ಮಗಳ ಸ್ನೇಹಿತೆಯ ಹಾಡಿಗೆ ಮನಸೋತ ಪ್ರಿಯಾ ಸುದೀಪ್
ಸಾಮಾನ್ಯವಾಗಿ ನಮ್ಮ ಮಕ್ಕಳು ಬುದ್ದಿವಂತರಾಗಬೇಕು, ನೋಡಿದವರು ನಿಮ್ಮ ಮಗಳು ಚೆನ್ನಾಗಿದ್ದಾಳೆ, ಬುದ್ದಿವಂತೆ, ಹಾಗೆ ಹೀಗೆ ಅಂತೆಲ್ಲಾ ಹೇಳಬೇಕು ಎನ್ನುವ ಆಸೆ ಪ್ರತಿ ಪೋಷಕರು ಹೊಂದಿರುತ್ತಾರೆ.
ಆದರೆ ಕೆಲವರು ಮಾತ್ರ ನಮ್ಮ ಮಕ್ಕಳ ಜೊತೆಯಲ್ಲಿ ಅವರ ಸ್ನೇಹಿತರು ಕೂಡ ಚೆನ್ನಾಗಿರಲಿ, ಅವರೂ ನಮ್ಮ ಮಕ್ಕಳಂತೆ ಎನ್ನುವ ಭಾವನೆಯನ್ನು ಹೊಂದಿರುತ್ತಾರೆ, ಈಗ್ಯಾಕೆ ಇದೆಲ್ಲಾ ಹೇಳುತ್ತಿದ್ದೇವೆ ಎಂದರೆ ಕಿಚ್ಚನ ಪುತ್ರಿ ಸಾನ್ವಿ ಸ್ನೇಹಿತೆಯ ಹಾಡನ್ನು ಕೇಳಿ ಪ್ರಿಯಾ ಸುದೀಪ್ ಮನಸೋತಿದ್ದಾರೆ.
ಪ್ರಿಯಾ ಸುದೀಪ್ ಜೊತೆಯಲ್ಲಿ ಕಿಚ್ಚನ ಕುಟುಂಬಸ್ಥರನ್ನೆಲ್ಲಾ ಮೋಡಿ ಮಾಡಿರುವ ಪುಟ್ಟ ಪೋರಿ ಯಾರದು? ಸಾನ್ವಿ ಸ್ನೇಹಿತೆಯ ಬಗ್ಗೆ ಪ್ರಿಯಾ ಸುದೀಪ್ ಹೇಳಿರುವ ಮಾತುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ, ಮುಂದೆ ಓದಿ
ಸಾನ್ವಿ ಸುದೀಪ್ ಸ್ನೇಹಿತೆಯ ಗಾನ
ಕಿಚ್ಚ ಸುದೀಪ್ ಮಡದಿ ಪ್ರಿಯಾ ಸುದೀಪ್ ಪುತ್ರಿ ಸಾನ್ವಿಯ ಸ್ನೇಹಿತೆಯ ಧ್ವನಿಗೆ ಮನಸೋತಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ವಿಡಿಯೋ ಸಮೇತ ಸ್ಟೇಟಸ್ ಹಾಕಿದ್ದಾರೆ ಪ್ರಿಯಾ ಸುದೀಪ್.

ಇಂಡಿಯನ್ ಐಡಲ್ ವಿನ್ನರ್ ಅಂಜನಾ
ಸಾನ್ವಿಯ ಸ್ನೇಹಿತೆ ಅಂಜನಾ ಪದ್ಮನಾಭನ್ ಅತ್ಯುತ್ತಮ ಗಾಯಕಿ. ಈಗಾಗಲೇ 'ಇಂಡಿಯನ್ ಐಡಲ್ ಜೂನಿಯರ್' ವಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ಸಾನ್ವಿಯ ಅವಳಿ ತರ ಕಾಣುವ ಅಂಜನಾ ಪದ್ಮನಾಭನ್ ಪ್ರತಿಭೆ ನೋಡಿ ಕಿಚ್ಚನ ಮನೆ ಮಂದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಗಾನ ಕೇಳಿ ಇಂಪ್ರೆಸ್ ಆದ ಸುದೀಪ್ ಸಹೋದರಿ
ಕಿಚ್ಚನ ಮಡದಿ ಮಾತ್ರವಲ್ಲ, ಸುದೀಪ್ ಅವರ ಸಹೋದರಿ ಸುಜಾತ ಸಂಜೀವ್ ಕೂಡ ಅಂಜನಾ ಪ್ರತಿಭೆ ನೋಡಿ ಸಂತಸ ವ್ಯಕ್ತ ಪಡಿಸಿದ್ದಾರೆ. ಊಹೆ ಮಾಡಿಕೊಳ್ಳಲಾಗದ ಅಂಜನಾ ಅವರ ಪ್ರತಿಭೆಯನ್ನು ನೋಡಿ ಎಂದು ಟ್ವೀಟ್ ಮಾಡಿದ್ದಾರೆ.

ಕಿಚ್ಚನ ಮನೆಮಂದಿಯ ಸಹಕಾರ
ಕಿಚ್ಚ ಸುದೀಪ್ ಅವರಂತೆಯೇ ಮನೆ ಮಂದಿಯೂ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಬೆಂಬಲ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ಸಣ್ಣ ಬೆಂಬಲದಿಂದ ಅವರಿಗೆ ಉಪಯೋಗವಾಗುತ್ತೆ ಎಂದರೆ ಮಾಡೋಣ ಎನ್ನುವ ಮನಸ್ಥಿತಿಯನ್ನು ರೂಡಿಸಿಕೊಂಡಿದ್ದಾರೆ.


Click it and Unblock the Notifications











