»   » ದನ ಕಾಯೋನ್ಹಿಂದೆ ಹೊರಟ ನಟಿ ಪ್ರಿಯಾಮಣಿ

ದನ ಕಾಯೋನ್ಹಿಂದೆ ಹೊರಟ ನಟಿ ಪ್ರಿಯಾಮಣಿ

Posted By:
Subscribe to Filmibeat Kannada

'ಅಂಬರೀಶ' ಚಿತ್ರದ ನಂತ್ರ ನಟಿ ಪ್ರಿಯಾಮಣಿ ಹೊಸ ಕನ್ನಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರವೇ 'ದನ ಕಾಯೋನು'.

ದುನಿಯಾ ವಿಜಯ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ಚಿತ್ರಕ್ಕೆ 'ದನ ಕಾಯೋನು' ಅಂತ ಶೀರ್ಷಿಕೆ ಇಡಲಾಗಿದೆ. ಹೀಗಂತ ನಿನ್ನೆಯಷ್ಟೇ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿತ್ತು. [ದನ ಕಾಯುವತ್ತ ನಟ ದುನಿಯಾ ವಿಜಯ್ ಚಿತ್ತ]

Priyamani to pair opposite Duniya Vijay in 'Dana Kayonu'

ಅದರಂತೆ 'ದನ ಕಾಯೋನು' ಚಿತ್ರದ ಮುಹೂರ್ತ ಇಂದು ಬೆಳ್ಳಗ್ಗೆ ರಾಜಾಜಿನಗರದ ಮುನೇಶ್ವರ ದೇವಸ್ಥಾನದಲ್ಲಿ ನೆರವೇರಿದೆ. ಮೊದಲ ಶಾಟ್ ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿದ್ರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಯಾಮರಾ ಚಾಲನೆ ಮಾಡಿದರು. [ಇದೇ ಮೊದಲ ಬಾರಿಗೆ 'ಕರಿಚಿರತೆ'ಗೆ ಭಟ್ ಆಕ್ಷನ್ ಕಟ್]

Priyamani to pair opposite Duniya Vijay in 'Dana Kayonu'

ದನ ಕಾಯೋನಾಗಿ ದುನಿಯಾ ವಿಜಿ ಪಕ್ಕಾ ಲೋಕಲ್ ಹುಡುಗನ ಗೆಟಪ್ ನಲ್ಲಿ ಪೋಸ್ ಕೊಟ್ಟಿದ್ದಾರೆ. ಇಂತಿಪ್ಪ ವಿಜಿಗೆ ನಾಯಕಿಯಾಗಿ ಪ್ರಿಯಾಮಣಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ದುನಿಯಾ ವಿಜಿಗೆ ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ಅದ್ರಲ್ಲೂ 'ದನ ಕಾಯೋನು' ಅಂತ ಟೈಟಲ್ ಇಟ್ಟಿರುವುದರಿಂದ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಎಲ್ಲದಕ್ಕೂ 'ಸಸ್ಪೆನ್ಸ್' ಅಂತಷ್ಟೇ ಭಟ್ರು ಹೇಳುತ್ತಿದ್ದಾರೆ.

Priyamani to pair opposite Duniya Vijay in 'Dana Kayonu'

'ದನ ಕಾಯೋನು' ಚಿತ್ರವನ್ನ ಆರ್.ಎಸ್.ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಇಂದು ಮುಹೂರ್ತ ಮುಗಿಸಿರುವ 'ದನ ಕಾಯೋನು' ಚಿತ್ರದ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ.

English summary
Kannada Actor Duniya Vijay starrer Yogaraj Bhat directorial new movie 'Dana Kayonu' was officially launched today (June 9th). For the First time, Actress Priyamani is sharing screen space with Duniya Vijay in this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada