾಖಲಾಗಿರುವ ಎಫ್‌.ಐ.ರ್ ರದ್ದುಪಡಿಸಬೇಕು ಮತ್ತು ತೆಲಂಗಾಣ, ಮಹಾರಾಷ್ಟ್ರ ಸರಕಾರಗಳು ಯಾವುದೇ ಕ್ರಮಕ್ಕೆ ಮುಂದಾಗದಂತೆ ತಡೆ ನೀಡಬೇಕು ಎಂದು ಪ್ರಿಯಾ ಪ್ರಕಾಶ್ ವಾರಿಯರ್ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಸೋಮವಾರ ಪ್ರಿಯಾ ಪ್ರಕಾಶ್​ ವಾರಿಯರ್​, ಚಿತ್ರದ ನಿರ್ದೇಶಕ ಓಮರ್​ ಅಬ್ದುಲ್​ ವಹಾಬ್​ ಮತ್ತು ನಿರ್ಮಾಪಕ ಜೋಸೆಫ್​ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

40 ವರ್ಷಗಳ ಹಾಡು, ಈಗ್ಯಾಕೆ ವಿವಾದ.?

ಚಿತ್ರದಲ್ಲಿ ಬಳಸಿರುವ ಹಾಡನ್ನು 1978ರಲ್ಲಿ ಪಿಎಂಎ ಜಬ್ಬಾರ್​ ರಚಿಸಿದ್ದರು. ಕೇರಳದಲ್ಲಿ ಮುಸ್ಲಿಂ ಜಾನಪದ ಹಾಡಾಗಿ ಇದು ಖ್ಯಾತಿಗಳಿಸಿಕೊಂಡಿತ್ತು. ಪ್ರವಾದಿ ಮೊಹಮ್ಮದ್​ ಮತ್ತು ಅವರ ಮೊದಲ ಪತ್ನಿ ಖಾದೀಜಾ ನಡುವಿನ ಪ್ರೀತಿಯನ್ನು ವರ್ಣಿಸಲಾಗಿದೆ. 40 ವರ್ಷಗಳಿಂದ ಈ ಹಾಡಿಗೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಆದರೆ ಈಗ್ಯಾಕೆ ಎಂದು ಚಿತ್ರತಂಡ ತಿಳಿಸಿದೆ.

ರಾತ್ರೋರಾತ್ರಿ 'ಸೂಪರ್ ಸ್ಟಾರ್'ಗಳಾದ ಈ 5 ಜನರ ಬಗ್ಗೆ ನೀವು ತಿಳಿಯಬೇಕು

English summary
The Supreme Court will hear tomorrow teen Malayalam actor Priya Prakash Varrier's petition against a First Information Report (FIR) filed against her and the director of her upcoming movie. The top court agreed to hear the matter after her lawyer sought an urgent hearing of the plea.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada