ಅಂಬಿ ಚಿತ್ರದಲ್ಲಿ ಪ್ರಿಯಾ ಸುದೀಪ್ ಮೆಚ್ಚಿಕೊಂಡ ಅಂಶಗಳಿವು
Recommended Video

ನಿನ್ನೆ ರಿಲೀಸ್ ಆಗಿರುವ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಅಭಿಮಾನಿಗಳ ಜೊತೆಗೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕೂಡ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಸಿನಿಮಾ ನೋಡಿ ಬಂದಿರುವ ಅವರು, ಹಾಸ್ಯ, ಸೂಕ್ಷ್ಮತೆ, ಸೆಂಟಿಮೆಂಟ್ ಇರುವ ಅಂಬಿ ಮಾಮನನ್ನು ನೋಡಿ ಪ್ರೀತಿಯಲ್ಲಿ ಬಿದ್ದೆ ಎಂದಿದ್ದಾರೆ. ಜೊತೆಗೆ ಸುಹಾಸಿನಿ ಮತ್ತು ಶೃತಿ ಹರಿಹರನ್ ನಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಸುದೀಪ್ ತುಂಬ ಕ್ಯೂಟ್ ಆಗಿ ಕಾಣುತ್ತಾರೆ ಎಂದಿರುವ ಪ್ರಿಯಾ ಚಿತ್ರದ ಪ್ರತಿ ಪಾತ್ರಗಳನ್ನು ಹೋಗಳಿದ್ದಾರೆ. ಗುರುದತ್ ಗಾಣಿಗ ನಿರ್ದೇಶನ ಹಾಗೂ ಅರ್ಜುನ್ ಜನ್ಯ ಹಿನ್ನಲೆ ಸಂಗೀತದ ಬಗ್ಗೆ ಹೇಳಿದ್ದಾರೆ.
ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ವಿಮರ್ಶೆ
ಇದೊಂದು feel good ಸಿನಿಮಾ. ವಯಸ್ಸಾದ ಅಪ್ಪ ಅಂದ್ರೆ, ನಮ್ಮ ಮಕ್ಕಳನ್ನು ನೋಡಿಕೊಳ್ಳುವುದು, ನಾವು ಇಲ್ಲದಿದ್ದಾಗ ಮನೆ ಕಾಯುವುದು, ನಾವು ಹಾಕಿದ ಚಾನೆಲ್ ನೋಡುವುದು ಇಷ್ಟೇ ಅಂತ ನೀವೆನಾದರೂ ಅಂದುಕೊಂಡಿದ್ದರೆ ಒಮ್ಮೆ 'ಅಂಬಿ ನಿಂಗೆ ವಾಯಸ್ಸಾಯ್ತೋ' ಸಿನಿಮಾ ನೋಡಿ. ಈ ರೀತಿಯ ನಿಮ್ಮ ಭಾವನೆ ಬದಲಾಗಬಹುದು. ಇದು ಮಾಸ್ ಚಿತ್ರವೋ ಕ್ಲಾಸ್ ಚಿತ್ರವೋ ಎನ್ನುವುದನ್ನು ಬಿಟ್ಟು 'ಅಂಬಿ ನಿಂಗೆ ವಾಯಸ್ಸಾಯ್ತೋ' ಒಂದು ಭಾವನಾತ್ಮಕ ಸಿನಿಮಾ.


Click it and Unblock the Notifications











