»   » ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾಗೆ ನಾಯಕಿ ಸಿಕ್ಕಳು

ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾಗೆ ನಾಯಕಿ ಸಿಕ್ಕಳು

Posted By:
Subscribe to Filmibeat Kannada
ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾಗೆ ನಾಯಕಿ ಸಿಕ್ಕಳು | Filmibeat Kannada

ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾ ಕೆಲ ದಿನಗಳ ಹಿಂದೆಯಷ್ಟೇ ಸೆಟ್ಟೇರಿತ್ತು. ಅದೇ ರೀತಿ ಇದೀಗ ಈ ಚಿತ್ರತಂಡದಿಂದ ಹೊಸ ಸುದ್ದಿ ಒಂದಿದೆ. ಪುನೀತ್ ಅವರ ಈ ಸಿನಿಮಾಗೆ ಈಗ ನಾಯಕಿಯ ಆಯ್ಕೆ ಆಗಿದೆ.

ಪುನೀತ್ ಜೊತೆಗೆ ಕಾಣಿಸಿಕೊಳ್ಳುತ್ತಿರುವ ಆ ಬೆಡಗಿ ಪ್ರಿಯಾಂಕ ಜ್ವಾಲಕರ್. ಪ್ರಿಯಾಂಕ ಜ್ವಾಲಕರ್ ಮೂಲತಃ ಮಹಾರಾಷ್ಟ್ರದ ಅನಂತಪುರದ ಹುಡುಗಿ, ಸಾಫ್ಟ್ ವೇರ್ ಎಂಜಿನೀಯರ್ ಆಗಿರುವ ಪ್ರಿಯಾಂಕ ತೆಲುಗಿನಲ್ಲಿ ಈಗಾಗಲೇ ಒಂದು ಸಿನಿಮಾ ಮಾಡಿದ್ದಾರೆ. 'ಅರ್ಜುನ್ ರೆಡ್ಡಿ' ಖ್ಯಾತಿಯ ವಿಜಯ ದೇವರಕೊಂಡ ನಟನೆಯ 'ಟ್ಯಾಕ್ಸಿವಾಲಾ' ಸಿನಿಮಾದಲ್ಲಿ ಪ್ರಿಯಾಂಕಾ ಜ್ವಾಲಕರ್ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾದ ನಂತರ ಈಗ ಅಪ್ಪು ಜೊತೆ ನಟಿಸುವ ಅವಕಾಶವನ್ನು ಪ್ರಿಯಾಂಕ ಪಡೆದಿದ್ದಾರೆ.

ಪ್ರಿಯಾಂಕಾ ಜ್ವಾಲಕರ್ ಈ ಸಿನಿಮಾದ ಪಾತ್ರಕ್ಕೆ ಚೆನ್ನಾಗಿ ಸೂಟ್ ಆಗುವ ಕಾರಣದಿಂದ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆಯಂತೆ. ಪ್ರಿಯಾಂಕ ಕೂಡ ಖುಷಿಯಿಂದ ತಮಗೆ ಬಂದ ಈ ಅವಕಾಶವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಪ್ರಿಯಾಂಕ ಜ್ವಾಲಕರ್ ಕನ್ನಡಕ್ಕೆ ಕಾಲಿಟ್ಟಿದ್ದಾರೆ.

Priyanka Jawalkar is selected to play lead role in Puneeth Rajkumar new movie

ಮಾರ್ಚ್ 8 ರಿಂದ ಸಿನಿಮಾದ ಶೂಟಿಂಗ್ ಶುರು ಆಗಲಿದೆ. ಚಿತ್ರಕ್ಕೆ ಡಿ ಇಮ್ಮನ್ ಮ್ಯೂಸಿಕ್ ಮಾಡುತ್ತಿದ್ದಾರೆ. 'ರಣವಿಕ್ರಮ' ನಂತರ ಮತ್ತೆ ಪವನ್ ಒಡೆಯರ್ ಹಾಗೂ ಪುನೀತ್ ರಾಜ್ ಕುಮಾರ್ ಜೋಡಿ ಒಂದಾಗಿದ್ದು ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ರಾಕ್ ಲೈನ್ ವೆಂಕಟೇಶ್ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ.

English summary
Actress Priyanka Jawalkar is selected to play lead role in Puneeth Rajkumar new movie. The movie directed by pawan wodeyar and produced by rockline venkatesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada