ಟಾಲಿವುಡ್ ಗೆ ಹಾರಿದ ಕಣ್ಸನ್ನೆಯ ಬೆಡಗಿ ಪ್ರಿಯಾ ವಾರಿಯರ್

ಕಣ್ಸನ್ನೆಯ ಮೂಲಕ ಇಡೀ ದೇಶದಲ್ಲೆ ಸಂಚಲನ ಮೂಡಿಸಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಓರು ಆಡಾರ್ ಲವ್ ಸಿನಿಮಾ ಮೂಲಕ ಬಣ್ಣ ಲೋಕದ ಜರ್ನಿ ಪ್ರಾರಂಭಿಸಿದ ಪ್ರಿಯಾ ಖ್ಯಾತಿಗಳಿಸುತ್ತಿದ್ದಂತೆ ಬಾಲಿವುಡ್ ಕಡೆ ಮುಖಮಾಡಿದ್ರು.

ಬಾಲಿವುಡ್ ನಲ್ಲಿ ಎರಡು ಸಿನಿಮಾಗಳಲ್ಲಿ ಬ್ಯುಸಿ ಇರುವ ಪ್ರಿಯಾ ಈಗ ಟಾಲಿವುಡ್ ಕಡೆ ಪಯಣ ಬೆಳೆಸಿದ್ದಾರೆ. ಟಾಲಿವುಡ್ ನ ಖ್ಯಾತ ನಟ ನಿತಿನ್ ಅಭಿನಯದ ಮುಂದಿನ ಸಿನಿಮಾದಲ್ಲಿ ಪ್ರಿಯಾ ನಾಯಕಿಯಾಗಿ ಮಿಂಚಲಿದ್ದಾರೆ. ಈಗಾಗಲೆ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು ಸಧ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಅಂದ್ಹಾಗೆ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಜೊತೆ ಮತ್ತೋರ್ವ ಸ್ಟಾರ್ ನಾಯಕಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಕೂಡ ಪ್ರಮುಕ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಚಿತ್ರಕ್ಕೆ ಚಂದ್ರ ಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Priya Varrier and actress Rakul Preet Singh will romance on screen with Nithiin

ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡಕ್ಕೆ ಬರ್ತಾರೆ ಎನ್ನುವ ಸುದ್ದಿ ಕೂಡ ಇದೆ. ಈಗಾಗಲೆ ಪ್ರಿಯಾ ಜೊತೆ ಮಾತುಕತೆ ಕೂಡ ಆಗಿದೆ. ಇದರ ನಡುವೆ ಈಗ ತೆಲುಗು ಚಿತ್ರರಂಗದಲ್ಲೂ ಬ್ಯುಸಿಯಾಗುತ್ತಿದ್ದಾರೆ. ಚಿತ್ರೀಕರಣ ನಡುವೆ ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿಲ್ಲ, ಓದಿನಗಿಂತ ಸಿನಿಮಾ ಕಡೆಯೆ ಹೆಚ್ಚು ಗಮನ ಹರಿಸುವುದಾಗಿ ಪ್ರಿಯಾ ಹೇಳಿಕೊಂಡಿದ್ದರು. ಹಾಗಾಗಿ ಇನ್ಮುಂದೆ ಕಾಲೇಜಿಗೆ ಚಕ್ಕರ್ ಹಾಕಲಿದ್ದಾರೆ ಪ್ರಿಯಾ.

ಸದ್ಯ ಬಾಲಿವುಡ್ ಜೊತೆಗೆ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲು ಬ್ಯುಸಿಯಾಗುತ್ತಿದ್ದಾರೆ. ಒರು ಆಡಾರ್ ಲವ್ ಚಿತ್ರದ ನಂತರ ಪ್ರಿಯಾ ಅಭಿನಯದ ಸಿನಿಮಾಗಳು ಇನ್ನು ತೆರೆಗೆ ಬಂದಿಲ್ಲ. ಆದ್ರೆ ಪ್ರಿಯಾ ಬಳಿ ಮಾತ್ರ ಕೈತುಂಬ ಸಿನಿಮಾಗಳಿವೆ. ಸದ್ಯ ಬಾಲಿವುಡ್ ನ 'ಶ್ರೀದೇವಿ ಬಂಗಲೋ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

More from Filmibeat

English summary
Wink Sensation Malayali actress Priya Prakash Varrier and actress Rakul Preet Singh will romance on screen with Telugu actor Nithiin.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X