For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ಸ್ಟಾರ್ ಜೊತೆ ನಟಿಸೋ ಆಫರ್ ಪಡೆದ ಪ್ರಿಯಾ ವಾರಿಯರ್

  |

  ಮಲೆಯಾಳಂ ಬ್ಯೂಟಿ ಪ್ರಿಯಾ ವಾರಿಯರ್ ಇಡೀ ಇಂಡಿಯಾ ತುಂಬ ಫೇಮಸ್ ಆಗಿ ಬಿಟ್ಟರು. ಸಿಕ್ಕಾಪಟ್ಟೆ ಫ್ಯಾನ್ಸ್ ಪಡೆದ ಪ್ರಿಯಾಗೆ ಬಾಲಿವುಡ್ ನಲ್ಲಿ ಸಿನಿಮಾ ಮಾಡುವ ಅವಕಾಶ ಸಿಕ್ಕಿತ್ತು. ಅದರ ಬಳಿಕ ಈಗ ಪ್ರಿಯಾ ಪಾಲಿಗೆ ಮತ್ತೊಂದು ಆಫರ್ ಸಿಕ್ಕಿದೆ.

  ಈಗ ಪ್ರಿಯಾಗೆ ಟಾಲಿವುಡ್ ನಲ್ಲಿ ಒಂದು ದೊಡ್ಡ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ನಟ ನಿತಿನ್ ನಟನೆಯ ಹೊಸ ಸಿನಿಮಾ ಇಂದು ಲಾಂಚ್ ಆಗಿದೆ. ಈ ಸಿನಿಮಾದಲ್ಲಿ ಪ್ರಿಯಾ ವಾರಿಯರ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

  ಪ್ರಿಯಾಗೆ ಕನ್ನಡದ ಯಾವ ನಟನೊಂದಿಗೆ ಸಿನಿಮಾ ಮಾಡೋಕೆ ಇಷ್ಟ

  ನಿತಿನ್ ನಟನೆಯ 28 ಸಿನಿಮಾ ಇದಾಗಿದೆ. ರಕುಲ್ ಪ್ರೀತ್ ಸಿಂಗ್ ಚಿತ್ರದ ನಾಯಕಿಯಾಗಿದ್ದಾರೆ. ಮೊದಲ ಬಾರಿಗೆ ನಿತಿನ್ ಜೊತೆಗೆ ರಕುಲ್ ಪ್ರೀತ್ ಸಿಂಗ್ ನಟಿಸುತ್ತಿದ್ದಾರೆ. ಸಿನಿಮಾದ ಮತ್ತೊಬ್ಬ ನಾಯಕಿಯಾಗಿ ಪ್ರಿಯಾ ವಾರಿಯರ್ ಕಾಣಿಸಿಕೊಳ್ಳುತ್ತಿದ್ದಾರೆ.

  ಚಂದ್ರಶೇಖರ್ ಯೆಲೆಟಿ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಭವ್ಯ ಹಾಗೂ ಪ್ರಸಾದ್ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಎಂ ಎಂ ಕೀರವಾನಿ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

  English summary
  Actress Priya Varrier selected to play lead role in tollywood actor Nithin's new movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X