ಅಂಬರೀಶ್ ವಿಧಿವಶ : ದರ್ಶನ್, ಸುದೀಪ್ ಪತ್ನಿ ನುಡಿ ನಮನ

ನಟ ಅಂಬರೀಶ್ ಬಾರದ ಲೋಕಕ್ಕೆ ಹೋಗಿದ್ದಾರೆ. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಕಂಗಾಲಾಗಿದೆ. ಕನ್ನಡದ ಸ್ಟಾರ್ ಕುಟುಂಬದ ಒಬ್ಬ ಸದಸ್ಯನಂತೆ ಇದ್ದ ಅಂಬಿ ಅಗಲಿಕೆ ಎಲ್ಲರಲ್ಲಿ ನೋವುಂಟು ಮಾಡಿದೆ.

ನಟ ದರ್ಶನ್, ಸುದೀಪ್, ಉಪೇಂದ್ರ, ಯಶ್ ಹೀಗೆ ಎಲ್ಲ ನಟರ ಕುಟುಂಬದೊಂದಿಗೆ ಅಂಬರೀಶ್ ಒಳ್ಳೆಯ ಒಡನಾಟ ಹೊಂದಿದ್ದರು. ಅವರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದರು. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ, ಅವರ ಕುಟುಂಬ ಹಿರಿಯಣ್ಣನಂತೆ ಇದ್ದರು.

ಇನ್ನು, ಪ್ರೀತಿಯ ಅಂಬರೀಶಣ್ಣರನ್ನು ಕಳೆದುಕೊಂಡಿರುವ ಸುದೀಪ್ ಪತ್ನಿ ಪ್ರಿಯಾ ಸುದೀಪ್, ದರ್ಶನ್ ಪತ್ನಿ ವಿಜಯಲಕ್ಷ್ಮಿ, ರಾಧಿಕಾ ಪಂಡಿತ್, ಪ್ರಿಯಾಂಕ ಉಪೇಂದ್ರ ತಮ್ಮ ಅಂತಿಮ ನುಡಿ ನಮನವನ್ನು ಸಲ್ಲಿಸಿದ್ದಾರೆ. ಮುಂದೆ ಓದಿ...

ಹಳೆ ನೆನಪು ಹಂಚಿಕೊಂಡ ಪ್ರಿಯಾ ಸುದೀಪ್

''ಸುದೀಪ್ ಹಾಗೂ ನಾನು ನಮ್ಮ ಮನೆಯಲ್ಲಿ ಅವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಮಾಡಿದ್ದೇವು. ಆ ದಿನ ಎಷ್ಟೊಂದು ಖುಷಿಯಾಗಿತ್ತು. ಸುದೀಪ್ ತಮ್ಮ ಕೈಯಾರ ಒಂದು ಕಾರ್ಡ್ ಮಾಡಿ ಅವರಿಗೆ ನೀಡಿದ್ದರು. ಅದನ್ನು ನಾವು ತುಂಬ ಪ್ರೀತಿಯಿಂದ ನೀಡಿದ್ದೇವು. ನಾವು ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ.'' - ಪ್ರಿಯಾ ಸುದೀಪ್,

ದುಃಖದಲ್ಲಿ ವಿಜಯಲಕ್ಷ್ಮಿ ದರ್ಶನ್

''ಅಪ್ಪಾಜಿ ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂಬ ಸುದ್ದಿ ನಮಗೆ ಬಹಳ ದುಃಖ ನೀಡಿದೆ. ಅವರನ್ನು ನಾವು ಬಹಳ ಮಿಸ್ ಮಾಡಿಕೊಳ್ಳುತ್ತೇವೆ. ನಾನು ಅವರಿಗೆ ಸಂತಾಪ ಸೂಚಿಸುತ್ತೇನೆ.'' - ವಿಜಯಲಕ್ಷ್ಮಿ ದರ್ಶನ್

ನಮ್ಮ ಹೃದಯದಲ್ಲಿ ಸದಾ ಇರುತ್ತೀರ - ಪ್ರಿಯಾಂಕ

''ನಿಮ್ಮ ಉತ್ಸಾಹ, ನಿಮ್ಮ ಲವಲವಿಕೆ ಎಂದು ಮಾಸುವುದಿಲ್ಲ. ನಮ್ಮ ಹೃದಯದಲ್ಲಿ ನೀವು ಸದಾ ಇರುತ್ತೀರ. ವಿ ಲವ್ ಯೂ ಅಂಬರೀಶ್ ಸರ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮನ್ನೂ ನಾವು ಬಹಳ ಮಿಸ್ ಮಾಡಿಕೊಳ್ಳುತ್ತೇವೆ. ಈ ವಿಷಯವನ್ನು ಇನ್ನು ನಮಗೆ ನಂಬಲು ಆಗುತ್ತಿಲ್ಲ.'' - ಪ್ರಿಯಾಂಕ ಉಪೇಂದ್ರ, ನಟಿ

ವಿಲ್ ಮಿಸ್ ಯೂ ಅಣ್ಣ - ರಾಧಿಕಾ ಪಂಡಿತ್

ಅಂಬರೀಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ನಟಿ ರಾಧಿಕಾ ಪಂಡಿತ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ 'ವಿಲ್ ಮಿಸ್ ಯೂ ಅಣ್ಣ' ಎಂದು ಬರೆದುಕೊಂಡಿದ್ದಾರೆ. ಯಶ್ ಹಾಗೂ ತಮ್ಮ ಜೊತೆಗೆ ಅಂಬರೀಶ್ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ರಾಧಿಕಾ ಸೀಮಂತ ಕಾರ್ಯಕ್ರಮದಲ್ಲಿ ಸಹ ಅಂಬಿ ಭಾಗಿಯಾಗಿದ್ದರು.

More from Filmibeat

English summary
Priya Sudeep and Vijayalakshmi Darshan condolences for actor Ambareesh death. Kannada Actor, Former Minister, Congress Politician Ambareesh (66) passed away on November 24th in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X