ಪ್ರಿಯಾ ಸುದೀಪ್ ಯೂಟ್ಯೂಬ್ ಚಾನಲ್ ಬಿಡುಗಡೆ, ಮೊದಲ ವಿಡಿಯೋ ಇದೆ

ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಯುಗಾದಿ ಹಬ್ಬಕ್ಕೆ ಒಂದು ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದರು. ಪ್ರಿಯಾ ಕೊಡುವ ಸರ್ಪ್ರೈಸ್ ಗಿಫ್ಟ್ ಏನಿರಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಅಲ್ಲದೆ ಯುಗಾದಿ ವರೆಗೂ ಕಾಯಲು ಸಾಧ್ಯವಿಲ್ಲ ಈಗಲೇ ಹೇಳಿ ಬಿಡಿ ಮೇಡಂ ಅಂತ ಪ್ರಿಯಾ ಅವರನ್ನು ಕೇಳುತ್ತಿದ್ದರು.

ಆದ್ರೀಗ ಈ ಕುತೂಹಲಕ್ಕೆ ಪ್ರಿಯಾ ತೆರೆ ಎಳೆದಿದ್ದಾರೆ . ಹೌದು, ಪ್ರಿಯಾ ಸುದೀಪ್ ಕಡೆಯಿಂದ ಯೂಟ್ಯೂಬ್ ಚಾನೆಲ್ ರಿಲೀಸ್ ಆಗಿದೆ. ಕಿಚ್ಚ ಕ್ರಿಯೇಷನ್ಸ್ ನ ಹೊಸ ಯೂಟ್ಯೂಬ್ ಚಾನೆಲ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಯುಗಾದಿ ಗಿಫ್ಟ್ ನೀಡಿದ್ದಾರೆ ಸುದೀಪ್ ದಂಪತಿ.

ಇನ್ನು ಮುಂದೆ ಕಿಚ್ಚ ಅವರ ಸಿನಿಮಾಗೆ ಸಂಬಂಧಿಸಿದ ಎಲ್ಲಾ ಅಪ್ ಡೆಟ್ಸ್ ಕಿಚ್ಚ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ಮೂಲಕ ಸಿಗಲಿದೆ. ''ಅಜಾನುಬಾಹು, ಆರಡಿ ಅಸ್ತ್ರ ಸಿಂಹಕಂಠ, ಬಿಲ್ಲನೋಟ'' ಹೀಗೆ ಕಿಚ್ಚನ ಬಗ್ಗೆ ಇರುವ ಸಾಲುಗಳು ಕೂಡ ಅಭಿಮಾನಿಗಳ ಮನಸೆಳೆದಿದೆ. ಕೃಷ್ಣನ ಲೋಗೊ ಇರುವ ಈ ಯೂಟ್ಯೂಬ್ ಚಾನೆಲ್ ಗೆ ಈಗಾಗಲೇ ಸಾವಿರಾರು ಮಂದಿ ಸಬ್ ಸ್ಕ್ರೈಬ್ ಆಗಿದ್ದಾರೆ.

Priya Sudeep release Kiccha Creations new youtube channel

ಇನ್ನು ವಿಶೇಷ ಅಂದರೆ, ಇದು ಕೇವಲ ಕಿಚ್ಚ ಸುದೀಪ್ ಅವರ ಸಿನಿಮಾ ವಿಚಾರ ಮಾತ್ರವಲ್ಲದೆ ಹೊಸ ಪ್ರತಿಭೆಗಳಿಗೂ ಅವಕಾಶವಿದೆ ಎಂದು ಸುದೀಪ್ ಹೇಳಿದ್ದಾರೆ. ಜೊತೆಗೆ ಈ ಚಾನೆಲ್ ಮಾಡಬೇಕೆಂದು ಪ್ಲಾನ್ ಮಾಡಿ ಲಾಂಚ್ ಮಾಡಿರುವ ಪತ್ನಿ ಪ್ರಿಯಾ ಸುದೀಪ್ ಅವರಿಗೂ ಸುದೀಪ್ ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

More from Filmibeat

English summary
Kannada actor sudeep's wife Priya Sudeep released new youtube channel in the name of Kiccha Creations. Kichha Andre Krishna alwa this is the first video of Kiccha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X