ನಟಿ ರಚಿತಾ ರಾಮ್ ಹೊಗಳಿದ ಪ್ರಿಯಾಂಕ ಉಪೇಂದ್ರ

Recommended Video

ರಚಿತಾ ಮೇಲೆ ಈ ಹಿಂದೆ ಬೇಸರ ಈಗ ಹೊಗಳಿಕೆ | FILMIBEAT Kannada

ಸಿನಿಮಾ ಎಂದ ಮೇಲೆ ವಿವಾದಗಳು ಆಗುತ್ತಾ ಇರುತ್ತದೆ. ಉಪೇಂದ್ರ ನಟನೆಯ, ಆರ್ ಚಂದ್ರು ನಿರ್ದೇಶನದ 'ಐ ಲವ್ ಯೂ' ಸಿನಿಮಾದ ವೇಳೆ ಕೂಡ ವಿವಾದ ಆಗಿತ್ತು. ಸಿನಿಮಾದ ನಾಯಕಿ ರಚಿತಾ ರಾಮ್ ಬಗ್ಗೆ ನಟಿ ಪ್ರಿಯಾಂಕ ಉಪೇಂದ್ರ ಬೇಸರ ವ್ಯಕ್ತ ಪಡಿಸಿದ್ದರು.

ಸಿನಿಮಾದ ಒಂದು ಗ್ಲಾಮರ್ ಹಾಡಿಗೆ ಸಂಬಂಧಪಟ್ಟ ಹಾಗೆ ರಚಿತಾ ರಾಮ್ ನೀಡಿದ್ದ ಹೇಳಿಕೆ ಪ್ರಿಯಾಂಕ ಉಪೇಂದ್ರರಿಗೆ ಸರಿ ಎನಿಸಿರಲಿಲ್ಲ. ಉಪೇಂದ್ರ ಬಗ್ಗೆ ರಚಿತಾ ರಾಮ್ ಹೇಳಿದ್ದ ಮಾತು ತಪ್ಪು ಎಂದು ಅವರು ತಿಳಿಸಿದ್ದರು. ಆ ನಂತರ ಪ್ರಿಯಾಂಕ ಉಪೇಂದ್ರ ಹಾಗೂ ರಚಿತಾ ರಾಮ್ ನಡುವೆ ಮುನಿಸು ಇದೆ ಎನ್ನುವ ಗುಸು ಗುಸು ಇತ್ತು.

ಅದೇನೆ ಮುನಿಸು ಇದ್ದರೂ ಅದನೆಲ್ಲ ಮರೆತು, ಇದೀಗ ರಚಿತಾ ರಾಮ್ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೊಗಳಿದ್ದಾರೆ. ತಮ್ಮ ಫೇಸ್ ಬುಕ್ ನಲ್ಲಿ ಅವರ ಬರೆದುಕೊಂಡಿದ್ದಾರೆ. ಅವರ ನಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

'ಆಯುಷ್ಮಾನ್ ಭವ' ಸಿನಿಮಾ ವೀಕ್ಷಿಸಿದ ಪ್ರಿಯಾಂಕಾ

'ಆಯುಷ್ಮಾನ್ ಭವ' ಸಿನಿಮಾ ವೀಕ್ಷಿಸಿದ ಪ್ರಿಯಾಂಕಾ

ಶಿವರಾಜ್ ಕುಮಾರ್ ಹಾಗೂ ರಚಿತಾ ರಾಮ್ ನಟನೆಯ 'ಆಯುಷ್ಮಾನ್ ಭವ' ಸಿನಿಮಾ ಕಳೆದ ವಾರ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ನಿನ್ನೆ (ನವೆಂಬರ್ 18) ಈ ಸಿನಿಮಾವನ್ನು ನಟಿ ಪ್ರಿಯಾಂಕ ಉಪೇಂದ್ರ ಜಿಟಿ ಮಾಲ್ ನಲ್ಲಿ ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ತಮ್ಮ ಸಂತಸವನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಚಿತಾ ರಾಮ್ ಹೊಗಳಿದ ಪ್ರಿಯಾಂಕ

ರಚಿತಾ ರಾಮ್ ಹೊಗಳಿದ ಪ್ರಿಯಾಂಕ

ಸಿನಿಮಾದ ಬಗ್ಗೆ ಬರೆದುಕೊಂಡ ಪ್ರಿಯಾಂಕ ಉಪೇಂದ್ರ, ಮೊದಲು ರಚಿತಾ ರಾಮ್ ರನ್ನು ಹೊಗಳಿದ್ದಾರೆ. ರಚಿತಾ ರಾಮ್ ಅದ್ಭುತ ನಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಶಿವರಾಜ್ ಕುಮಾರ್ ಎನರ್ಜಿಟಿಕ್ ಹಾಗೂ ಚಾರ್ಮಿಂಗ್ ಆಗಿ ನಟಿಸಿದ್ದಾರೆ. ಸಿನಿಮಾದ ಸಂಗೀತವನ್ನು ಚೆನ್ನಾಗಿದೆ. ಪಿ ವಾಸು ಫ್ಯಾಮಿಲಿ ಸಿನಿಮಾ ನೀಡಿದ್ದಾರೆ. ಸಿನಿಮಾ ನೋಡಿ ಖುಷಿ ಆಯ್ತು. ಎಂದು ಪ್ರಿಯಾಂಕ ಹೇಳಿದ್ದಾರೆ.

ರಚಿತಾ ಪಾತ್ರಕ್ಕೆ ಪ್ರಿಯಾಂಕ ಮೆಚ್ಚುಗೆ

ರಚಿತಾ ಪಾತ್ರಕ್ಕೆ ಪ್ರಿಯಾಂಕ ಮೆಚ್ಚುಗೆ

ರಚಿತಾ ರಾಮ್ ಸಿನಿಮಾದಲ್ಲಿ ಹುಚ್ಚಿಯ ಪಾತ್ರ ಮಾಡಿದ್ದರು. ಮೊದಲ ಬಾರಿಗೆ ಒಂದು ಸವಾಲಿನ ಪಾತ್ರವನ್ನು ತೆಗೆದುಕೊಂಡು, ಚೆನ್ನಾಗಿ ನಿಭಾಯಿಸಿದ್ದಾರೆ. ಅವರ ಪಾತ್ರದ ಲುಕ್, ನಟನೆ ಎಲ್ಲವೂ ಚೆನ್ನಾಗಿದೆ. ಅವರ ಲಕ್ಷ್ಮಿ ಪಾತ್ರಕ್ಕೆ ಎರಡು ರೀತಿಯ ಶೇಡ್ ಇದೆ. ಪ್ರೇಕ್ಷಕರ ಚಪ್ಪಾಳೆ ಪಡೆದ ರಚಿತಾಗೆ, ಇದೀಗ ಪ್ರಿಯಾಂಕ ಮೆಚ್ಚುಗೆ ಸಿಕ್ಕಿದೆ.

ಗುರುಕಿರಣ್ ಪತ್ನಿ ಆಯೋಜಿಸಿದ್ದ ಶೋ

ಗುರುಕಿರಣ್ ಪತ್ನಿ ಆಯೋಜಿಸಿದ್ದ ಶೋ

'ಆಯುಷ್ಮಾನ್ ಭವ' ಸಂಗೀತ ನಿರ್ದೇಶಕ ಗುರುಕಿರಣ್ ಅವರ ನೂರನೇ ಸಿನಿಮಾ. ಹೀಗಾಗಿ ಅವರ ಪತ್ನಿ ಪಲ್ಲವಿ ತಮ್ಮ ಸ್ನೇಹಿತೆಯರಿಗೆ ಸಿನಿಮಾ ಆಯೋಜನೆ ಮಾಡಿದ್ದರು. ಪ್ರಿಯಾಂಕ ಉಪೇಂದ್ರ ಸೇರಿದಂತೆ ಲೇಡಿ ಗ್ಯಾಂಗ್ ಸಿನಿಮಾವನ್ನು ಇಷ್ಟ ಪಟ್ಟರು. 'ಆಯುಷ್ಮಾನ್ ಭವ' ಸಂಗೀತದ ಬಗ್ಗೆ ಇರುವ ಸಿನಿಮಾ ಆಗಿರುವ ಕಾರಣ, ಗುರುಕಿರಣ್ ಸಂಗೀತಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ.

More from Filmibeat

English summary
Actress Priyanka Upendra appreciated Rachita Ram acting in Ayushman Bhava movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X