For Quick Alerts
  ALLOW NOTIFICATIONS  
  For Daily Alerts

  ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ವೇಳೆ ಕ್ರಿಕೆಟಿಗನ ಕೆನ್ನೆಗೆ ಬಾರಿಸಿದ್ದರೇ ನಟಿ ಪ್ರಿಯಾಮಣಿ?

  |

  ಬಹುಭಾಷಾ ತಾರೆ ಪ್ರಿಯಾಮಣಿ ಸಾಮಾನ್ಯವಾಗಿ ಗಾಸಿಪ್, ಗದ್ದಲ, ವಿವಾದಗಳಿಂದ ದೂರ. ಹಾಗೆಂದು ಅವರ ಸುತ್ತಲೂ ರೂಮರ್‌ಗಳು ಇಲ್ಲವೆಂದಲ್ಲ. ಎಲ್ಲ ನಟಿಯರನ್ನೂ ಈ ಗಾಸಿಪ್ ಭೂತ ಬೆಂಬಿಡದೆ ಇರಲಾರದು. ಸಿನಿಮಾ ಜಗತ್ತಿನ ತಾರೆಯರೆಲ್ಲರೂ ಸೇರಿ, ಕೆಲವು ವೃತ್ತಿಪರ ಕ್ರಿಕೆಟಿಗರೊಂದಿಗೆ ತಂಡ ಕಟ್ಟಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆಸುತ್ತಿದ್ದರು. ಇದು ಬಹಳ ಜನಪ್ರಿಯತೆ ಪಡೆದಿತ್ತು. ಈ ಸಂದರ್ಭದಲ್ಲಿ ಪ್ರಿಯಾಮಣಿ ವಿಚಾರದಲ್ಲಿ ಗಾಸಿಪ್ ಒಂದು ಹರಿದಾಡಿತ್ತು.

  ಸಿಸಿಎಲ್ ಸಂದರ್ಭದಲ್ಲಿ ನಟಿ ಪ್ರಿಯಾಮಣಿ ಕ್ರಿಕೆಟಿಗರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದರು ಎನ್ನಲಾಗಿತ್ತು. ಸಿಸಿಎಲ್‌ಗೆ ಪ್ರಿಯಾಮಣಿ ಅಂಬಾಸೆಡರ್ ಆಗಿದ್ದರು. ಈ ವೇಳೆ ಕ್ರಿಕೆಟಿಗರೊಬ್ಬರು ಪ್ರಿಯಾಮಣಿ ಬಳಿ ಅನುಚಿತವಾಗಿ ವರ್ತಿಸಿದ್ದರು. ಇದರಿಂದ ಪ್ರಿಯಾಮಣಿ ಅವರಿಗೆ ಬಹಳ ಅವಮಾನವಾಗಿತ್ತು. ಕೋಪಗೊಂಡಿದ್ದ ಪ್ರಿಯಾಮಣಿ ಆ ಕ್ರಿಕೆಟಿಗನಿಗೆ ಕಪಾಳಮೋಕ್ಷ ಮಾಡಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರ ಬಗ್ಗೆ ಪ್ರಿಯಾಮಣಿ ಇತ್ತೀಚೆಗೆ ಸ್ಪಷ್ಟೀಕರಣ ನೀಡಿದ್ದಾರೆ. ಮುಂದೆ ಓದಿ...

  'ತಲೈವಿ' ಸಿನಿಮಾದಿಂದ ಪ್ರಿಯಾಮಣಿ ಔಟ್: ಶಶಿಕಲಾ ಪಾತ್ರಕ್ಕೆ ಬಂದ್ರು 'ಜೋಶ್' ನಟಿ 'ತಲೈವಿ' ಸಿನಿಮಾದಿಂದ ಪ್ರಿಯಾಮಣಿ ಔಟ್: ಶಶಿಕಲಾ ಪಾತ್ರಕ್ಕೆ ಬಂದ್ರು 'ಜೋಶ್' ನಟಿ

  ಕಹಿ ಘಟನೆ ನಡೆದಿದ್ದು ಹೌದು

  ಕಹಿ ಘಟನೆ ನಡೆದಿದ್ದು ಹೌದು

  ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸಂದರ್ಭದಲ್ಲಿ ಅಹಿತಕರ ಘಟನೆಯೊಂದು ನಡೆದಿದ್ದು ಸತ್ಯ ಎಂಬುದನ್ನು ಪ್ರಿಯಾಮಣಿ ಒಪ್ಪಿಕೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಂತೆ ಅದು ಅಸಭ್ಯ ವರ್ತನೆಯ ಕೃತ್ಯವಾಗಿರಲಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

  ಫೋನ್ ಕದ್ದು ಪ್ರಾಂಕ್ ಮಾಡುತ್ತಿದ್ದರು

  ಫೋನ್ ಕದ್ದು ಪ್ರಾಂಕ್ ಮಾಡುತ್ತಿದ್ದರು

  'ಯಾರೋ ಒಬ್ಬರು ನನ್ನ ಮೊಬೈಲ್ ಫೋನ್ ಕದ್ದು ಪ್ರಾಂಕ್ ಮಾಡುತ್ತಿದ್ದರು. ಅನೇಕ ರೀತಿಯಲ್ಲಿ ನನಗೆ ಹಿಂಸೆ ನೀಡಿದರು. ಅದು ನನ್ನ ಸಹೋದರನ ಫೋನ್. ನಾನು ಕೆಲವು ಸಮಯದಿಂದ ಅದನ್ನು ಬಳಸುತ್ತಿದ್ದೆ. ಹಾಗಾಗಿ ನನಗೆ ಫೋನ್ ಕಳೆದುಹೋದ ಸಂಕಟ ಹೆಚ್ಚಾಗಿತ್ತು. ನನಗೆ ಸಹಾಯ ಮಾಡುವಂತೆ ಹೋಟೆಲ್‌ನ ಎಲ್ಲ ಸಿಬ್ಬಂದಿಯನ್ನೂ ಕೇಳಿಕೊಂಡಿದ್ದೆ' ಎಂದು ತಿಳಿಸಿದ್ದಾರೆ.

  ಅಜಯ್ ದೇವಗನ್ ಚಿತ್ರಕ್ಕೆ ನಾಯಕಿಯಾದ ಪ್ರಿಯಾಮಣಿ!ಅಜಯ್ ದೇವಗನ್ ಚಿತ್ರಕ್ಕೆ ನಾಯಕಿಯಾದ ಪ್ರಿಯಾಮಣಿ!

  ತಾನಾಗಿಯೇ ಬಂದು ವಾಪಸ್ ಕೊಟ್ಟ

  ತಾನಾಗಿಯೇ ಬಂದು ವಾಪಸ್ ಕೊಟ್ಟ

  'ಕೊನೆಯಲ್ಲಿ ನನ್ನ ಜತೆ ಪ್ರಾಂಕ್ ಆಟವಾಡಿದ ವ್ಯಕ್ತಿ ನಾನಿದ್ದ ಹೋಟೆಲ್‌ಗೆ ತಾನೇ ಬಂದು, ತನ್ನ ಬಳಿ ಫೋನ್ ಇರುವುದಾಗಿ ಹೇಳಿ ಹಿಂದಿರುಗಿಸಿದ್ದರು. ಈ ರೀತಿ ಮಾಡಬೇಡಿ. ಇದು ಸರಿಯಾದ ವರ್ತನೆಯಲ್ಲ ಎಂದು ನಾನು ಸ್ವಲ್ಪ ಖಾರವಾಗಿಯೇ ಅವರಿಗೆ ಹೇಳಿದ್ದೆ' ಎಂದು ಪ್ರಿಯಾಮಣಿ ಹೇಳಿದ್ದಾರೆ.

  ಆ ಕ್ರಿಕೆಟಿಗ ಯಾರು?

  ಆ ಕ್ರಿಕೆಟಿಗ ಯಾರು?

  ಆ ಘಟನೆ ಒಂದು ಕಹಿ ಅನುಭವ. ಆದರೆ ಬೇರೆ ರೀತಿ ನಡೆದಿರಲಿಲ್ಲ. ನಾನು ಆತನಿಗೆ ಹೊಡೆದಿದ್ದೆ ಎಂಬ ಸುದ್ದಿ ಕೂಡ ಸತ್ಯವಲ್ಲ ಎಂದು ಹೇಳಿದ್ದಾರೆ. ಆ ವ್ಯಕ್ತಿ ಯಾರು? ಎಂಬ ಪ್ರಶ್ನೆಗೆ ಉತ್ತರ ನೀಡಲು ಅವರು ನಿರಾಕರಿಸಿದ್ದಾರೆ.

  ಬಾಲಿವುಡ್ ನಟ ಸಚಿನ್ ಜೋಷಿ

  ಬಾಲಿವುಡ್ ನಟ ಸಚಿನ್ ಜೋಷಿ

  2012ರಲ್ಲಿ ಹೈದರಾಬಾದ್‌ನಲ್ಲಿ ಮುಂಬೈ ಮತ್ತು ತೆಲುಗು ಚಿತ್ರತಂಡಗಳ ನಡುವೆ ಪಂದ್ಯ ನಡೆಯುವಾಗ ಮುಂಬೈ ಕ್ರಿಕೆಟ್ ತಂಡದಲ್ಲಿದ್ದ ಬಾಲಿವುಡ್ ನಟ ಸಚಿನ್ ಜೋಷಿ, ಪ್ರಿಯಾಮಣಿ ಅವರಿಗೆ ಮುತ್ತಿನ ಮಳೆಗರೆದಿದ್ದರು ಎಂದು ಹೇಳಲಾಗಿತ್ತು. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಪ್ರಿಯಾಮಣಿ, ನಂತರ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದರು.

  ಪ್ರಿಯಾಮಣಿ ಸಿನಿಮಾಗಳು

  ಪ್ರಿಯಾಮಣಿ ಸಿನಿಮಾಗಳು

  ಮದುವೆಯಾದ ಬಳಿಕ ಪ್ರಿಯಾಮಣಿ ಚಿತ್ರರಂಗದಿಂದ ದೂರ ಉಳಿಯುತ್ತಾರೆ ಎನ್ನಲಾಗಿತ್ತು. ಆದರೆ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವಿವಿಧ ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದ ಅವರು, ರಾಣಾ ದಗ್ಗುಬಾಟಿ, ಸಾಯಿ ಪಲ್ಲವಿ ಅಭಿನಯದ 'ವಿರಾಟ ಪರ್ವಂ 1992' ಚಿತ್ರದಲ್ಲಿ ನಕ್ಸಲೈಟ್ ಆಗಿ ನಟಿಸುತ್ತಿದ್ದಾರೆ. ಜತೆಗೆ ವೆಂಕಟೇಶ್ ಅವರ 'ನಾರಪ್ಪ', 'ಸಿರಿವೆನೆಲ್ಲಾ', 'ಡಾ. 56' ಮತ್ತು ಅಜಯ್ ದೇವಗನ್ ಅವರ 'ಮೈದಾನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Actress Priyamani has clarifies on rumours of slapping a cricketer during celebrity cricket league (CCL).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X