'ದಿ ವಿಲನ್' ನೋಡುವ ಮುಂಚೆ ಪ್ರಿಯಾ ಸುದೀಪ್ ಟ್ವೀಟ್
ಕೆಲವೇ ಗಂಟೆಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ 'ದಿ ವಿಲನ್' ಸಿನಿಮಾ ಬಿಡುಗಡೆಯಾಗುತ್ತಿದೆ. ಇಂದು ಮಧ್ಯರಾತ್ರಿಯೇ ಸಿನಿಮಾದ ಪ್ರದರ್ಶನ ಹುಬ್ಬಳ್ಳಿ, ಮೈಸೂರು, ಹೊಸಪೇಟೆ ಸೇರಿದಂತೆ ಕೆಲವು ಭಾಗಗಳಲ್ಲಿ ರಿಲೀಸ್ ಆಗುತ್ತಿದೆ.
ಈ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಯಾವ ರೀತಿಯ ನಿರೀಕ್ಷೆ ಇದೆಯೋ ಅದೇ ರೀತಿ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕೂಡ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ''ನಾನು ಈ ರೀತಿಯ ಕ್ರೇಜ್ ಅನ್ನು ಹಿಂದೆ ನೋಡಿಯೇ ಇರಲಿಲ್ಲ. ಇದು ಹಬ್ಬದ ರೀತಿ ಆಗಿದೆ. ಎನರ್ಜಿಟಿಕ್ ಶಿವಣ್ಣ, ಪ್ರೇಮ್ ಹಾಗೂ ನನ್ನ ಪ್ರೀತಿಯ ಹೀರೋ ಸುದೀಪ್ ಅವರು ಸೇರಿದಂತೆ ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯ.'' ಎಂದಿದ್ದಾರೆ.

ವರ್ಷಗಳಿಂದ ಕಾಯುತ್ತಿರುವ 'ದಿ ವಿಲನ್' ಅಂತೂ ನಾಳೆ ಬಿಡುಗಡೆಯಾಗುತ್ತಿದೆ. ಇನ್ನೊಂದು ಕಡೆ ಸುದೀಪ್ ಹಾಗೂ ಪ್ರಿಯಾ ಸುದೀಪ್ ಅವರ ವಿವಾಹ ವಾರ್ಷಿಕೋತ್ಸವ ಕೂಡ ನಾಳೆಯೇ ಇದೆ.
More from Filmibeat
English summary
Priya Sudeep tweets about 'The Villain' kannada movie craze. Actor Shivarajkumar and Sudeep starrer kannada movie 'The Villain' will be releasing tomorrow ( october 16th).
priya sudeep the villain sudeep shiva rajkumar prem amy jackson release sandalwood ಪ್ರಿಯಾ ಸುದೀಪ್ ದಿ ವಿಲನ್ ಸುದೀಪ್ ಶಿವರಾಜ್ ಕುಮಾರ್ ಪ್ರೇಮ್ ಬಿಡುಗಡೆ ಸ್ಯಾಂಡಲ್ ವುಡ್


Click it and Unblock the Notifications











