For Quick Alerts
ALLOW NOTIFICATIONS  
For Daily Alerts

  ಪ್ರಿಯಾಂಕಾ ಉಪೇಂದ್ರಗೆ ಕಾರ್ಯದಕ್ಷತೆ, ಸಾಮರ್ಥ್ಯ, ಧೈರ್ಯ ಇರಲಿಲ್ಲ ಎಂದ ಚೇತನ್.!

  |

  ಸ್ಯಾಂಡಲ್ ವುಡ್ ನಲ್ಲಿ #ಮೀಟೂ ಫೈಟ್ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಶುರುವಾದ #ಮೀಟೂ ಅಭಿಯಾನ ಸದ್ಯ ಕೋರ್ಟ್ ಮೆಟ್ಟಿಲೇರಿದೆ.

  ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಆರೋಪ ಮಾಡಿದ್ದರು. ಮಾನ ಹಾನಿ ಆಗಿದೆ ಎಂದು ನಟ ಅರ್ಜುನ್ ಸರ್ಜಾ, ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಹೀಗಿರುವಾಗಲೇ, ಚೇತನ್ ಹುಟ್ಟುಹಾಕಿದ 'ಫೈರ್' ಸಂಸ್ಥೆಯಿಂದ ಪ್ರಿಯಾಂಕಾ ಉಪೇಂದ್ರ, ರೇಖಾ ರಾಣಿ, ವೀಣಾ ಸುಂದರ್ ಸೇರಿದಂತೆ ಹಲವರು ಹೊರಗೆ ಬಂದಿದ್ದಾರೆ.

  ''ರಾಜೀನಾಮೆ ಕೊಡಲು Ideological differences ಕಾರಣ'' ಅಂತ ಪ್ರಿಯಾಂಕಾ ಉಪೇಂದ್ರ ಹೇಳಿಕೆ ಕೊಟ್ಟಿದ್ದರು. ಆದ್ರೆ, ನಟ ಚೇತನ್ ಹೇಳಿರುವುದೇ ಬೇರೆ.!

  ''ಹಿಂದಿನ ಅಧ್ಯಕ್ಷರಿಗೆ (ಪ್ರಿಯಾಂಕಾ ಉಪೇಂದ್ರ) ಕಾರ್ಯದಕ್ಷತೆ, ಸಾಮರ್ಥ್ಯ, ಒಳಗೊಳ್ಳುವಿಕೆ, ಜವಾಬ್ದಾರಿಯುತವಾಗಿ 'ಫೈರ್' ಅನ್ನು ಮುನ್ನಡೆಸುವ ಧೈರ್ಯ ಇರಲಿಲ್ಲ'' ಎಂದು ಚೇತನ್ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿರಿ..

  ಕರ್ನಾಟಕ ಬಿಟ್ಟು ಹೋಗಲ್ಲ.!

  ''ಕರ್ನಾಟಕ ನನ್ನ ಮನೆ; ನಾನು ಬದುಕಲು, ಸೇವೆ ಮಾಡಲು ಆಯ್ಕೆ ಮಾಡಿಕೊಂಡಿರುವ ಈ ಬೀಡು ನನ್ನ ಪ್ರೀತಿಯ ನೆಲ. ಕೆಲವು ಮಾಧ್ಯಮಗಳು ನಾನು ಶೀಘ್ರದಲ್ಲೇ ಯು.ಎಸ್ ಗೆ ಹೋಗುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಇದು ಅತಿರೇಕದ ವಿಷಯ. ನಾನು ಯು.ಎಸ್ ಗೆ ಹೋಗುತ್ತಿಲ್ಲ ಮತ್ತು ನಾನು ನಾಲ್ಕು ವರ್ಷಗಳಿಂದ ಅಲ್ಲಿಗೆ ಹೋಗಿಲ್ಲ'' - ನಟ ಚೇತನ್

  ಶ್ರುತಿ ಹರಿಹರನ್ ವಿವಾದ: 'ಫೈರ್' ಸಂಸ್ಥೆಗೆ ಗುಡ್ ಬೈ ಹೇಳಿದ ಪ್ರಿಯಾಂಕಾ ಮತ್ತು ತಂಡ.!

  ನಮ್ಮ ಮಿತಿಯೊಳಗೆ ಬರಲ್ಲ.!

  ''ಶೃತಿ ಹರಿಹರನ್ ಲೈಂಗಿಕ ಕಿರುಕುಳ ಪ್ರಕರಣದ ವಿಷಯದಲ್ಲಿ ಶೃತಿರವರು FIRE ನ ಆಂತರಿಕ ದೂರು ಸಮಿತಿಯಲ್ಲಿ ದೂರು ದಾಖಲಿಸಿಲ್ಲ. ಮೂರು ತಿಂಗಳ ಒಳಗೆ ನಡೆದ ಲೈಂಗಿಕ ಕಿರುಕುಳದ ಪ್ರಕರಣಗಳನ್ನಷ್ಟೆ ಕಾನೂನಿನ ಪ್ರಕಾರ ಆಂತರಿಕ ದೂರು ಸಮಿತಿಯು ತನಿಖೆ ನಡೆಸಲು ಸಾಧ್ಯ. ಇದು ನಮ್ಮ ಆಂತರಿಕ ದೂರು ಸಮಿತಿಯ ಮಿತಿ. ಎರಡು ವರ್ಷಗಳ ಹಿಂದೆ ಈ ಘಟನೆ ನಡೆದಿರುವುದರಿಂದಾಗಿ ಇದು ನಮ್ಮ ಮಿತಿಯೊಳಗೆ ಬರುವುದಿಲ್ಲ'' - ನಟ ಚೇತನ್

  ಅಂದು ನಾಲಿಗೆ ಸತ್ತಿತ್ತಾ.? #ಮೀಟೂ 'ನಟಿ'ಯರಿಗೆ ರೇಖಾ ರಾಣಿ ಖಡಕ್ ಪ್ರಶ್ನೆ.!

  ಶ್ರುತಿ FIRE ನ ಸದಸ್ಯೆ

  ''ಆದ್ದರಿಂದ, FIRE #ಮೀಟೂ ಚಳುವಳಿಗೆ ಬೆಂಬಲವನ್ನು ಒದಗಿಸಿದೆ, ಶೃತಿ ರವರ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತೇವೆ ಎಂದಿಲ್ಲ. ಶೃತಿ FIRE ಮತ್ತು ಆಂತರಿಕ ದೂರು ಸಮಿತಿಯ ಸದಸ್ಯರಾಗಿದ್ದಾರೆ'' - ನಟ ಚೇತನ್

  ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!

  ನಾನು ಅಧ್ಯಕ್ಷ ಆಗಲಿಲ್ಲ.!

  ''FIRE ನ ಪ್ರಮುಖ ಸ್ಥಾನಗಳಲ್ಲಿದ್ದ ಕೆಲವು ಸದಸ್ಯರು ಸಂಸ್ಥೆಯನ್ನು ತೊರೆದಿದ್ದಾರೆ. ಅವರಿಗೆ ಸರಿಯಾಗಿ ಕಾಣುವ ಯಾವುದೇ ಕಾರಣಕ್ಕಾದರೂ ಅವರು ಸಂಸ್ಥೆಯನ್ನು ತೊರೆಯಲು ಮುಕ್ತರಾಗಿದ್ದಾರೆ. FIRE ಸಂಸ್ಥಾಪಕನಾಗಿ ಮಹಿಳೆಯರು ಯಾವಾಗಲೂ ಶಕ್ತಿಯುತ ಸ್ಥಾನದಲ್ಲಿರಬೇಕು ಎಂದು ನಾನು ನಂಬಿದ್ದೇನೆ. ಹಾಗಾಗಿ ನಮ್ಮ ಸಂಸ್ಥೆಗೆ ಮಹಿಳೆಯೆ ಅಧ್ಯಕ್ಷರಾಗಬೇಕೆಂಬ ನಿರ್ಧಾರದೊಂದಿಗೆ ನಾನೆ ಅಧ್ಯಕ್ಷನಾಗಿರಲು ನಿರಾಕರಿಸಿದ್ದೇನೆ'' - ನಟ ಚೇತನ್

  ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ: ಹಿಂದಿದ್ಯಾ ಷಡ್ಯಂತ್ರ, ಪ್ರತೀಕಾರ.?

  ಪ್ರಿಯಾಂಕಾಗೆ ಧೈರ್ಯ ಇರಲಿಲ್ವಂತೆ.!

  ''ದುರದೃಷ್ಟವಶಾತ್, ನಮ್ಮ ಹಿಂದಿನ ಅಧ್ಯಕ್ಷರಿಗೆ ಕಾರ್ಯದಕ್ಷತೆ, ಸಾಮರ್ಥ್ಯ, ಒಳಗೊಳ್ಳುವಿಕೆ, ಮತ್ತು ಜವಾಬ್ದಾರಿಯುತವಾಗಿ FIRE ನ್ನು ಮುನ್ನಡೆಸುವ ಧೈರ್ಯ ಇರಲಿಲ್ಲ'' - ನಟ ಚೇತನ್

  ವೈಯುಕ್ತಿಕ ಇಚ್ಛೆ.!

  ''ಸೈದ್ಧಾಂತಿಕ ಭಿನ್ನತೆಗಳ ಕಾರಣದಿಂದಾಗಿ, ದಿಲೀಪ್ ರವರನ್ನು ಕೆಲವು ವರ್ಷಗಳಿಂದ ಬಲ್ಲೆ ಎನ್ನುವ ಕಾರಣಕ್ಕಾಗಿ (ಅದು ಅವರ ವೈಯುಕ್ತಿಕ ಇಚ್ಚೆ) AMMA ದಲ್ಲಿ ಅಪಹರಣ ಮತ್ತು ಕಿರುಕುಳದ ಪುನರುತ್ಥಾನದ ವಿರುದ್ಧ ಅವರು ವಸ್ತುನಿಷ್ಠವಾಗಿ ನಿಲ್ಲಲು ಸಾಧ್ಯವಿಲ್ಲವಾದ್ದರಿಂದ ಅವರು ರಾಜೀನಾಮೆ ನೀಡಿದರು'' - ನಟ ಚೇತನ್

  ಮಾಧ್ಯಮದ ಪ್ರಶ್ನೆಗಳಿಗೆ ಇದು ಉತ್ತರ

  ''ಹಲವಾರು ತಿಂಗಳುಗಳಿಂದ ಅಧ್ಯಕ್ಷ ಹುದ್ದೆಯನ್ನು ಅವರು ನಿಭಾಯಿಸುತ್ತಿಲ್ಲ. FIRE ಗೆ ಸಂಬಂಧಿಸಿದ ವಿಷಯಗಳ ಕುರಿತಾಗಿ ಸಂಪರ್ಕದಲ್ಲಿರುವುದನ್ನು ಅವರು ಬಿಟ್ಟುಬಿಟ್ಟಿದ್ದರು. ಮಾಧ್ಯಮ ಕೇಳುತ್ತಿರುವ ಪ್ರಶ್ನೆಗಳಿಗೆ ಇದು ಕೆಲವು ಉತ್ತರಗಳು. ದಿನದಿಂದ ದಿನಕ್ಕೆ FIRE ಸಂಸ್ಥೆಯು ಬೆಳೆಯುತ್ತಿದೆ ಮತ್ತು ಸುರಕ್ಷಿತ, ಆರೋಗ್ಯಕರ ಚಲನಚಿತ್ರರಂಗವನ್ನು ಕಟ್ಟುವ ಕೆಲಸಕ್ಕಾಗಿ ಸದಾ ಮುಂದಿರುತ್ತದೆ. ನಮ್ಮ ಹೋರಾಟಗಳನ್ನು ಮುಂದುವರಿಸುತ್ತೇವೆ'' - ನಟ ಚೇತನ್

  English summary
  Priyanka Upendra din't have capacity, courage to take FIRE forward says Chethan

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more