ಪ್ರಿಯಾ ವಾರಿಯರ್ ಕನ್ನಡದಲ್ಲಿ ನೋಡಿರೋದು ಒಂದೇ ಸಿನಿಮಾ, ಯಾವುದದು?
ನಟಿ ಪ್ರಿಯಾ ವಾರಿಯರ್ ಈಗಾಗಲೇ ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತ. ಎಷ್ಟೋ ಹುಡುಗರು ಆಕೆಯ ಕಣ್ಣಿನ ಸನ್ನೆ ನೋಡಿ ಎಷ್ಟೋ ದಿನ ಅದೇ ಗುಂಗಿನಲ್ಲಿ ಇದ್ದರು.
ನ್ಯಾಷಿನಲ್ ಕ್ರಶ್ ಎಂದೇ ಖ್ಯಾತಿ ಗಳಿಸಿರುವ ಪ್ರಿಯಾ ವಾರಿಯರ್ ನಿನ್ನೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಮಾಧ್ಯಮದ ಎಲ್ಲ ಪ್ರಶ್ನೆಗಳಿಗೆ ನಗುತ್ತ ಉತ್ತರ ನೀಡಿದರು.
'ನೀವು ಕನ್ನಡದ ಸಿನಿಮಾಗಳನ್ನು ನೋಡುತ್ತೀರಾ?' ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು ''ನಾನು ಈಗಷ್ಟೇ ಕನ್ನಡ ಚಿತ್ರಗಳನ್ನು ನೋಡಲು ಪ್ರಾರಂಭ ಮಾಡಿದ್ದೀನಿ. ಇತ್ತೀಚಿಗೆ 'ಕೆಜಿಎಫ್' ಸಿನಿಮಾವನ್ನು ನೋಡಿದ್ದೀನಿ'' ಎಂದರು.

ಪ್ರಿಯಾ ಕನ್ನಡದಲ್ಲಿಯೇ 'ಕೆಜಿಎಫ್' ಸಿನಿಮಾವನ್ನ ನೋಡಿದರಂತೆ. ಸಿನಿಮಾವನ್ನು ಮೆಚ್ಚಿಕೊಂಡಿರುವ ಅವರು ಒಂದು ಡೈಲಾಗ್ ಕೂಡ ಹೇಳಿದರು. ಈ ಸಿನಿಮಾದ ಮೂಲಕ ಕನ್ನಡ ಚಿತ್ರಗಳನ್ನು ನೋಡಲು ಪ್ರಾರಂಭ ಮಾಡಿದ್ದಾರಂತೆ ಪ್ರಿಯಾ.
ಪ್ರಿಯಾ ನಟನೆಯ ಮೊದಲ ಸಿನಿಮಾ 'ಓರು ಅಡಾರ್ ಲವ್' ಸಿನಿಮಾದ ಆಡಿಯೋ ಬಿಡುಗಡೆ ನಿನ್ನೆ ಬೆಂಗಳೂರಿನಲ್ಲಿ ನಡೆದಿದೆ. ಕನ್ನಡದಲ್ಲಿ ಸಹ ಆ ಸಿನಿಮಾ ಡಬ್ ಆಗುತ್ತಿದ್ದು, ಫೆಬ್ರವರಿ 14 ರಂದು ಚಿತ್ರ ಬಿಡುಗಡೆಯಾಗುತ್ತಿದೆ.


Click it and Unblock the Notifications











