ಅಂತೂ ಕನ್ನಡಕ್ಕೆ ಬಂದೇ ಬಿಟ್ಟಳು ಕಣ್ಸನ್ನೆಯ ಸುಂದರಿ ಪ್ರಿಯಾ ವಾರಿಯರ್

ಈಗಾಗಲೆ ಎಲ್ಲರಿಗೂ ಗೊತ್ತಿರುವ ಹಾಗೆ ಕಣ್ಸನ್ನೆಯ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಮಿಂಚಿದ್ದ ಪ್ರಿಯಾ ಪ್ರಕಾಶ್ ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒರು ಆಧಾರ್ ಲವ್ ಚಿತ್ರದ ಒಂದು ದೃಶ್ಯದ ಮೂಲಕವೆ ಯುವಕರ ಹಾರ್ಟ್ ಗೆ ಲಗ್ಗೆ ಇಟ್ಟಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಕನ್ನಡ ಪ್ರೇಕ್ಷಕರ ಮನಕದಿಯಲು ಸಜ್ಜಾಗಿದ್ದಾರೆ.

ಪ್ರಿಯಾ ಸ್ಯಾಂಡಲ್ ವುಡ್ ಎಂಟ್ರಿ ಕೊಡ್ತಾರೆ ಎಂದು ಅನೇಕ ದಿನಗಳಿಂದ ಹೇಳಲಾಗುತ್ತಿತ್ತು. ಆದ್ರೀಗ ಪಕ್ಕಾ ಆಗಿದೆ ಎನ್ನು ಮಾತು ಕೇಳಿ ಬರುತ್ತಿದೆ. ಖ್ಯಾತಿ ಗಳಿಸುತ್ತಿದ್ದಂತೆ ಮಲಯಾಳಿ ಸಿನಿಮಾ ಬಿಟ್ಟು ನಂತರ ಬಾಲಿವುಡ್ ಗೆ ಹಾರಿದ್ದರು ಪ್ರಿಯಾ. ಬಾಲಿವುಡ್ ನಲ್ಲಿ ಈಗಾಗಲೆ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಬಾಲಿವುಡ್ ನಿಂದ ಮತ್ತೆ ಈಗ ಸೌತ್ ಸಿನಿಮಾ ಕಡೆ ಮುಖ ಮಾಡಿರುವ ಪ್ರಿಯಾ ತೆಲುಗು, ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಅಂದ್ಹಾಗೆ ಪ್ರಿಯಾ ಸ್ಯಾಂಡಲ್ ವುಡ್ ಗೆ ಸಿನಿಮಾ ಹೇಗಿರಲಿದೆ? ಮುಂದೆ ಓದಿ..

ರಘು ಕೋವಿ ಸಿನಿಮಾದಲ್ಲಿ ಪ್ರಿಯಾ

ರಘು ಕೋವಿ ಸಿನಿಮಾದಲ್ಲಿ ಪ್ರಿಯಾ

ಸ್ಯಾಂಡಲ್ ವಡ್ ನಲ್ಲಿ ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದ ರಘು ಕೋವಿ ಈಗ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಇನ್ನು ಹೆಸರಿಡದ ಚಿತ್ರದಲ್ಲಿ ಪ್ರಿಯಾ ವಾರಿಯರ್ ನಾಯಕಿಯಾಗಿ ಮಿಂಚುತ್ತಿದ್ದಾರೆ. ಈಗಾಗಲೆ ಕೇರಳಕ್ಕೆ ಹೋಗಿ ಪ್ರಿಯಾ ಜೊತೆ ಮಾತುಕತೆ ನಡೆಸಿದ್ದರು ರಘು ಮತ್ತು ತಂಡ. ಆದ್ರೆ ಆಗಿನ್ನು ಪ್ರಿಯಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಸದ್ಯ ಪ್ರಿಯಾ ಕನ್ನಡದಲ್ಲಿ ಅಭಿನಯಿಸುವುದು ಪಕ್ಕಾ ಆಗಿದೆಯಂತೆ.

ಪ್ರಿಯಾಗೆ ಸೂರಜ್ ಕುಮಾರ್ ನಾಯಕ

ಪ್ರಿಯಾಗೆ ಸೂರಜ್ ಕುಮಾರ್ ನಾಯಕ

ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ ನಿರ್ಮಾಪಕ ಶ್ರೀನಿವಾಸ್ ಅವರ ಪುತ್ರ ಸೂರಜ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಸೂರಜ್ ಮೊದಲ ಬಾರಿಗೆ ಬಣ್ಣದ ಲೋಕ್ಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೆ ಚಿತ್ರಕ್ಕಾಗಿ ಸಾಹಸ ಮತ್ತು ನೃತ್ಯವನ್ನು ಕಲಿತುಕೊಳ್ಳುವ ಮೂಲಕ ಸಾಕಷ್ಟು ತಯಾರಿಗಗಳನ್ನು ಮಾಡಿಕೊಂಡಿದ್ದಾರಂತೆ ಸೂರಜ್.

ವರಮಹಾಲಕ್ಷ್ಮಿಗೆ ಚಿತ್ರದ ಮುಹೂರ್ತ

ವರಮಹಾಲಕ್ಷ್ಮಿಗೆ ಚಿತ್ರದ ಮುಹೂರ್ತ

ವರಮಹಾಲಕ್ಷ್ಮಿ ಹಬ್ಬಕ್ಕೆ ಅಂದರೆ ಮುಂದಿನ ತಿಂಗಳು ಆಗಸ್ಟ್ 9ಕ್ಕೆ ಸೂರಜ್ ಕುಮಾರ್ ಮತ್ತು ಪ್ರಿಯಾ ವಾರಿಯರ್ ಸಿನಿಮಾದ ಮುಹೂರ್ತ ನಡೆಯಲಿದೆ. ಚಿತ್ರವನ್ನು ಅದ್ಧೂರಿಯಾಗಿ ಲಾಂಚ್ ಮಾಡಲು ಪ್ಲಾನ್ ಮಾಡುತ್ತಿದೆ ಚಿತ್ರತಂಡ. ಎಲ್ಲವು ಅಂದುಕೊಂಡಂತೆ ಆದ್ರೆ ಸ್ಯಾಂಡಲ್ ವುಡ್ ಟಾಪ್ ನಟರನ್ನು ಕರೆಸಿ ಸಿನಿಮಾ ಮುಹೂರ್ತ ಮಾಡಲಿದೆಯಂತೆ ಚಿತ್ರಂತಂಡ.

ಪ್ರಿಯಾ ಬಳಿ ಇವೆ ಕೈ ತುಂಬ ಸಿನಿಮಾ

ಪ್ರಿಯಾ ಬಳಿ ಇವೆ ಕೈ ತುಂಬ ಸಿನಿಮಾ

ಪ್ರಿಯಾ ಪ್ರಕಾಶ್ ವಾರಿಯರ್ ಬಳಿ ಸಾಕಷ್ಟು ಸಿನಿಮಾಗಳಿವೆ. ಬಾಲಿವುಡ್ ನಲ್ಲಿ 'ಶ್ರೀದೇವಿ ಬಂಗ್ಲೋ' ರಿಲೀಸ್ ಗೆ ರೆಡಿಯಾಗಿದೆ. ಬಾಲಿವುಡ್ ನ ಚೊಚ್ಚಲ ಸಿನಿಮಾ ರಿಲೀಸ್ ಆಗುವ ಮೊದಲೆ, ಬಾಲಿವುಡ್ ನ ಮತ್ತೊಂದು ಸಿನಿಮಾ 'ಲವ್ ಹ್ಯಾಕರ್ಸ್' ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇದರ ಜೊತೆಗೀಗ ತೆಲುಗಿನ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ನಟ ನಿತಿನ್ ಜೊತೆ ನಾಯಕಿಯಾಗಿ ಪ್ರಿಯಾ ಅಭಿನಯಿಸುತ್ತಿದ್ದಾರೆ.

More from Filmibeat

English summary
Malayalam wink beauty priya prakash varrier to make her Kannada debut with new actor Suraj Kumar. This film is directed by Raghu Kovi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X