ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಪತ್ನಿಗೆ ಇದು ಫೆವರೇಟ್ ದೃಶ್ಯವಂತೆ

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಚೆನ್ನಾಗಿದೆ, ಸುದೀಪ್ ಅವರ ಪಾತ್ರ ತುಂಬಾ ಇಷ್ಟ, ನಾಯಕಿ ಆಕಾಂಕ್ಷ ಸಿಂಗ್ ಸೂಪರ್ ಎಂದೆಲ್ಲ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಇದರ ಜೊತೆಗೆ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಕೂಡ ಪೈಲ್ವಾನ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಬಳಿಕ ಟ್ವೀಟ್ ಮಾಡಿರುವ ಸುದೀಪ್ ಮಡದಿ, ಪೈಲ್ವಾನ್ ಚಿತ್ರದಲ್ಲಿ ಬಹಳ ಇಷ್ಟವಾದ ದೃಶ್ಯ ಯಾವುದು ಎಂದು ಹೇಳಿಕೊಂಡಿದ್ದಾರೆ.

ಮೆಜೆಸ್ಟಿಕ್ ಬಳಿಯಿರುವ ಸಂತೋಷ್ ಚಿತ್ರಮಂದಿರದಲ್ಲಿ ಸುದೀಪ್ ಪತ್ನಿ ಪ್ರಿಯಾ ಮತ್ತು ಮಗಳು ಸಿನಿಮಾ ನೋಡಿದ್ದರು. ಹಾಗಿದ್ರೆ, ಕಿಚ್ಚನ ಮಡದಿಗೆ ಇಷ್ಟವಾದ ಆ ದೃಶ್ಯ ಯಾವುದು? ಮುಂದೆ ಓದಿ....

ಮದುವೆಗೆ ಸುದೀಪ್ ಎಂಟ್ರಿ ದೃಶ್ಯ

ಮದುವೆಗೆ ಸುದೀಪ್ ಎಂಟ್ರಿ ದೃಶ್ಯ

ಪೈಲ್ವಾನ್ ಚಿತ್ರದಲ್ಲಿ ಪ್ರಮುಖವಾದ ದೃಶ್ಯ ಅದು. ನಟಿ ಆಕಾಂಕ್ಷಿ ಸಿಂಗ್ ಗೆ ಬೇರೆ ಹುಡುಗನ ಮದುವೆ ನಿಶ್ಚಿಯ ಮಾಡಲಾಗಿರುತ್ತೆ. ಆದರೆ ಆಕಾಂಕ್ಷ ಸಿಂಗ್ ಅವರನ್ನ ಪ್ರೀತಿಸುತ್ತಿದ್ದ ಸುದೀಪ್ ಆ ಮದುವೆಗೆ ಮಾಸ್ ಆಗಿ ಎಂಟ್ರಿ ಕೊಡುತ್ತಾರೆ. ಈ ದೃಶ್ಯ ಕಿಚ್ಚನ ಪತ್ನಿಗೆ ಬಹಳ ಇಷ್ಟವಾಗಿದೆಯಂತೆ.

ಆ ಜಾಗದಲ್ಲಿ ವಧು ನಾನಿರಬೇಕಿತ್ತು

ಆ ಜಾಗದಲ್ಲಿ ವಧು ನಾನಿರಬೇಕಿತ್ತು

ಇದು ಪೈಲ್ವಾನ್ ಚಿತ್ರದಲ್ಲಿ ಬಹಳ ಮುಖ್ಯವಾದ ದೃಶ್ಯ. ಮದುವೆ ಹೆಣ್ಣಾಗಿ ಆಕಾಂಕ್ಷ ಸಿಂಗ್ ಹಸೆಮಣೆ ಮೇಲೆ ಕುಳಿತುಕೊಂಡಿರುತ್ತಾರೆ. ಈ ಸೀನ್ ಮೆಚ್ಚಿಕೊಂಡಿರುವ ಪ್ರಿಯಾ ಸುದೀಪ್ ''ಆಕಾಂಕ್ಷ ಸಿಂಗ್ ಕುಳಿತುಕೊಂಡಿದ್ದ ಜಾಗದಲ್ಲಿ ನಾನು ವಧುವಾಗಿ ಇರಬೇಕಿತ್ತು'' ಎಂದು ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ.

ನಿಮ್ಮ ನೆಚ್ಚಿನ ದೃಶ್ಯ ಯಾವುದು?

ನಿಮ್ಮ ನೆಚ್ಚಿನ ದೃಶ್ಯ ಯಾವುದು?

ತಮ್ಮ ನೆಚ್ಚಿನ ದೃಶ್ಯ ಯಾವುದು ಎಂದು ಹೇಳಿರುವ ಪ್ರಿಯಾ ಅವರು ಅಭಿಮಾನಿಗಳಿಗೆ ನಿಮ್ಮೆ ನೆಚ್ಚಿನ ದೃಶ್ಯ ಯಾವುದು ಎಂದು ಕೇಳಿದ್ದಾರೆ. ಇದಕ್ಕೆ ಅಭಿಮಾನಿಗಳು ಕೂಡ ಪ್ರತಿಕ್ರಿಯಿಸುತ್ತಿದ್ದು, ತಮ್ಮ ತಮ್ಮ ಫೆವರೇಟ್ ದೃಶ್ಯದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಪೈಲ್ವಾನ್ ಗೆ ಮಗಳು ಏನಂದ್ರು?

ಪೈಲ್ವಾನ್ ಗೆ ಮಗಳು ಏನಂದ್ರು?

ಇನ್ನು ಪೈಲ್ವಾನ್ ಚಿತ್ರವನ್ನ ನೋಡಿದ ಸುದೀಪ್ ಅವರ ಪುತ್ರಿ ತನ್ನ ಅಪ್ಪನನ್ನು ತಬ್ಬಿಕೊಂಡು ''I am proud of you papa'' (ನಾನು ನಿನ್ನ ಬಗ್ಗೆ ಹೆಮ್ಮೆ ಪಡುತ್ತೇನೆ ಪಪ್ಪಾ) ಎಂದು ಹೇಳಿದ್ದಾರೆ. ಮಗಳ ಈ ಮಾತು ಕೇಳಿ ಸುದೀಪ್ ಭಾವುಕರಾದರು.

More from Filmibeat

English summary
Kannada actor Kiccha Sudeep Wife Priya sudeep shared her favourite scene from pailwaan movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X