ಪ್ರಿಯಾಗೆ ಕನ್ನಡದ ಯಾವ ನಟನೊಂದಿಗೆ ಸಿನಿಮಾ ಮಾಡೋಕೆ ಇಷ್ಟ
ನಟಿ ಪ್ರಿಯಾ ವಾರಿಯರ್ ಬೆಂಗಳೂರಿಗೆ ನಿನ್ನೆ ಆಗಮಿಸಿದ್ದರು. ಕೂಲ್ ಸಿಟಿ ಕಂಡ ಪ್ರಿಯಾ ಬೆಂಗಳೂರು, ಕನ್ನಡ ಸಿನಿಮಾರಂಗ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದರು.
ಈ ವೇಳೆ ಕನ್ನಡದ ಯಾವ ನಟರ ಜೊತೆಗೆ ಸಿನಿಮಾ ಮಾಡುವ ಆಸೆ ಇದೆ? ಎಂಬ ಪ್ರಶ್ನೆಗೆ ಪ್ರಿಯಾ ಜಾಣ್ಮೆಯ ಉತ್ತರ ನೀಡಿದ್ದಾರೆ. ''ನನಗೆ ಎಲ್ಲ ನಟರ ಜೊತೆಗೆ ಸಿನಿಮಾ ಮಾಡಲು ಇಷ್ಟ. ಹೀಗಾಗಿ, ನಾನು ಒಬ್ಬ ನಟರ ಹೆಸರನ್ನು ತೆಗೆದುಕೊಂಡು, ಇನ್ನೊಬ್ಬ ನಟರ ಜೊತೆಗೆ ಬರುವ ಸಿನಿಮಾವನ್ನು ಕಳೆದುಕೊಳ್ಳಲು ಬಯಸುವುದಿಲ್ಲ'' ಎಂಬ ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯದ ವರೆಗೆ ಯಾವುದೇ ಕನ್ನಡ ಚಿತ್ರಗಳ ಅವಕಾಶ ನನಗೆ ಬಂದಿಲ್ಲ, ಮುಂದೆ ಒಳ್ಳೆಯ ಅವಕಾಶ ಸಿಕ್ಕರೆ ಕನ್ನಡ ಚಿತ್ರರಂಗಕ್ಕೆ ಬರುತ್ತೇನೆ ಎಂದಿದ್ದಾರೆ ಪ್ರಿಯಾ.

ಪ್ರಿಯಾ ಇತ್ತೀಚಿಗಷ್ಟೆ 'ಕೆಜಿಎಫ್' ಸಿನಿಮಾವನ್ನು ನೋಡಿ ಬಹಳ ಮೆಚ್ಚಿಕೊಂಡಿದ್ದಾರೆ. ಪ್ರಿಯಾ ಮೊದಲ ಸಿನಿಮಾ 'ಓರು ಅಡಾರ್ ಲವ್' ಚಿತ್ರ ಕನ್ನಡಕ್ಕೆ ಡಬ್ ಆಗಿದ್ದು, ಫೆಬ್ರವರಿ 14 ರಂದು ಬಿಡುಗಡೆಯಾಗುತ್ತಿದೆ.
English summary
Actress Priya Varrier liked ready to do kannada movies.


Click it and Unblock the Notifications