'ಮನೆಗೆ ಯಾವಾಗ ಬರ್ತೀರಾ' ಎಂದು ಕಿಚ್ಚನಿಗೆ ಓಪನ್ ಪ್ರಶ್ನೆ ಕೇಳಿದ್ದು ಯಾರು?

Recommended Video

'ಮನೆಗೆ ಯಾವಾಗ ಬರ್ತೀರಾ' ಎಂದು ಕಿಚ್ಚನಿಗೆ ಪ್ರಶ್ನೆ ಕೇಳಿದ್ದು ಯಾರು? | FILMIBEAT KANNADA

ಸುದೀಪ್ ಸದ್ಯ ಪೈಲ್ವಾನ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆಯಷ್ಟೆ ಟ್ವಿಟ್ಟರ್ ಇಂಡಿಯಾ ಬ್ಲ್ಯೂ ರೂಮ್ ಲೈವ್ ನಲ್ಲಿ ಇದ್ದ ಕಿಚ್ಚನಿಗೆ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೆ ಹರಿದು ಬಂದಿದೆ. ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಕಿಚ್ಚನಿಗೆ ಪ್ರಶ್ನೆ ಕೇಳಿದ್ದಾರೆ.

ಎಲ್ಲರ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದ ಸುದೀಪ್ ಗೆ ಮಧ್ಯದಲ್ಲೆ ವಿಶೇಷವಾದ ಪ್ರಶ್ನೆ ಕೂಡ ಎದುರಾಗಿದೆ. ಲೈವ್ ನಲ್ಲಿದ್ದ ಕಿಚ್ಚನಿಗೆ ಮನೆಗೆ ಯಾವಾಗ ಬರ್ತೀರಾ ಎಂದು ಕೇಳಿದ್ದಾರೆ. ಅಂದ್ಹಾಗೆ ಅಚ್ಚರಿ ಪಡಬೇಡಿ ಈ ರೀತಿಯ ಪ್ರಶ್ನೆ ಎಲ್ಲಿಂದ್ದ ಬರೋಕೆ ಸಾಧ್ಯ. ಸುದೀಪ್ ಪತ್ನಿ ಪ್ರಿಯಾ ಸುದೀಪ್ ಈ ಪ್ರಶ್ನೆ ಕೇಳಿದ್ದಾರೆ.

"ಯಾವಾಗ ಮನೆಗೆ ಬರ್ತೀರಾ ಬ್ಯುಸಿ ಹಸ್ಬೆಂಡ್" ಎಂದು ಪ್ರಿಯಾ ಕೇಳಿರುವ ಪ್ರಶ್ನೆಗೆ, ಮುಂಬೈನಲ್ಲಿ ಲೈವ್ ನಲ್ಲಿ ಕುಳಿತಿದ್ದ ಸುದೀಪ್ "ಬೇಗ, ಸಲ್ಮಾನ್ ಸರ್ ನನ್ನನ್ನು ಅವರ ಕಸ್ಟಡಿಯಿಂದ ಮನೆಗೆ ಹೋಗಲು ಬಿಟ್ಟಾಗ. ಆದರೆ ಯಾರಾದರೊಬ್ರು ನನ್ನನ್ನು ಅವರ ಕಸ್ಟಡಿಯಲ್ಲಿ ಇಟ್ಟಿರ್ತಾರೆ" ಎಂದು ಹೇಳಿದ್ದಾರೆ.

Priya Sudeep Questioned To Sudeep in Twitter India Blue Room Live

ಅಂದ್ಹಾಗೆ ಸುದೀಪ್ ಪೈಲ್ವಾನ್ ಸಿನಿಮಾದ ಪ್ರಮೋಷನ್ ನಡುವೆ ಬಾಲಿವುಡ್ ನ ದಬಾಂಗ್-3 ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ. ಕೊನೆಯ ಹಂತದ ಚಿತ್ರೀಕರಣದ ಒತ್ತಡದಲ್ಲಿರುವ ಕಿಚ್ಚ ಪೈಲ್ವಾನ್ ಪ್ರಮೋಷನ್ ನಲ್ಲೂ ಹಾಜರಾಗುತ್ತಿದ್ದಾರೆ.

ಪೈಲ್ವಾನ್ ಇದೇ ತಿಂಗಳು 12ರಂದು ತೆರೆಗೆ ಬರುತ್ತಿದೆ. ಈಗಾಗಲೆ ಚಿತ್ರದ ಮುಂಗಡ ಬುಕ್ಕಿಂಗ್ ಕೂಡ ಆರಂಭವಾಗಿದೆ. ಅಭಿಮಾನಿಗಳು ಮುಗಿಬಿದ್ದು ಬುಕ್ಕಿಂಗ್ ಮಾಡುತ್ತಿದ್ದಾರೆ. ಐದು ಭಾಷೆಯಲ್ಲಿ ಸುಮಾರು 3000 ಸಾವಿರ ಚಿತ್ರಮಂದಿರಗಳಲ್ಲಿ ಪೈಲ್ವಾನ್ ತೆರೆಗೆ ಬರುತ್ತಿದೆ.

More from Filmibeat

English summary
Kannada actor Sudeep wife Priya Sudeep questioned to Sudeep in Twitter India blue room live.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X