'ಗಣಪ'ನ ನಾಯಕಿಗೆ ತಮಿಳಿನಿಂದ ಮತ್ತೊಂದು ಆಫರ್.!
ಕನ್ನಡದಲ್ಲಿ ಮಿಂಚಿದ್ದ ನಟಿ ಪ್ರಿಯಾಂಕಾ ತಿಮ್ಮೇಶ್ ಈಗ ತಮಿಳಿನಲ್ಲಿ ಹೆಚ್ಚು ಬ್ಯುಸಿಯಾಗ್ತಿದ್ದಾರೆ. ತಮಿಳಿನಲ್ಲಿ ಅಭಿನಯಿಸಿರುವ ಚೊಚ್ಚಲ ಸಿನಿಮಾ ಬಿಡುಗಡೆಗೂ ಮುಂಚೆಯೇ ಎರಡನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಪ್ರಿಯಾಂಕಾ ಅಭಿನಯದ ಮೊದಲ ತಮಿಳು ಸಿನಿಮಾ 'ಉತ್ತರವು ಮಹಾರಾಜ' ನವೆಂಬರ್ 26 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲೇ ಇನ್ನೊಂದು ಕಾಲಿವುಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ನಟಿಸಿದ್ದಾರೆ.
ಹೌದು, ಜಿಎನ್ ಆರ್ ಕುಮಾರವೇಲನ್ ನಿರ್ದೇಶನದ ಚಿತ್ರದಲ್ಲಿ ಪ್ರಿಯಾಂಕಾ ಅಭಿನಯಿಸಲಿದ್ದು, ಇಂದಿನಿಂದ ಚಿತ್ರೀಕರಣ ಕೂಡ ಆರಂಭಿಸಿದ್ದಾರೆ. ಈ ಮೂಲಕ ತಮಿಳು ಇಂಡಸ್ಟ್ರಿಯಲ್ಲಿ ಕನ್ನಡ ಹುಡುಗಿಗೆ ಆಫರ್ ಮೇಲೆ ಆಫರ್ ಬರ್ತಿದೆ.

ಅತ್ತ ತಮಿಳು ಮತ್ತು ತೆಲುಗು ಜೊತೆಯಲ್ಲಿ ಮಲಯಾಳಂನಲ್ಲೂ ಪ್ರಿಯಾಂಕಾ ನಟಿಸುತ್ತಿದ್ದಾರೆ. ಕನ್ನಡದಲ್ಲಿ 'ಭೀಮಸೇನ ನಳಮಹಾರಾಜ' ಹಾಗೂ ಪ್ರಜ್ವಲ್ ದೇವರಾಜ್ ಅಭಿನಯದ 'ಅರ್ಜುನ್ ಗೌಡ' ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ 'ಗಣಪ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಪಟಾಕಿ, ಅಕಿರಾ ಚಿತ್ರಗಳಲ್ಲಿ ನಟಿಸಿದ್ದರು.


Click it and Unblock the Notifications











